ಚರಾಟಿರವರ ಸದಾನಂದ ಓಂಕಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಲೋಕಾರೆ​‍್ಣ

Charativara Sadananda Omkara Multi Specialty Hospital Lokaran

ಚರಾಟಿರವರ ಸದಾನಂದ ಓಂಕಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಲೋಕಾರೆ​‍್ಣ 

ಚಿಕ್ಕೋಡಿ 22: ಆಸ್ಪತ್ರೆಗೆ ಬರುವ ರೋಗಿಗಳನ್ನು ಆತ್ಮೀಯತೆಯಿಂದ ಕಂಡುಕೊಂಡು ಉತ್ತಮ ಚಿಕಿತ್ಸೆ ನೀಡಿದರೆ ರೋಗಿಗಳು ಶೀಘ್ರ ಗುಣಮುಖರಾಗುತ್ತಾರೆ ಮತ್ತು ಆಸ್ಪತ್ರೆಗಳು ಬೆಳವಣಿಗೆ ಸಾಧಿಸುತ್ತವೆ. ಡಾ,ಅಜೀತ ಚರಾಟಿ ಅವರು ಜನಸ್ನೇಹಿಯಾಗಿ ವೈದ್ಯಕೀಯ ಸೇವೆ ಕೊಡಬೇಕು ಎಂದು ಕೆಎಲ್‌ಇ ಕಾರಾ​‍್ಯಧ್ಯಕ್ಷ ಡಾ, ಪ್ರಭಾಕರ ಕೋರೆ ಹೇಳಿದರು. 

ಇಲ್ಲಿನ ವೀರಸಾವರ್ಕರ ನಗರದಲ್ಲಿ ಚರಾಟಿರವರ ಸದಾನಂದ ಓಂಕಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲುಬು-ಕೀಲು ವೈದ್ಯರಾಗಿ ಹಲವು ವರ್ಷಗಳಿಂದ ಸೇವೆ ನೀಡುತ್ತಿರುವ ಡಾ, ಅಜೀತ ಚರಾಟಿ ಅವರು ನೂತನ ಕಟ್ಟಡದ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದರು. 

ದಿವ್ಯ ಸಾನಿಧ್ಯವನ್ನು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ದುರೀಣ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಕವಟಗಿಮಠ ಅವರು ಆಸ್ಪತ್ರೆಯ ವಿವಿಧ ಘಟಕಗಳನ್ನು ಉದ್ಘಾಟಿಸಿದರು. 

ಅನುಸುಯಾ ಚರಾಟಿ, ಡಾ, ಅಜಿತ ಚರಾಟಿ, ಡಾ, ಕಾವೇರಿ ಚರಾಟಿ, ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ಮಲ್ಲಿಕಾರ್ಜುನ ಕೋರೆ, ಸುರೇಶ ಬೆಲ್ಲದ, ಡಾ, ಎಂ.ಬಿ.ಕುಂಬಾರ, ಬಸವರಾಜ ಕುಂಬಾರ, ಶಿವಾನಂದ ಮರಾ​‍್ಯಯಿ, ರಾಜು ಕುಂಬಾರ, ಕುಮಾರ ಮದನ್ನವರ, ಮಂಜುನಾಥ ರೊಟ್ಟಿ, ಅಜಯ ಕವಟಗಿಮಠ, ಪುರಸಭೆ ಸದಸ್ಯ ಗುಲಾಬ ಬಾಗವಾನ, ಪಿ.ಐ.ಕೋರೆ, ಡಾ, ಶಿವು ಪಾಟೀಲ, ಡಾ, ಲಕ್ಷ್ಮೀಕಾಂತ ಕಡ್ಲೇಪ್ಪಗೋಳ ಮುಂತಾದವರು ಇದ್ದರು.