ಚಿಂತಾಮಣ್‌ರಾವ್ ಶಾಲೆಯ ಶತಮಾನೋತ್ಸವ : ವಿದ್ಯಾರ್ಥಿಯಾದ ಶಾಸಕ ಅಭಯ್
Chintaman Rao School Centenary: MLA Abhay, a student
ಬೆಳಗಾವಿ : ಚಿಂತಾಮಣ್‌ರಾವ್ ಶಾಲೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳ ಹಳೆಯ ನೆನಪು ಮೆಲಕು ಹಾಕುವಂತೆ ಮಾಡಿತು. ಶಾಲೆಯ ಬೆಲ್ ಶಬ್ದ ಕೇಳುತ್ತಿದ್ದಂತೆಯೇ ಹೃದಯದಲ್ಲಿ ಏನೋ ಕಂಪನವಾಯಿತು. ಕ್ಲಾಸ್‌ರೂಮ್‌ನ ಚಾಕ್‌ನ ಧೂಳು, ಪೆನ್ನಿನ ಸದ್ದು, ಮಾತಿನ ಮಧ್ಯೆ ನಗು, ಕಣ್ಣಂಚಿನ ಕನಸು. ಈ ಎಲ್ಲವೂ ಶನಿವಾರ ಮತ್ತೆ ಜೀವಂತವಾಯಿತು. ಕಾರಣ, ಶಹಾಪುರದ ಹೆಮ್ಮೆ ಚಿಂತಾಮಣ್‌ರಾವ್ ಸರ್ಕಾರಿ ಶಾಲೆ ತನ್ನ ನೂರು ವರ್ಷದ ಪಯಣವನ್ನು ನೆನಪುಗಳ ಮಹೋತ್ಸವವಾಗಿ ಆಚರಿಸಿತು.
ಶನಿವಾರ ಚಿಂತಾಮಣ್‌ರಾವ್ ಸರ್ಕಾರಿ ಶಾಲೆ ತನ್ನ ನೂರು ವರ್ಷದ ಈ ಸಂಭ್ರಮಕ್ಕೆ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲರು ಆತ್ಮ ತುಂಬಿದರು. ಒಂದು ದಿನ ನಾನು ಶಾಸಕನಲ್ಲ, ನಾನು ಮತ್ತೆ ವಿದ್ಯಾರ್ಥಿ ಎಂಬ ಕಲ್ಪನೆಯೊಂದಿಗೆ ಬೆಳಿಗ್ಗೆ ಮನೆ ಬಾಗಿಲು ತೆರೆದ ಕ್ಷಣದಿಂದಲೇ ಅಭಯ್ ಪಾಟೀಲರು ಶಾಸಕರಲ್ಲ, ಅವರು ಚಿಂತಾಮಣ್‌ರಾವ್ ಶಾಲೆಯ ವಿದ್ಯಾರ್ಥಿ ಎಂಬಂತೆ ಕಂಡು ಬಂದರು. ಹೆಗಲಿಗೊಂದು ಪಾಠಿಚೀಲ, ದೇಹದ ಮೇಲೆ ಹಳೆಯ ಶೈಲಿಯ ಸಮವಸ್ತ್ರ, ಮುಂಭಾಗದಲ್ಲಿ ಸೈಕಲ್. ಅದೇ ಅವರ ಕಾಲಯಂತ್ರ. ಶಾಲೆಗೆ ಹೊರಡುವ ಮುನ್ನ ನಾರ್ವೇಕರ ಗಲ್ಲಿಯ ರವಿ ಅಂಗಡಿಗೆ ನಿಂತು, ಹಳೆಯ ನಾಣ್ಯಗಳನ್ನು ಕೈಯಲ್ಲಿ ಹಿಡಿದು ಪೇಪರ್‌ಮೆಂಟ್, ನೀಲಂ ಸುಪಾರಿ, ಚಾಕಲೇಟ್ ಖರೀದಿಸಿದ ಕ್ಷಣ ಕಂಡು ಬಂದಿತು. ಈ ವೇಳೆ ಶಹಾಪೂರವೇ ಒಂದು ದೊಡ್ಡ ತರಗತಿಯಾಗಿ ಮಾರ್ಪಟಟಿತ್ತು.
ಅಂಗಡಿಯಲ್ಲೊಂದು ಕಾಲಪ್ರಯಾಣ ಅದು ಕೇವಲ ಖರೀದಿ ಅಲ್ಲ, ಅದು ಬಾಲ್ಯದ ಕಿಟಕಿ ತೆರೆದ ಕ್ಷಣ. “ಇದೇ ಅಂಗಡಿಯೇ 1985ರಲ್ಲಿ ನಮ್ಮ ಕನಸುಗಳ ತಾಣವಾಗಿತ್ತು. ಇವತ್ತೂ ಅದೇ ನಾಣ್ಯಗಳಿಂದ ಖರೀದಿ ಮಾಡಿದ್ದೇನೆ. ಅದು ಬದುಕಿನ ಅಮೂಲ್ಯ ಕ್ಷಣ ಎಂದು ಅಭಯ್ ಪಾಟೀಲ್ ಹೇಳಿದರು. ಬೀದಿಗಳಲ್ಲಿ ಹರಿದ ಬಾಲ್ಯದ ಸಂಗೀತ ಸರಸ್ವತಿ ಶಾಲೆ ರಸ್ತೆ, ಖಡೇ ಬಜಾರ್, ಮೀರಾಪುರ ಗಲ್ಲಿಯ ಸೈಕಲ್ ಚಕ್ರಗಳ ಸದ್ದು, ಗೆಳೆಯರ ನಗು, ಹಳೆಯ ಮನೆಗಳ ನೆರಳು, ಎಲ್ಲವೂ ಸೇರಿ ಒಂದು ಚಿತ್ರಕಥೆಯಂತೆ ಭಾಸವಾಯಿತು.
ಚಿಂತಾಮಣ್‌ರಾವ್ ಶಾಲೆಯ ಬಾಗಿಲು ದಾಟುತ್ತಿದ್ದಂತೆಯೇ ಶಾಸಕ ಅಭಯ್ ಪಾಟೀಲ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಶಾಲೆಯ ಜನಗಣಮನ ರಾಷ್ಟ್ರಗೀತೆ ಕೇಳುತ್ತಿದ್ದಂತೆಯೇ ಕಣ್ಣಲ್ಲಿ ನೀರು ಬಂದವು. ಪ್ರಾಥನೆ, ರಾಷ್ಟ್ರಗೀತೆ, ಬೆಲ್, ಶಿಕ್ಷಕಿ ನೀಲಗಂಗಾ ಚರಂತಿಮಠ ಹಾಜರಿ ತೆಗೆದುಕೊಳ್ಳುತ್ತಿದ್ದಂತೆ ಎಲ್ಲರೂ ಎದ್ದು “ನಮಸ್ತೆ ಟೀಚರ್” ಎಂದ ಕ್ಷಣದಲ್ಲಿ ಹಳೆಯ ವಿದ್ಯಾರ್ಥಿಗಳ ಹೃದಯದಲ್ಲಿ ವರ್ಷಗಳ ಮೌನ ಒಡೆದಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 