ಹುದ್ದೆಯಿಂದ ನಿರ್ಗಮಿಸಿದ ಕ್ರಿಸ್ಟ್ಜೆನ್ ನೀಲ್ಸೆನ್

ವಾಷಿಂಗ್ಟನ್, ಏ.8- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಒಳನಾಡು ಭದ್ರತಾ ಮುಖ್ಯಸ್ಥೆ  ಕ್ರಿಸ್ಟ್ಜೆನ್ ನೀಲ್ಸೆನ್ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ. ದೇಶದ ದಕ್ಷಿಣ ಭಾಗದ ಗಡಿಯಿಂದ ಅಕ್ರಮ ನುಸುಳುವಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಕಂಡುಬಂದಿದೆ. 

ಅಧ್ಯಕ್ಷರ ವಿವಾದಾತ್ಮಕ ನೀತಿಗಳು ಮತ್ತು ಕಾರ್ಯವೈಖರಿ ಬಗ್ಗೆ ಮೊದಲಿನಿಂದಲೂ ನೀಲ್ಸೇನ್ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಯೋಜನೆಗಳು ಮತ್ತು ನೀತಿಗಳಿಗೆ ಸಹಕಾರ ನೀಡುತ್ತಿಲ್ಲ ಎಂದು ಟ್ರಂಪ್ ಕೆಲವು ದಿನಗಳಿಂದಲೂ ಭದ್ರತಾ ಮುಖ್ಯಸ್ಥೆ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದರು. 

ಹೋಮ್ಲ್ಯಾಂಡ್ ಸೆಕ್ರೆಟರಿ ಕ್ರಿಸ್ಟ್ಜೆನ್ ನೀಲ್ಸೆನ್ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ ಎಂದು ಟ್ರಂಪ್ ಹೇಳುವ ಮೂಲಕ ತಮ್ಮ ವಲಸೆ ನೀತಿ ವಿಷಯದಲ್ಲಿ ಯಾವುದೇ ಕಠಿಣ ನಿಲುವು ಕೈಗೊಳ್ಳಲು ತಾವು ಸಿದ್ದ ಎಂಬುದನ್ನು ಸ್ಪಷ್ಟಪಡಿಸಿದ್ಧಾರೆ. 

ಅಮೆರಿಕ-ಮೆಕ್ಸಿಕೋ ನಡುವೆ ಗಡಿ ಗೋಡೆ ನಿರ್ಮಿಸಲು  ಅಧ್ಯಕ್ಷರು ಸಜ್ಜಾಗುತ್ತಿರುವ ಸಂದರ್ಭದಲ್ಲೇ ದೇಶದ ದಕ್ಷಿಣ ಭಾಗದ ಗಡಿಯಲ್ಲಿ ಅಕ್ರಮವಾಗಿ ವಲಸಿಗರು ನುಸುಳುವಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಟ್ರಂಪ್ ಗರಂ ಆಗಿದ್ದಾರೆ.