ಚೆನ್ನಮ್ಮನ ಜಯಂತೋತ್ಸವ, ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಸಮಾರಂಭ
Chennamma's birth anniversary, Panchamasali reservation pledge ceremony
ದೇವರಹಿಪ್ಪರಗಿ 20: ವೀರರಾಣಿ ಕಿತ್ತೂರು ಚೆನ್ನಮ್ಮ ನವರ 201ನೇ ವಿಜಯೋತ್ಸವ ಹಾಗೂ 247ನೇ ಜಯಂತೋತ್ಸವದ ಪ್ರಯುಕ್ತ ಪಟ್ಟಣದ ಇಂಡಿ ರಸ್ತೆಯಲ್ಲಿರುವ ಶ್ರೀಶೈಲ ದಾನಗೊಂಡ ಅವರ ತೋಟದಲ್ಲಿ ರವಿವಾರ ಸಂಜೆ 4.00 ಗಂಟೆಗೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ (ರಿ) ತಾಲೂಕು ಘಟಕ ದೇವರಹಿಪ್ಪರಗಿ, ಹಿಂದುಗಳ ಸಂಸ್ಕೃತಿ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ಶನಿವಾರದಂದು ಸಮಾವೇಶ ಸ್ಥಳದ ಪರೀಶೀಲಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಐತಿಹಾಸಿಕ ಮಡಿವಾಳ ಮಾಚಿದೇವರು ಜನಿಸಿದ ಪುಣ್ಯಕ್ಷೇತ್ರದಲ್ಲಿ ಸ್ವಾತಂತ್ರ ಹೋರಾಟದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ವೀರರಾಣಿ ಕಿತ್ತೂರು ಚೆನ್ನಮ್ಮ ನವರ ಜಯಂತೋತ್ಸವ ಅದ್ದೂರಿಯಾಗಿ ಆಚರಿಸಲು ಸಮುದಾಯದ ಮುಖಂಡರು ನಿಶ್ಚಯಿಸಿದ್ದಾರೆ. ಪಂಚಮಸಾಲಿ ಸಮಾಜ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿ ಹೊಂದಲು ಮೀಸಲಾತಿ ಕೊಡುವವರೆಗೆ ಹೋರಾಟ ಜೀವಂತವಾಗಿರಿಸಲು ಹಾಗೂ ಸಮುದಾಯಕ್ಕೆ ಹೋರಾಟ ಸಂದರ್ಭದಲ್ಲಿ ಸರ್ಕಾರ ಕಳೆದ ಬಾರಿ ಮಾರಣಾಂತಿಕ ದೌರ್ಜನ್ಯ ನೀಡಿದ ಕಾರಣ ಸರ್ಕಾರಕ್ಕೆ ಸಂದೇಶ ನೀಡಲು ಸಮಾಜ ಬಾಂಧವರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಫೋಟೋ ಮೆರವಣಿಗೆ ಹಾಗೂ ಅದ್ದೂರಿ ಸಮಾವೇಶವನ್ನು ಆಯೋಜಿಸಿದ್ದಾರೆ. ಸಮಾಜದ ಜಿಲ್ಲೆಯ ಶಾಸಕರು, ಸಮಾಜದ ಹಿರಿಯರು,ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.
ಪ್ರಾಸ್ತಾವಿಕವಾಗಿ ಸಮಾಜದ ಯುವ ಮುಖಂಡರು ಹಾಗೂ ಪ.ಪಂ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಅವರು ಮಾತನಾಡಿ, ರಾಜಕೀಯ ಸಂದೇಶ ಸಾರಲು ಪಟ್ಟಣದಲ್ಲಿ ಬೃಹತ್ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಶ್ರೀಗಳ ನೇತೃತ್ವದಲ್ಲಿ ಸಮುದಾಯದ ಮುಖಂಡರು, ಯುವಕರು ಹಾಗೂ ವಿವಿಧ ಸಂಘಟನೆಗಳು ಸ್ವಯಂ ಸಹಕಾರ ನೀಡುವ ಮೂಲಕ ತಯಾರಿ ನಡೆದಿದೆ ಸುಮಾರು 10ಸಾವಿರ ಜನಸಂಖ್ಯೆ ಸೇರುವ ನೀರೀಕ್ಷೆ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷರಾದ ಬಿ.ಎಂ.ಪಾಟೀಲ, ತಾಲೂಕು ಘಟಕದ ಅಧ್ಯಕ್ಷರಾದ ಗುರುರಾಜ ಆಕಳವಾಡಿ, ಮುಖಂಡರುಗಳಾದ ಚೆನ್ನವೀರ ಕುದರಿ, ಕಾಸುಗೌಡ ಬಿರಾದಾರ ಜಲಕತ್ತಿ,ಪಂಚಾಕ್ಷರಿ ಮಿಂಚನಾಳ, ಶ್ರೀಶೈಲ ಮುಳಜಿ, ಶಿವನಗೌಡ ಯರನಾಳ, ಜಿ.ಪಿ.ಬಿರಾದಾರ, ರಾಮು ದೇಸಾಯಿ, ಮಡುಗೌಡ ಬಿರಾದಾರ, ವೀರೇಶ ಕುದರಿ, ನಾನಗೌಡ ಬಿರಾದಾರ ಜಲಕತ್ತಿ, ಸೋಮು ದೇವೂರ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 