ವಾಷಿಂಗ್ಟನ್: ಚೀನಾ ಸದ್ದಿಲ್ಲದೆ ಡೋಕ್ಲಾಮ್ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರೆಸಿದೆ. ಆದರೆ ಭಾರತ ಅಥವಾ ಭೂತಾನ್ ಅದನ್ನು ನಿರಾಕರಿಸಲು ಯತ್ನಿಸುತ್ತಿವೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲೂ ಚೀನಾದ ಕಾರ್ಯಗಳು ಮತ್ತು ಅದರ ತಂತ್ರಗಳು ಹೆಚ್ಚುತ್ತಿದ್ದು, "ಭಾರತ ತನ್ನ ಉತ್ತರದ ಗಡಿಯನ್ನು ಬಲವಾಗಿ ಸಮರ್ಥಿಸುತ್ತಿದೆ ಎಂದು ನಾನು ನಿರ್ಣಯಿಸುತ್ತೇನೆ ಮತ್ತು ಇದು ಭಾರತಕ್ಕೆ ಕಾಳಜಿಯ ವಿಷಯವಾಗಿದೆ ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಉಪ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ ವೆಲ್ಸ್ ಅವರು ಹೇಳಿದ್ದಾರೆ
ಭಾರತದ ಗಡಿ ಪ್ರದೇಶಗಳಲ್ಲಿ ಚೀನಾ ರಸ್ತೆಗಳನ್ನು ನಿರ್ಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವೆಲ್ಸ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಭಾರತ ಮತ್ತು ಚೀನಾ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದ್ದ ಡೊಕ್ಲಾಮ್ ಗಡಿ ಬಿಕ್ಕಟ್ಟು ಇತ್ತೀಚಿಗಷ್ಟೇ ಅಂತ್ಯಗೊಂಡಿತ್ತು. ಎರಡು ತಿಂಗಳು ನಿರಂತರ ಘರ್ಷಣೆಯ ಬಳಿಕ ಗಡಿಯಿಂದ ಎರಡೂ ಕಡೆಯ ಸೇನೆಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಸಾರ್ವಭೌಮತ್ವ ಹೊಂದಿದೆ ಎಂದು ಚೀನಾ ವಾದಿಸುತ್ತಿದೆ. ಆದರೆ ಚೀನಾ ವಾದಕ್ಕೆ ವಿಯೆಟ್ನಾಮ್, ಮಲೇಷಿಯಾ, ಫಿಲಿಪೈನ್ಸ್, ಬ್ರೂನಿ ಮತ್ತು ತೈವಾನ್ ಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.