ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ: ನಾಡಗೌಡ
ಮುದ್ದೇಬಿಹಾಳ, 27: ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಗೀಳು ತಪ್ಪಿಸಲು ಗುಣಮಟ್ಟ ಶಿಕ್ಷಣದ ಜೊತೆಗೆ ದೈಹಿಕ ಸಾಮರ್ಥ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವ ಸ್ಕೇಟಿಂಗ್ ನಂತಹ ಕ್ರೀಡೆಗಳಲ್ಲಿ ಬಾಗವಹಿಸುವಂತೆ ಪ್ರೇರೇಪಿಸುವುದರೊಂದಿಗೆ ನಮ್ಮ ದೇಶದ ಪರಂಪರೆ, ಸಂಸ್ಕಾರ ನೀಡುವ ಮೂಲಕ ಎಲ್ಲ ರಂಗದಲ್ಲೂ ಪ್ರತಿನಿಧಿಸುವಂತೆ ಮಾಡಿ ಈ ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಶ್ರಮಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಇರುವ ಡಾ, ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿ ಸಂಜೆ ಕರ್ನಾಟಕ ರಾಜ್ಯ ಕರಾಟೆ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೇಗೆ ಆಯ್ಕೆಗೊಂಡ ಕ್ರೀಡಾಪುಟುಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸ್ಕೇಟಿಂಗ್ ಕ್ರೀಡೆ ಬಗ್ಗೆ ಹೆಚ್ಚು ಉಪಯುಕ್ತವಾಗಿದೆ ವಿದೇಶದಲ್ಲಿಯೂ ಕೂಡ ಕ್ರೀಡೆಗಳಲ್ಲಿ ಬಾಗವಹಿಸುವಂತಾಗಬೇಕು ಅದಕ್ಕೆ ಪೂರಕವಾದ ಅಗತ್ಯ ತರಬೇತುದಾರರ ಅಗತ್ಯಕೂಡ ಅಷ್ಟೇ ಮುಖ್ಯವಾಗಿರುತ್ತದೆ.ಸಧ್ಯ ಇಲ್ಲ್ಮಿಕ್ಕಳು ಸ್ಕೇಟೆಂಗ್ ಪ್ರದರ್ಶನ ನೋಡಿದರೇ ಮನಸ್ಸಿಗೆ ಸಂತೋಷವನ್ನುಂಟು ಮಾಡಿತು. ಮುದ್ದೇಬಿಹಾಳ ಪಟ್ಟಣದಲ್ಲಿ ಕರಾಟ ತರಬೇತಿ ಜೊತೆಗೆ ಸ್ಕೇಟಿಂಗ್ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಕ್ರೀಡಾ ಮನೋಭಾವ ಮೂಡಿಸುತ್ತಿರುವ ಶಿವಕುಮಾರ ಶಾರದಳ್ಳಿಯವರ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನಿಯ.
ಸಧ್ಯ ಪಟ್ಟಣದ ಮಕ್ಕಳಿಗೆ ಕ್ರೀಡಾಂಗಣದ ಅತ್ಯಂತ ಅವಶ್ಯಕವಾಗಿದೆ ಒತ್ತಾಯವೂ ಕೂಡ ಇದೇ ಈ ಹಿನ್ನೇಲೆಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿಯೇ ಸರಕಾರಿ ಜಾಗೆಯಲ್ಲಿ ಒಂದು ಒಳಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ರಾಮಯ್ಯನವರಲ್ಲಿ ಸುಮಾರು 10 ಕೋಟಿಗಳ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದೇನೆ ಅವರು ಕೂಡ ನಮ್ಮ ಬೇಡಿಕೆಗೆ ಸಕಾರಾತ್ಮಕ ಸ್ಪಂದಿಸಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಪಟ್ಟಣದೊಳಗೆ ಒಳಾಂಗಣ ಕ್ರೀಡಾಂಗಣ ಮತ್ತು ತಾಲೂಕಿನ ಬಿದರಕುಂದಿ ವ್ಯಾಪ್ತಿಯ ನಿಯೋಜಿತ ಸರಕಾರಿ ಜಾಗೆಯಲ್ಲಿ ಹೋರಾಂಗಣ ಕ್ರೀಡಾಂಗಣ ನಿರ್ಮಿಸುವ ಮೂಲಕ ನಮ್ಮ ಭಾಗದ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು.
ಅದರಂತೆ ನಮ್ಮ ಭಾಗದ ಕ್ರೀಡಾಪಟುಗಳಿಗೆ ಉತ್ತಿಜಿಸುವಲ್ಲಿ ವಿಜಯಪುರ ನಗರದಲ್ಲಿ ಕರಾಟೆ ಹಾಗೂ ಸ್ಕೇಟಿಂಗ್ ಕ್ರೀಡಾಕೂಡ ಹಮ್ಮಿಕೊಳ್ಳುವುದಾದರೇ ಜಿಲ್ಲಾ ಸಚೀವರನ್ನು ಸಂಪರ್ಕಿಸಿ ಅಗತ್ಯ ನೇರವು ನೀಡುವುದರೊಂದಿಗೆ ಸಹಾಯ ಸಹಕಾರ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಈ ವೇಳೆ ಜಿಲ್ಲಾ ಪಂಚಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿಯವರು ಮಾತನಾಡಿ ಯಾವೂದೇ ಫಲಾಪೇಕ್ಷೇಯಿಲ್ಲದೇ ನಮ್ಮ ಭಾಗದಲ್ಲಿ ಸ್ಕೇಟಿಂಗ್ ಕ್ರೀಡೆಗೆ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ವಿನೂತನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ತರಬೇತುದಾರ ಶಿವಕುಮಾರ ಶಾರದಳ್ಳಿ ಕ್ರೀಡಾಮನೋಭಾವನೆಗೆ ಸದಾಕಾಲ ಸ್ಪೂರ್ತಿಯಾಗಿ ನಿಲ್ಲುತ್ತೇನೆ. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರಿಡಾಪಟುಗಳಿಗೆ ಆರ್ಥಿಕ ಸಹಾಯ ಮಾಡುತ್ತೇನೆ ಇದರಿಂದ ಇತರೆ ಮಕ್ಕಳಲ್ಲಿಯೂ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.
ಫೆ, 8,9 ರಂದು ನಡೆಯಲಿರುವ ಅಂತರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ದೇಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ನೂರಾರು ಮಕ್ಕಳು ಸ್ಕೇಟಿಂಗ್ ಪ್ರದರ್ಶನ ನೀಡಿ ಜನಮೆಚ್ಚುಗೆಗೆ ವ್ಯಕ್ತವಾಯಿತು.
ತಹಶಿಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ, ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರತ ಸಂಘದ ರಾಜ್ಯ ವಕ್ತಾರ ಮೌನೇಶ ಎಸ್ ವಿ, ರಾಜ್ಯ ಕರಾಟೆ ಸಂಘದ ವಕ್ತಾರ ಹಾಗೂ ಸ್ಕೇಟಿಂಗ್ ತರಬೇತುದಾರ ಶಿವುಕುಮಾರ ಶಾರದಳ್ಳಿ, ಎಂಡೋರೇನ್ಸ್ ಕರ್ನಾಟಕ ಸ್ಕೇಟಿಂಗ ರಾಜ್ಯಾಧ್ಯಕ್ಷ ಕಟ್ಟೆಸ್ವಾಮಿ ಬಳ್ಳಾರಿ, ಅಬ್ದೂಲ ರಜಾಕ, ಪೆಂಕಾಕ ಶಿಲಕ, ಎಂಡೋರೇನ್ಸ್ ಕರ್ನಾಟಕ ಸ್ಕೇಟಿಂಗ ಪ್ರದಾನ ಕಾರ್ಯದರ್ಶಿ ಸೋಮಶೇಖರ,ತರಬೇತುದಾರ ಶ್ರೀನಿವಾಸ, ಹಿರಿಯ ಪತ್ರಕರ್ತ ಪರುಶುರಾಮ ಕೊಣ್ಣೂರ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಪ್ರಗತಿ ಪರ ಚಿಂತಕ ಅರವಿಂದ ಕೊಪ್ಪ ಸೇರಿದಂತೆ ಹಲವರು ಇದ್ದರು.