ಧಾರವಾಡ 26: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಂತೆ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಸಂಸ್ಕೃತಿ ಪಾಲಕರು ತುಂಬಬೇಕು. ಇಂದು ನಾವು ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಕೋಡುತ್ತೆವೆಯೊ ಆ ರೀತಿ ಬೆಳೆಯುತ್ತಾರೆ ಎಂದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ವಿಜಯಲಕ್ಷ್ಮಿ ಹಾದಿಮನಿ ಅವರು ಸಲಹೆ ನೀಡಿದರು.
ರಾಜೀವ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿ.25ರಂದು ಶಾಲಾ ವಿಧ್ಯಾಥರ್ಿಗಳ ಪಾಲಕರಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ- ಶಿಕ್ಷಕಿಯರು ಸೇರಿದಂತೆ ಶಾಲಾ ಸಿಬ್ಬಂದಿಗಳನ್ನು ಸಹ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮತ್ತು ಕಷ್ಟದಲ್ಲಿ ಭಾಗಿಯಾಗುವ ಗುಣಗಳಿರುತ್ತವೆ. ಎಂದು ಉದಾರಣೆ ಸಹಿತ ವಿವರಿಸಿದರು. ಮುಗ್ಧ ಮಕ್ಕಳು ದೇವರ ಸಮಾನ. ಅವರಿಗೆ ನಾವು ಹಿರಿಯರು ಯಾವ ರೀತಿ ರೂಪ ನೀಡುತ್ತೇವೆ ಹಾಗೆ ಅವರು ರೂಪಗೊಳ್ಳುತ್ತಾರೆ ಎಂದರು.
ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶಕುಂತಲಾ ಯಡಾಳ ಇವರು ಈ ಸನ್ಮಾನದಿಂದ ನಮ್ಮ ಜವಾಬ್ದಾರಿಯು ಹೆಚ್ಚಾಗಿದೆ. ಮಕ್ಕಳಿಗೆ ಮುಂದೆ ಗುರಿಯಿರಬೇಕು ಹಿಂದೆ ಗುರು ಇರುತ್ತಾರೆ. ಇದರ ಜೊತೆಗೆ ಮಕ್ಕಳು ಸಹ ಸತತ ಪರಿಶ್ರಮ ಪಟ್ಟರೆ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾರೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಮಂಜುನಾಥ ಅಡಿವೇರ ಇವರು ಮಕ್ಕಳು ಗುರು-ಹಿರಿಯರಿಗೆ ಗೌರವಿಸುವ ಪ್ರವೃತ್ತಿ ಬೆಳಿಸಿಕೊಳ್ಳಬೇಕು. ಮೊಬೈಲ್ ಮತ್ತು ಟಿ.ವಿ ಬಳಸುವದನ್ನು ಬಿಟ್ಟು ಓದಿನ ಕಡೆಗೆ ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ತಮ್ಮ ಜೀವನ ರೂಪಿಸಿಕೊಳ್ಳುವುದು ತಮ್ಮ ಕೈಯಲ್ಲೇ ಇರುತ್ತದೆ. ಕಷ್ಟಪಟ್ಟು ಓದುವುದು, ನಿರಂತರ ಅಭ್ಯಾಸ ಇವು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಭವಿಷ್ಯ ನಿಮರ್ಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು. ಮತ್ತು ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಸಹ ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ ಶಾಲಾ ಆಡಳಿತ ಮಂಡಳಿಯ ಕನ್ವಿನಿಯರ ಸಿ ಬಿ ಕನ್ವಳ್ಳಿಯವರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರವು ಮಹತ್ವದಾಗಿದೆ. ಶಿಕ್ಷಕರು ಮಕ್ಕಳ ಭವಿಷ್ಯ ನಿಮರ್ಿಸುವ ಶಿಲ್ಪಿಗಳು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಂಕರ ಆರ್ ಅಂಬಲಿಯವರು ಒಂದು ಶಿಲೆಯಿರುತ್ತೆ ಅದನ್ನು ಯಾರು ಗುರುತಿಸುವದಿಲ್ಲ ಶಿಲ್ಪಿಯು ಆ ಶಿಲೆಯನ್ನು ಕೆತ್ತಿ ಮೂತರ್ಿ ಮಾಡಿದಾಗ ಅದಕ್ಕೆ ಗೌರವ ಬರುತ್ತೆ ಅದೆ ರೀತಿ ಶಿಕ್ಷಕರು ಶಿಲ್ಪಿಗಳು ಇದ್ದಂತೆ ಮಕ್ಕಳ ಭವಿಷ್ಯ ರೂಪಿಸಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುತ್ತಾರೆ. ಅದ್ದರಿಂದ ಸಮಾಜದಲ್ಲಿ ಗುರುವಿಗೆ ದೊಡ್ಡಸ್ಥಾನವಿದೆ. ಗುರುಗಳನ್ನು ಗೌರವಿಸುವದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಅತಿಥಿಗಳಾದ ವಿನಾಯಕ ಜೋಶಿ, ವಾಯ್ ಎಚ್ ಪಾಟೀಲ ಪಾಲಕರಾದ ಬಾಲಚಂದ್ರ ಸುರಪುರ ಚಂದ್ರಶೇಖರ ಸದಾಶಿವಪೇಠ, ಮಂಜುನಾಥ ರಾಯ್ಕರ, ಸಾಯಿರಾಜ ಗುರಣ್ಣವರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸುಧಾ ಕಾಳೆ ಕಾರ್ಯಕ್ರಮ ನಿರೂಪಿಸಿದರು, ಬಾಲಚಂದ್ರ ಸುರಪುರ ಸ್ವಾಗತಿಸಿದರು. ಡಿ ಆರ್ ರೇವಣಕರ ವಂದಿಸಿದರು.