ದಾಂಡೇಲಿ 14: ನಗರದ ಸರ್ವತೋಮುಖ ವಿಕಾಸ ಕೇಂದ್ರದ ಅಡಿಯಲ್ಲಿ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿ ನಡೆಯುತ್ತಿರುವ ವಿದ್ಯಾದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಚಂದ್ರಯ್ಯಾ ಅಂಧಾಕಾರಿಮಠ ದೇವರಿಗೆ ಸಮಾನರಾದ ಮುಗ್ಧ ಮಕ್ಕಳ ದಿನಾಚರಣೆಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಮಕ್ಕಳ ಪ್ರೀತಿಯ ಚಾಚಾ ನೆಹರುರವರ ಅಪೇಕ್ಷೆಯಂತೆ ಅವರ ಜನ್ಮ ದಿನವಾದ ನ.14 ನ್ನು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ನಮ್ಮ ಸಂಸ್ಥೆಯ ಮೂಲಕ ದಾಂಡೇಲಿಯಲ್ಲಿ ಮಕ್ಕಳ ಹಬ್ಬವೆಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುತಿತ್ತು ಅದರ ಪಯರ್ಾಯವಾಗಿ ಇಂದು ಮಕ್ಕಳಿಗಾಗಿ ಶಿಕ್ಷಕರಿಂದ ಸಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳುವ ಮೂಲಕ ಅವರ ಸಂತೋಷದಲ್ಲಿಯೇ ನಾವು ತೃಪ್ತರಾಗಿದ್ದು ಅವಿಸ್ಮರಣೀಯ ಎಂದರು.
ದೇವಿ ಶಾರದೆಯ ಭಾವಚಿತ್ರದ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ಮಾರುತಿ ಕುಂಬಾರ, ಪರಶುರಾಮ ಬಡಿಗೇರ, ಶಿಕ್ಷಕಿಯರಾದ ಸುಮಿತ್ರಾ ಅಶೋಕ ಸುತಾರ, ನಾಗಿಣಿ ಅಂಧಾಕಾರಿಮಠ, ಮೋನಿಕಾ ಡಿಸೋಜಾ, ಸಹಾಯಕಿ ಸಕ್ಕುಬಾಯಿ ಭೀಮರಾವ ಸುತಾರ ಮತ್ತು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.