ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವಂತರಾಗಬೇಕು : ನಿಜಲಿಂಗಪ್ಪ ಬಸೇಗಣ್ಣಿ
Children should become cultured along with education: Nijalingappa Baseganni
ಬ್ಯಾಡಗಿ 04 : ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವಂತರಾಗಬೇಕು ಎಂದು ಪ್ರಗತಿಪರ ರೈತರು, ಶಿಕ್ಷಣ ತಜ್ಞರಾದ ನಿಜಲಿಂಗಪ್ಪ ಬಸೇಗಣ್ಣೆ ಹೇಳಿದರು. ತಾಲೂಕಿನ ಮೋಟೇಬೆನ್ನೂರು ಕ್ಲಸ್ಟರ್ ಮಟ್ಟದ ’ಎಫ್ ಎಲ್ ಎನ್ ಕಲಿಕಾ ಹಬ್ಬ’ ವನ್ನು ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಮಕ್ಕಳ ಸಂಖ್ಯೆ ಇದೇ ರೀತಿ ಕಡಿಮೆಯಾದರೆ ಸರ್ಕಾರಿ ಶಾಲೆಗಳು ಇಲ್ಲದಂತೆ ಆಗುತ್ತವೆ. ಒಂದು ವೇಳೆ ಸರ್ಕಾರಿ ಶಾಲೆಗಳು ಕಣ್ಮರೆಯಾದರೆ ಶಿಕ್ಷಣವನ್ನು ಹಣ ಕೊಟ್ಟು ತೆಗೆದುಕೊಳ್ಳಲು ಬಡವರಿಗೆ ಸಾಧ್ಯವಾಗುವುದಿಲ್ಲ.ಸಂಸ್ಕೃತಿ ನಾಶವಾಗುತ್ತದೆ. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಪ್ರಯತ್ನ ಮಾಡಬೇಕು ಎಂದರು.
ಕೇವಲ ಕಟ್ಟಡಗಳು ಇದ್ದರೆ ಸಾಲದು;ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುವಂತಾಗಲು ಶಿಕ್ಷಕರೊಂದಿಗೆ ಸಮಾಜ ಕೈ ಜೋಡಿಸಬೇಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರಿಗೆ ಪಾಠ ಬೋಧನೆಗಿಂತ ಅನ್ಯ ಕಾರ್ಯಗಳ ಒತ್ತಡ ಹೆಚ್ಚಾಗಿದ್ದು, ಸರಕಾರ ಶಿಕ್ಷಕರನ್ನು ಪಾಠ ಮಾಡಲು ಬಿಡಬೇಕೆಂದರು.ಸರಕಾರ ಹಲವು ಕಾರ್ಯಕ್ರಮಗಳನ್ನು ಶಾಲಾ ಶಿಕ್ಷಣ ಇಲಾಖೆ ಮೂಲಕ ತರಲು ಪ್ರಯತ್ನ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾದರು ಸಹ ಬಡಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೊಡೆತ ಬೀಳುವಂತಹ ವಾತಾವರಣ ಇದರಿಂದ ಸೃಷ್ಟಿಯಾಗಿದೆ. ಈ ಬಗ್ಗೆ ಸರಕಾರ ಚಿಂತನೆ ಮಾಡಿ, ಶಿಕ್ಷಕರನ್ನು ಪಾಠ ಮಾಡಲು ಅನುಕೂಲ ಮಾಡಿಕೊಡಬೇಕೆಂದರು. ಸರಕಾರಿ ಶಾಲೆಗಳ ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಇದೆ. ಸ್ವಂತಿಕೆಗೆ ಇದೆ. ಸಮೂಹದಲ್ಲಿ ಹೇಗೆ ವರ್ತನೆ ಮಾಡಬೇಕೆಂಬ ಜ್ಞಾನ ಇದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಗಿಡದ ಹಸಿರೆಲೆಯನ್ನು ತರಲು ಹೇಳಿದರೆ,
ಅವರು ಟೊಂಗೆಯನ್ನು ತರುವಂತಹ ಅದ್ಭುತವಾದ ಶಕ್ತಿಯುಳ್ಳವರಾಗಿದ್ದಾರೆ. ದೈನಂದಿನ ಬದುಕಿನಲ್ಲಿ ನಾವು ಹೇಗೆ ವರ್ತಿಸಬೇಕೆಂದು ಕಲಿತಿರುತ್ತಾರೆ. ಇದನ್ನೆ ಖಾಸಗಿ ಶಾಲೆಗಳ ಮಕ್ಕಳಿಗೆ ಹೋಲಿಸಿದರೆ ಇಂತಹ ಸೌಜನ್ಯದ ಗುಣಗಳನ್ನು ಸಮಾಜ ಕಾಣಲಾರದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಸಮಾಜ-ಶಿಕ್ಷಕ-ಅಧಿಕಾರಸ್ಥರು ಶ್ರಮಿಸಬೇಕಾಗಿದೆ. ಮುಖ್ಯವಾಗಿ ಶಿಕ್ಷಕರನ್ನು ಪಾಠ ಮಾಡಲು ಬಿಡಬೇಕಾಗಿದೆ ಎಂದರು. ಎಫ್ ಎಲ್ ಎನ್ ಒಂದು ಇಲಾಖೆಯ ಒಳ್ಳೆಯ ಉಪಕರಣವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹೊಂದಿರುವ ಮಕ್ಕಳಿಗಾಗಿ ಇರುವ ಉಪಕ್ರಮವಾಗಿದೆ. ಈ ಕಲಿಕಾ ಹಬ್ಬದಲ್ಲಿ ಆರಂಭಿಕ ಹಂತದ ಮಕ್ಕಳಿಗೆ ಅವಕಾಶ ಮಾಡಿಕೊಡುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದರು. ಬುದ್ಧಿವಂತ ಮಕ್ಕಳಿಗೆ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು, ಕಲಿಕೋತ್ಸವ ಸೇರಿದಂತೆ ಅನೇಕ ಸ್ಪರ್ಧೆಗಳು ಇವೆ.
ಆದರೆ ಆರಂಭಿಕ ಹಂತದ ಮಕ್ಕಳಿಗಾಗಿ ಇರುವ ಏಕೈಕ ಉಪಕ್ರಮ ಇದಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಯೋಚಿಸಬೇಕಾಗಿದೆ ಎಂದರು.ಜೊತೆಗೆ ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವ ನೈತಿಕ ಮೌಲ್ಯಗಳನ್ನು ಬಾಲ್ಯದಲ್ಲಿಯೇ ತುಂಬಬೇಕಾಗಿದೆ ಎಂದರು. ಸರಕಾರಿ ಶಾಲೆಗಳು ದೇವಾಲಯಗಳಿದ್ದಂತೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಮಾಜ ಕೈ ಜೋಡಿಸಬೇಕಾಗಿದೆ. ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಮಾತನಾಡುತ್ತ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಮಕ್ಕಳು ಎಫ್ ಎಲ್ ಎನ್ ಸಾಧಿಸಿದ ಮಕ್ಕಳು ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪರಿಶ್ರಮ ವಹಿಸಿ ಕಾರ್ಯನಿರ್ವಹಿಸಬೇಕೆಂದರು. ಎಫ್ ಎಲ್ ಎನ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೆಚ್ಚಿನ ಅವಕಾಶಗಳು ಕಲ್ಪಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ಪ್ರಶಾಂತ ಹೊಸಮನಿ ವಹಿಸಿದ್ದರು. ಬಿ ಸಿ ಎಮ್ ಇಲಾಖೆಯ ರಾಘವೇಂದ್ರ ವಿಠಲಕರಿ್ಪ ಡಿ ಓ ಬಸನಗೌಡ ಪಾಟೀಲ,ಕವಿತಾ ಪಾಟೀಲ ರವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಕರಬಸಪ್ಪ ಆನ್ವೇರಿ, ಮಲ್ಲಿಕಾರ್ಜುನಗೌಡ ಪಾಟೀಲ, ಶ್ರುತಿ ಲಮಾಣಿ, ರಾಜೇಶ್ವರಿ ಡಾವಣಗೇರಿ, ಶಿಲ್ಪಾ ಆನವಟ್ಟಿ, ನೇತ್ರಾವತಿ ಯತ್ನಳ್ಳಿ, ವಿ ಡಿ ಅಕ್ಕೂರ, ಸಿ ಎನ್ ಕರಿಯಪ್ಪನವರ, ಸಿ ಆರ್ ಪಿ ಯಶವಂತಕುಮಾರ, ಯಲ್ಲಪ್ಪ ರ್ಯಾವಣ್ಣನವರ, ಮಂಗಳಾ ಶಿಗ್ಗಾವಿ, ಎನ್ ಬಿ ಅಬಲೂರು, ಚೈತ್ರಾರಾವ್ ಟಿ ಎಸ್, ಚೈತ್ರ ಕೆ ಎಮ್, ಡಿ ಜಿ ಕಮದೋಡ, ಸುನಿತಾ ಟಿ, ಹೊನ್ನಪ್ಪ ತಳವಾರ, ಕೆ ಎಸ್ ಪಾಟೀಲ, ಕವಿತಾ ಪಾಟೀಲ, ಮಲ್ಲಪ್ಪ ನೆರ್ತಿ, ಎಲಿ, ಸರೋಜಾ ಎಲಿವಾಳ,ಕೆ ಯು ಶಿವಪೂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಲ್ಲಪ್ಪ ಫ ಕರೇಣ್ಣನವರ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 