ಪ್ರತಿಭಾ ಕಾರಂಜಿ ಮತ್ತು ಕಲ್ಲೋತ್ಸವದಲ್ಲಿ ಮಕ್ಕಳಿಂದ ವಿವಿಧ ಛದ್ಮವೇಷ
Children in various disguises at Pratibha Karanji and Kallotsava
ಕಂಪ್ಲಿ 30: ಮಕ್ಕಳಲ್ಲಿ ಪಠ್ಯದ ಜತೆಗೆ ಪಠ್ಯೇತರ ವಿಷಯಗಳ ಸುಪ್ತ ಪ್ರತಿಭೆಗಳನ್ನು ಹೊರ ಹಾಕುವುದು ಪ್ರತಿಭಾ ಕಾರಂಜಿ ಉದ್ದೇಶವಾಗಿದೆ. ನಿರ್ಣಾಯಕರು ತಾರತಮ್ಯ ಮಾಡದೆ ಎಚ್ಚರಿಕೆಯಿಂದ ಉತ್ತಮ ಪ್ರತಿಭೆಯನ್ನು ಆಯ್ಕೆ ಮಾಡಬೇಕು ಎಂದು ಇಸಿಒ ರೇವಣ್ಣ ಹೇಳಿದರು.ತಾಲೂಕಿನ ಮೆಟ್ರಿ ಗ್ರಾಮದ ಮಹಾದೇವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮೆಟ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲ್ಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಸೋಲು- ಗೆಲುವು ಬಗ್ಗೆ ಯೋಚಿಸದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಮಕ್ಕಳು ತಮ್ಮಲ್ಲಿನ ಕೀಳರಿಮೆಯಿಂದ ಪ್ರತಿಭೆಯನ್ನು ಹೊರ ಹಾಕಲಾಗದೇ ಎಲೆಮರೆಯ ಕಾಯಿಯಂತೆ ಉಳಿದು ಬಿಡುತ್ತಾರೆ. ಹೀಗಾಗಿ ಪ್ರತಿಭೆಗಳನ್ನು ಹುಡುಕುವುದು ಶಿಕ್ಷಕರ ಕರ್ತವ್ಯ ಎಂದರು.
ಸಿಆರ್ಿ ಭೂಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಮಟ್ಟದಿಂದಲೇ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಪ್ರತಿಭಾ ಕಾರಂಜಿಯಂತಹ ಸ್ವರ್ಧೆಗಳಲ್ಲಿ ಭಾಗವಹಿಸುವುದರಿಂದ ಸ್ವರ್ಧಾ ಮನೋಭಾವ ವೃದ್ಧಿಸಲಿದೆ ಎಂದರು. ನಂತರ ಮಕ್ಕಳಿಂದ ವಿವಿಧ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ವಿಜೇತರಾದ ಎಲ್ಲ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಪ್ರಾ.ಶಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸ.ನೌ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ನಿರ್ದೇಶಕ ಎಚ್.ಪಿ.ಸೋಮಶೇಖರ, ಜಿಪಿಟಿ ಸಂಘದ ಕಾರ್ಯದರ್ಶಿ ನಿಂಗರಾಜ, ಮುಖ್ಯಗುರುಗಳಾದ ಡಿ.ಜಗದೀಶ, ದೊಡಬಸವ, ವಿರೇಶಮ್ಮ, ಸುಮಿತ್ರ, ನಿರ್ಮಲ, ಮಾಲಿಕ್, ಮಲ್ಲಿಕಾರ್ಜುನ, ಸಹ ಶಿಕ್ಷಕ ರಾಜನಾಯ್ಕ, ಉಷಾರಾಣಿ, ಧನಲಕ್ಷ್ಮಿ, ಸರ್ವಮಂಗಳ, ಮಡಿವಾಳ, ಪಂಪನಗೌಡ, ನಾಗರಾಜ ಸೇರಿದಂತೆ ಶಿಕ್ಷಕರು, ಸ್ಥಳೀಯ ಮುಖಂಡರು ಹಾಗೂ 13 ಶಾಲೆಗಳ 200ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 