ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಚೆನ್ನಮ್ಮ ವಿಜಯೋತ್ಸವ 14ರಂದು
Chennamma Vijayotsava will be celebrated on the 14th at Haveri district headquarters.
ರಾಣೆಬೆನ್ನೂರು 12 : ಹಾವೇರಿ ಜಿಲ್ಲಾ ಕೇಂದ್ರದ ಹಾನಗಲ್ ರಸ್ತೆಯ, ತುಳಸಿ ಐಕಾನ್ ಸಭಾಭವನದಲ್ಲಿ ನವೆಂಬರ್ 14, 2025 ರಂದು ಶುಕ್ರವಾರ ಮುಂಜಾನೆ 10:30 ಗಂಟೆಗೆ, ಹಾವೇರಿ ಜಿಲ್ಲಾ ಮಟ್ಟದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 21ನೇ ವಿಜಯೋತ್ಸವ ಹಾಗೂ ಶೈಕ್ಷಣಿಕ ಪ್ರತಿಭಾವಂತರ ಪ್ರತಿಭಾ ಪುರಸ್ಕಾರ, ಮತ್ತಿತರ ಸಾಮುದಾಯಕ ಕಾರ್ಯಕ್ರಮಗಳು ಜರುಗಲಿದ್ದು, ಸಕಲಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ ಹೇಳಿದರು. ಅವರು, ಬುಧವಾರ ಇಲ್ಲಿನ ಭಾರತಿ ಕುಮಾರ ಜಂಬಿಗಿ ಅವರ ಗ್ರಹಸಭಾ ದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಹಾವೇರಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಂದು ಮುಂಜಾನೆ ರಾಣಿ ಚೆನ್ನಮ್ಮ ವೃತ್ತದ ಭೂಮಿ ಪೂಜೆ, ಸಮಾಜದ ಸಮುದಾಯ ಭವನ ಭೂಮಿ ಪೂಜೆ, ಶಂಕುಸ್ಥಾಪನೆ, 24-25 ನೇ ಸಾಲಿನ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು. ಶ್ರೀ ವೀರಭದ್ರೇಶ್ವರ ದೇವಸ್ಥಾನ ದಿಂದ ಹೊರಡುವ ಮೆರವಣಿಗೆಯನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡುವರು. ದಿವ್ಯ ಸಾನಿಧ್ಯವನ್ನು ಕೂಡಲಸಂಗಮ ಮಹಾ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಶ್ರೀಗಳು ಹರಿಹರ ಜಗದ್ಗುರು ಪೀಠದ ಶ್ರೀ ವಚನಾನಂದ ಶ್ರೀಗಳು, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ವಹಿಸುವರು. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸರ್ಕಾರದ ಉಪ ಸಭಾಧ್ಯಕ್ಷ ರುದ್ರ್ಪ ಲಮಾಣಿ, ಸಮುದಾಯ ಭವನದ ಉದ್ಘಾಟನೆಯನ್ನು ಜವಳಿ ಕಬ್ಬು ಸಚಿವ ಶಿವಾನಂದ ಪಾಟೀಲ್ ನೆರವೇರಿಸುವರು. ಕೇಂದ್ರ ಗ್ರಾಹಕ ಸಚಿವ ಪ್ರಲ್ಹಾದ ಜೋಷಿ ಅವರು ಸಮಾರಂಭ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಮುಖಂಡರು, ಗಣ್ಯರು ಪಾಲ್ಗೊಳ್ಳುವರು. ಎಂದರು. ಮಾಧ್ಯಮಗೋಷ್ಠಿಯಲ್ಲಿ, ಗಣ್ಯರಾದ, ಎಸ್ ಎಸ್ ರಾಮಲಿಂಗಣ್ಣನವರ, ಶಿವಪ್ಪ ಗುರಿಕಾರ, ನಾಗರತ್ನ ಗುಡಿಹಳ್ಳಿ, ವಸಂತಾ ಹುಲ್ಲತ್ತಿ, ಭಾರತಿ ಜಂಬಿಗಿ, ಗೀತಾ ಕಾಕೋಳ, ಅನಿತಾ ಜಂಬಿಗಿ, ಮಲ್ಲಜ್ಜ ಹೆಗ್ಗಪ್ಪನವರ, ನಾಗರಾಜ ಮೋಟಗಿ,ಮಾಲತೇಶ ಚಳಗೇರಿ, ಲಿಂಗರಾಜ ಹೊಳಲ, ಕೊಟ್ರೇಶ್ ಗುತ್ತೂರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ಸಮಾಜದ ಮುಖಂಡರು ಚೆನ್ನಮ್ಮನ ವಿಜಯೋತ್ಸವದ ಪರಿಪತ್ರಗಳನ್ನು ಬಿಡುಗಡೆಗೊಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 