ಆರಿದ ಚಿಗಳ್ಳಿ ದೀಪ! ಇದು ಯಾರ ಶಾಪ

Chigli lamp is turned off! Whose curse is this?

ಆರಿದ ಚಿಗಳ್ಳಿ ದೀಪ! ಇದು ಯಾರ ಶಾಪ    

 ಮುಂಡಗೋಡ  06: ಜಗದ್ವಿಖ್ಯಾತ ವಾದ ಮುಂಡಗೋಡದ ದೀಪನಾಥೇಶ್ವರ ದೇಗುಲದ ದೀಪಗಳು ಹಟಾತ್ತನೇ ಆರಿ ಹೋಗಿವೆ, ಈ ಮೂರು ದೀಪಗಳನ್ನು ದಿವಂಗತ ಶಾರದಮ್ಮನವರು 1979 ದಿಲ್ಲಿ ಬೆಳಗಿಸಿದ್ದರು. ಸರಿ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ಬತ್ತಿ ಹಾಗೂ ಎಣ್ಣೆ ಇಲ್ಲದೇ ಈ ದೀಪಗಳು ಉರಿಯುತ್ತಿದ್ದವು, ಈ ಕ್ಷೇತ್ರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದರು. ದೀಪಗಳ ಉಸ್ತುವಾರಿ ತೆಗೆದುಕೊಂಡಿದ್ದ ಕುಟುಂಬಸ್ಥ ಹಾಗೂ ಅರ್ಚಕ ವೆಂಕಟೇಶ್ ಎಂಬುವವರು ಇತ್ತೀಚಿಗೆ 14 ದಿನದ ಹಿಂದೆ ನಿಧನರಾಗಿದ್ದು. ಬುಧವಾರ ಸೂತಕ ಕಳೆದ ನಂತರ ಕಸ ಗುಡಿಸಲು ದೇಗುಲದ ಬಾಗಿಲು ತೆರೆದಾಗ ಮೂರು ದೀಪಗಳು ನಂದಿದ್ದನ್ನು ಗಮನಿಸಿ ಗ್ರಾಮಸ್ಥರ ಸೂಚನೆಯಂತೆ ದೇವಾಲಯ ಬಂದ್ ಮಾಡಲಾಗಿದೆ. ಇನ್ನೂ ನಾಲ್ಕೈದು ದಿನ ಬಿಟ್ಟು ಗುರು-ಹಿರಿಯರ ಸಲಹೆ ಪಡೆದು ದೇಗುಲದ ಕದ ತೆರೆಯಲು ಕುಟುಂಬ ಯೋಚಿಸಿದೆ. 1979 ರ ಸಮಯದಲ್ಲಿ ಕಲ್ಮೇಶ್ವರ ಮಠದ ಪ್ರವಚನದಲ್ಲಿ ನಿರತರಾಗಿದ್ದ ಶಾರದಾ ಬಾಯಿ ದೈವಜ್ಞ ಅವರು ಹಚ್ಚಿಟ್ಟ ದೀಪ ಬತ್ತಿ ಹಾಗೂ ಎಣ್ಣೆ ಇಲ್ಲದೆಯೇ ಸುಮಾರು ದಿನ ಉರಿಯಿತು ಅದಾದ ಮೇಲೆ ಪರೀಕ್ಷಾರ್ಥವಾಗಿ ಇನ್ನೆರೆಡು ದೀಪ ಹಚ್ಚಲು ಅದೇ ರೀತಿ ಪವಾಡ ನಡೆಯಿತು. ಆವಾಗಿನಿಂದ ಈವರೆಗೆ ಕಲ್ಮೇಶ್ವರ ಮಠದ ಗುರುಗಳ ಆದೇಶದಂತೆ ದತ್ತಾತ್ರೇಯ ಸ್ವರೂಪವೆಂದು ದೀಪವನ್ನು ಆರಾಧಿಸುತ್ತಾ ಬರಲಾಗುತ್ತಿದೆ.