ಚಿಕ್ಕೋಡಿ ಜಿಲ್ಲಾನೌಕರರ ವಾಲಿಬಾಲ್ ತಂಡಕ್ಕೆ ಪ್ರಥಮ ಸ್ಥಾನ : ರಾಜ್ಯಮಟ್ಟಕ್ಕೆ ಆಯ್ಕೆ
Chikkodi District Employees Volleyball Team Wins First Place: Selected for State Level
ಚಿಕ್ಕೋಡಿ, 18 : : ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಚಿಕ್ಕೋಡಿ ಜಿಲ್ಲಾನೌಕರರ ವಾಲಿಬಾಲ್ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಾ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಚಿಕ್ಕೋಡಿ ಜಿಲ್ಲಾ ನೌಕರ ಸಂಘದ ನಿರ್ದೇಶಕ ಸಂಜೀವ ಹುಲ್ಲೋಳ್ಳಿ ಅವರ ನೇತೃತ್ವದಲ್ಲಿ ತಂಡವು ಸ್ಪರ್ಧೆಯಾದ್ಯಂತ ಶಿಸ್ತಿನ ಆಟ ಪ್ರದರ್ಶಿಸಿ ಎದುರಾಳಿ ತಂಡಗಳನ್ನು ಮಣಿಸಿ ಗಮನಾರ್ಹ ಸಾಧನೆ ಮಾಡಿತು. ಈ ಸಾಧನೆಯೊಂದಿಗೆ ಚಿಕ್ಕೋಡಿ ಜಿಲ್ಲಾನೌಕರರ ವಾಲಿಬಾಲ್ ತಂಡವು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ ಬಿ.ಎ. ಕುಂಬಾರ, ನೌಕರ ಸಂಘದ ನಿರ್ದೇಶಕರಾದ ಅಲಗೌಡ ಸೊಲ್ಲಾಪೂರೆ, ಸಂಜೀವ ಹುಲ್ಲೋಳ್ಳಿ, ನವೀನ ಗಂಗರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದು ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.ಚಿಕ್ಕೋಡಿ ಜಿಲ್ಲೆಗೆ ಈ ಸಾಧನೆ ಹೆಮ್ಮೆಯ ವಿಷಯವಾಗಿದ್ದು, ರಾಜ್ಯಮಟ್ಟದಲ್ಲೂ ತಂಡವು ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಲಾಯಿತು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 