ಶಾಲೆಯಲ್ಲಿ ಉಚಿತ ಬ್ಯಾಗ್, ಪಠ್ಯಪುಸ್ತಕ ನೀಡುವುದರ ಜೊತೆಗೆ ಮಕ್ಕಳಿಗೆ ಸ್ವಾಗತ
Children are welcomed at school with free bags and textbooks
ಶಾಲೆಯಲ್ಲಿ ಉಚಿತ ಬ್ಯಾಗ್, ಪಠ್ಯಪುಸ್ತಕ ನೀಡುವುದರ ಜೊತೆಗೆ ಮಕ್ಕಳಿಗೆ ಸ್ವಾಗತ
ರನ್ನ ಬೆಳಗಲಿ 31: ಪಟ್ಟಣದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ,ಉಚಿತ ಪಠ್ಯಪುಸ್ತಕ ವಿತರಣೆ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿದವು.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯಮನಪ್ಪ ಆಲಗೂರ,ಪ.ಪಂ.ಸದಸ್ಯರಾದ ಪ್ರವೀಣ ಪಾಟೀಲ ಇರ್ವರು ಹೊಸದಾಗಿ ದಾಖಲೆಗೊಂಡ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗಗಳನ್ನು ನೀಡುವುದರ ಮೂಲಕ,ಸಸಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮುಖ್ಯೋಪಾಧ್ಯಾನಿ ಎಸ್‌ಎಲ್ ಕಠಾರೆ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಸದಸ್ಯರು, ನ್ಯಾಯವಾದಿಗಳಾದ ಸದಾಶಿವ ಹಳ್ಳೂರ ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುತ್ತ,ಈ ವರ್ಷದಲ್ಲಿ ಹೆಚ್ಚಿನ ದಾಖಲಾತಿ ಆಗುವಂತೆ ನಾವು ಕೂಡಕೈ ಜೋಡಿಸುತ್ತೇವ.
ೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಬೇಕಾದಂತಹ ಸಂಪನ್ಮೂಲವನ್ನು ಸರ್ಕಾರದ ಸೇವೆಗಳ ಅಡಿಯಲ್ಲಿ ಸಾಧ್ಯವಾದಷ್ಟು ನಾವು ಕೂಡ ಭಾಗವಹಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿವೆಎಂದು ತಿಳಿಸಿದರು.ಶ್ರೀಶೈಲ ಬಬಲಾದಿ ಸದಸ್ಯರು ವಿದ್ಯಾರ್ಥಿ ಸಮೂಹಕ್ಕೆ ಸಿಹಿ ಭೋಜನ ಮಾಡಿಸಿ,ಪ್ರತಿ ತಿಂಗಳಲ್ಲಿ ಒಂದು ದಿನ ಈ ಸಿಹಿ ಬೋಜನವನ್ನು ಮುಂದುವರಿಸುತ್ತೇನೆಎಂದು ಮಾತು ನೀಡಿದರು.ಈ ಸಂದರ್ಭದಲ್ಲಿ ಶಾಲೆಯಎಸ್ ಡಿ ಎಂ ಸಿ ಬಳಗದ ಜೊತೆಗೆಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿ. ದಾಖಲಾತಿಆಂದೋಲನವನ್ನು ಹಮ್ಮಿಕೊಂಡು ಪ್ರತಿ ಮನೆಗೆ ಭೇಟಿ ನೀಡಿದಾಖಲಾತಿಯನ್ನು ಮಾಡಿಕೊಳ್ಳಲಾಯಿತು.ಸದಾಶಿವ ಗುಲಗಂಜಿಕೊಪ್ಪ, ಈರ್ಪ ಲೋಹಾರ,ಮಂಜುನಾಥ ಪಾಟೀಲ, ಬಂದವ್ವ ಲಾಲಸಿಂಗಿ,ಮಾಲವ್ವ ಹಂಚಿನಾಳ,ಶಾಲಾ ಸಿಬ್ಬಂದಿಗಳಾದ ಎಸ್‌ಎಚ್ ಮಾದರ, ಎಸ್ ಪಿ ಜೋಶಿ, ಆರ್ ಡಿ ಬಂಡಿ,ಹೆಚ್ ಬಿ ಜಮಾದಾರ, ಆರ್ ಟಿ ದಂಡಿನ, ಆರ್‌ಎಮ್ ನೀಲಣ್ಣವರ, ಶೋಭಾ ವೀರಘಂಟಿ, ಕಾಳಮ್ಮ ಬಡಿಗೇರ, ಭಾರತಿ ಮಳ್ಳಿಗೇರಿ ವಿದ್ಯಾರ್ಥಿನಿಯರು,ಪಾಲಕ ಪೋಷಕರು ಭಾಗಿಯಾಗಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 