27ರಿಂದ ಚಿಂತಾಮಣ್‌ರಾವ್ ಶಾಲೆಯ ಶತಮಾನೋತ್ಸವ ಸಮಾರಂಭ ಸಮಾರೋಪ

27ರಿಂದ ಚಿಂತಾಮಣ್‌ರಾವ್ ಶಾಲೆಯ ಶತಮಾನೋತ್ಸವ ಸಮಾರಂಭ ಸಮಾರೋಪ Chintaman Rao School centenary celebrations to conclude on 27th

 

ಬೆಳಗಾವಿ 24: ಶಹಾಪೂರದಲ್ಲಿರುವ ಸರ್ಕಾರಿ ಚಿಂತಾಮಣ್ ರಾವ್ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭ ಡಿಸೆಂಬರ್ 27 ಮತ್ತು 28 ರಂದು ಜರುಗಲಿದೆ ಎಂದು ಶಾಸಕ ಅಭಯ್ ಪಾಟೀಲ್ ಅವರು ತಿಳಿಸಿದರು.  ಸರ್ಕಾರಿ ಚಿಂತಾಮಣ್ ರಾವ್ ಶಾಲೆಯ ಅಡಿಟೋರಿಯಮ್ ಹಾಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೊದಲೂ ಮರಾಠಿ, ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿದ್ದ ಶಾಲೆ ಈಗ ದ್ವಿತೀಯ ಪಿಯುಸಿ ವರೆಗೆ ಉನ್ನತಿಯನ್ನು ಪಡೆದಿದೆ. ಸ್ವಾತಂತ್ರ್ಯಪೂರ್ವದಿಂದ 2003ರ ವರೆಗೆ ಬೆಳಗಾವಿಯಲ್ಲಿ ಕೇವಲ ಮೂರೇ ಸರ್ಕಾರಿ ಹೈಸ್ಕೂಲೂಗಳಿವೆ ಎಂದು ಅವರು ಹೇಳಿದರು. 

ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕಳೆದ 3 ವರ್ಷದ ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಚಾಲನೆ ನೀಡಲಾಗಿತ್ತು. ಈಗ ಡಿಸೆಂಬರ್ 27 ಮತ್ತು 28 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಮಹಾಪೌರ ಮಂಗೇಶ್ ಪವಾರ್, ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಉಪಸ್ಥಿತರಿರಲಿದ್ದಾರೆ. ಡಿ.27 ರಂದು ಬೆಳಿಗ್ಗೆ 10.30 ರಿಂದ ಸಂಜೆ 6 ರ ವರೆಗೆ ಹಳೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 28 ರಂದು ಬೆಳಿಗ್ಗೆ 10.30ಕ್ಕೆ ಶಾಲೆಗೆ ತಮ್ಮ ಖಾಸಗಿ ಕಾರ್ಯಾಲಯವನ್ನು ನೀಡಿದ ಸಾಂಗಲಿಯ ಚಿಂತಾಮಣರಾವ್ ಪಟವರ್ಧನ್ ಮಹಾರಾಜರ ಮೂರ್ತಿಯ ಲೋಕಾರೆ​‍್ಣ ನಡೆಯಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ನಗರಸೇವಕ ಗೀರೀಶ್ ಧೋಂಗಡಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು. 

ಶಾಲೆಯ ಇತಿಹಾಸ ; ಶಹಾಪುರ ನಗರವು ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಗ್ಲಿ ಸಂಸ್ಥಾನಿಕರಿಂದ ಆಳಲ್ಪಡುತ್ತಿತ್ತು. ಶ್ರೀಮಂತ ರಾಜಸಾಹೇಬ ಶ್ರೀ ಚಿಂತಾಮಣರಾವ್ ಪಟವರ್ಧನ ಹಾಗೂ ರಾಣಿ ಸರಸ್ವತಿ ದೇವಿ ಪಟವರ್ಧನ ಎಂಬುವವರು ಆಳುತ್ತಿದ್ದರು. ರಾಜ್ಯದ ಜನತೆಯಮತ್ತು ಪ್ರಗತಿಯ ಬಗ್ಗೆ ಕಳಕಳಿ ಹೊಂದಿದ್ದ ಇವರು ಉತ್ತಮ ಶಿಕ್ಷಣ ನಿಡುವ ಉದ್ದೇಶ ಹೊಂದಿದ್ದರು. ಈ ಮನೋಭಾವನೆಯ ಫಲವಾಗಿ  ಕ್ರಿ.ಶ. 1914ರಲ್ಲಿ ಚಿಂತಾಮಣರಾವ ಪ್ರೌಢಶಾಲೆ ಗಂಡು ಮಕ್ಕಳಿಗಾಗಿ, ಮತ್ತು ಹೆಣ್ಣು ಮಕ್ಕಳಿಗಾಗಿ ಸರಸ್ವತಿ ಪ್ರೌಢಶಾಲೆ ಆರಂಭವಾಯಿತು. ನಂತರ ಆಂಗಲೋ ವರ್ನಾಕೂಲ ಶಾಲೆಯಾಗಿ 1ರಿಂದ 5ನೇ ತರಗತಿಯನ್ನು ಹೊಂದಿತ್ತು. ದಿ. ರಘುನಾಥ ಕುಲಕರ್ಣಿ ಪ್ರಥಮ ಮುಖ್ಯೋಪಾಧ್ಯಾಯರಾಗಿ ಶಾಲಾಭಿವೃದ್ಧಿಯಲ್ಲಿ ಮಹತ್ವ ಪಾತ್ರ ವಹಿಸಿದ್ದರು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರ್ದಾರ ಹೈಸ್ಕೂಲ ಅಥವಾ ಬೆನನ್‌ಸ್ಮಿತ್ ಶಾಲೆಗಳಿಗೆ ಹೋಗಬೇಕಾಗಿತ್ತು. ಈ ತೊಂದರೆ ಕಂಡು ಶ್ರೀಮಂತ ರಾಜಸಾಹೇಬರು ವಿದ್ಯಾರ್ಥಿಗಳಿಗಾಗಿ ಪ್ರೌಢಶಾಲೆಯನ್ನು ಆರಂಭಿಸಲು ಅನುಮತಿ ನೀಡಿದರು.

ಕ್ರಿ.ಶ. 1920-21ರಲ್ಲಿ ಚಿಂತಾಮಣರಾವ್ ಪ್ರೌಢಶಾಲೆ ಅಸ್ತಿತ್ವಕ್ಕೆ ಬಂದಿತು. 1945-46ರಲ್ಲಿ ಈ ಸಂಸ್ಥೆಯ ಬೆಳ್ಳ ಹಬ್ಬವನ್ನು ಆಚರಿಸಿದ್ದು, ಅದರ ಸವಿನೆನಪಿಗಾಗಿ ಸಭಾಭವನ ನಿರ್ಮಿಸಲ್ಪಟ್ಟಿದ್ದು, ಉದ್ಘಾಟನೆಯನ್ನು ಚಿಂತಾಮಣರಾವ್ ಪಟವರ್ಧನ ಅವರು ನೆರವೇರಿಸಿದರು.ಈ ಕಟ್ಟಡಕ್ಕೆ 2500 ರೂ. ದಾನ ನೀಡಿದ ದಾಮೋದರ ರಾಮಣ್ಣ ಅನಗೋಳಕರ ಅವರ ಹೆಸರನ್ನು ಇಡಲಾಗಿದೆ. 1965ರಲ್ಲಿ ಈ ಸಂಸ್ಥೆಯನ್ನು ಆಗಿ ಮೈಸೂರು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಅಂದಿನಿಂದ ಸರ್ಕಾರಿ ನಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. 1995-96ರಲ್ಲಿ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ದಿ. ಆಶಾಬಾಯಿ ಪೋತದಾರ ಹಾಗೂ ಶಿಕ್ಷಣ ತಜ್ಞ ದಿ. ಕೆ.ಆರ. ವಾಳ್ವೇಕರ ಪ್ರಯತ್ನದ ಫಲವಾಘಿ 1973ರಲ್ಲಿ ಪದವಿ ಪೂರ್ವ ಮಹಾವಿದ್ಯಾಲಯವಾಗಿ ಕಂಗೊಳಿಸಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.