ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಸಂಸ್ಕಾರ , ಮಾನವೀಯ ಮೌಲ್ಯ ಮನೋಭಾವ ಬೆಳಿಸಬೇಕು : ಅದ್ಯಕ್ಷ ಎಸ್.ಡಿ.ಕುಮಾನಿ
Children should be given quality education along with culture and human values: President S.D. Kuma
ತಾಂಬಾ 24 : ಶಿಕ್ಷಣ ಸಂಸ್ಥೆಗಳು ಮಕ್ಕಳ ಪ್ರತಿಭೆಗಳನ್ನು ಹೆಕ್ಕಿ ತಗೆಯುವ ಕಾರ್ಯ ನಿರಂತರವಾಗಿ ಮಾಡುತ್ತವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವ ಮನೋಭಾವ ಬೆಳಿಸಬೇಕು ಎಂದು ಶಿವಶರಣೆ ನಿಂಬೆಕ್ಕ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅದ್ಯಕ್ಷ ಎಸ್.ಡಿ.ಕುಮಾನಿ ಹೆಳಿದರು.
ಹೊನ್ನಳ್ಳಿ ಗ್ರಾಮದ ಡಿ.ಎಮ್.ಕುಮಾನಿ ಪದವಿ-ಪೂರ್ವ ಮಾಹಾವೀದ್ಯಾಲಯ ಹಾಗೂ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಪಿಯುಸಿ ದ್ವಿತಿಯ ವರ್ಷದ ಹಾಗೂ ಎಸ್‌ಎಸೆಲ್‌ಸಿ ವಿದ್ಯಾರ್ಥಿತಿಗಳ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮನೆಹೇ ಮೋದಲ ಪಾಠ ಶಾಲೆ ಎಂಬ ಮಾತಿನಂತೆ ತಂದೆ-ತಾಯಿಗಳು ಮಕ್ಕಳಿಗೆ ಮನೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕು ಮಕ್ಕಳ ಕೈಯಲ್ಲಿ ಪಾಲಕರು ಮೋಬೈಲ್ ನೀಡಬಾರದು. ಜೋತೆಗೆ ಮಕ್ಕಳ ಮುಂದೆಯು ಪಾಲಕರು ಮೋಬೈಲ್ ನೊಡುವದನ್ನು ಆದಷ್ಟು ಕಡಿಮೆ ಮಾಡಬೇಕು ಎಂದರು.
ವೇದಮೂರ್ತಿ ಶಿವಮೋರ್ತಿಯ್ಯ ಹಿರೇಮಠ ಸಾನಿದ್ಯ ವಹಿಸಿದ್ದರು. ಶಿವಾನಂದ ಹಿರೇಮಠ, ಯೋಗೇಶ ಬೋಳೆಗಾವ, ಶಿವಾನಂದ ಮೇತ್ರಿ, ಆರ್.ವ್ಹಿ.ಬಿಂಗೆ, ಬೀಮರಾಯ ತಳವಾರ, ಧರೇಪ್ಪ ಕಡಕೊಳ, ಅಶೋಕ ಹೊನ್ನಳ್ಳಿ, ಎಸ್.ಎಮ್.ಮಣಿಯಾರ, ಜಿ.ಕೆ.ಜಾಗಿರದಾರ, ಬಿ.ಜೆ.ಗರೆಬಾಳ, ಜೆ.ಎಮ್.ಹೊನ್ನಳಿ, ಸಿ.ಎಸ್.ಗೊಗಿ, ಬಿ.ಆರ್.ಲಾಳಿ, ವ್ಹಿ.ಎಸ್.ಕುಮಾನಿ ಮತ್ತಿತರರು ಇದ್ದರು. ಮುಖ್ಯ ಗುರುಗಳಾದ ಎಸ್.ಎಮ್.ಪಾಠಕ್, ಶಿಕ್ಷಕ ಎಚ್.ಪಿ.ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 