ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ: ಗೂಳಿ

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ: ಗೂಳಿ Channamma was a brave woman who ignited the fire of freedom: Gooli

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ: ಗೂಳಿ  

ಮುದ್ದೇಬಿಹಾಳ 25: ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ. ದೇಶದ ಜನ ತಾವಿರುವ ಪ್ರದೇಶದಲ್ಲಿ ಗೌರವದಿಂದ ಬದುಕ ಬೇಕಾದರೇ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಅವರು ಚೆನ್ನಾಗಿ ತಿಳಿದಿದ್ದರು ಮಾತ್ರವಲ್ಲದೇ ಉತ್ತಮ ಆಡಳಿತಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಾಗಿದ್ದರು. ಜೊತೆಗೆ ಪ್ರಜಾಪಾಲನೆಯಲ್ಲಿ ಇತರೆ ಮಹಾರಾಣಿಯರಿಗೆ ಅವರು ರೋಲ್ ಮಾಡೆಲ್ ಆಗಿದ್ದರು ಎಂದು  ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಹೇಳಿದರು. 

ತಾಲೂಕಾ ಪಂಚಮಸಾಲಿ ಸಮಾಜ ಹಾಗೂ ತಾಲೂಕಾ ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ 247ನೇ ಜಯಂತ್ಯೋತ್ಸವ ಹಾಗೂ 202ನೇ ವಿಜಯಯೋತ್ಸವ ಉತ್ಸವದಲ್ಲಿ ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಮತ್ತು  ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟೀಷರನ್ನು ಎದುರಿಸಿದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಚನ್ನಮ್ಮ. ರಾಣಿ ಚನ್ನಮ್ಮ ವಚನ ಶಾಸ್ತ್ರ ಸೇರಿದಂತೆ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಆಳವಾಗಿ ಓದಿ ತಿಳಿದುಕೊಂಡಿದ್ದರು. ಮಾತೃಭಾಷೆಯ  ಜೊತೆಗೆ ಇತರೆ ಭಾಷೆಗಳಲ್ಲಿಯೂ ಪರಿಣತಿ ಹೊಂದಿದ್ದರು. ಅಂದು‘ಬ್ರಿಟೀಷ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯನ್ನು ವಿರೋಧಿಸಿದ ರಾಣಿ ಚನ್ನಮ್ಮ ಅವರು ಬ್ರಿಟೀಷರಿಗೆ ಸಲ್ಲಿಸಬೇಕಾಗಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿರಾಕರಿಸಿದ್ದ ವೀರ ಮಹಿಕಿತ್ತೂರು ಚನ್ನಮ್ಮ ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು. 

ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು. ಅವರು ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿಗಳ ಬಗ್ಗೆ ತರಬೇತಿ ಪಡೆದಿದ್ದರು. ಚನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಹಾಗಾಗಿ ಅವರ ಜನ್ಮ ದಿನವನ್ನು ಕಿತ್ತೂರಿನ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ ಎಂದರು. 1823ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಚನ್ನಮ್ಮರ ಇತಿಹಾಸ ದೇಶದಾದ್ಯಂತ ಸಾರಬೇಕು. ಕೇವಲ ಬ್ರಿಟೀಷರ ವಿರುದ್ಧವಲ್ಲ. ತನ್ನ ಸುತ್ತ ಇದ್ದವರ ಪಿತೂರಿಯ ವಿರುದ್ಧವೂ ಚನ್ನಮ್ಮ ಹೋರಾಡಿದ್ದರು. ವರ್ತಮಾನದಲ್ಲಿ ಸತ್ತು ಭವಿಷ್ಯದಲ್ಲಿ ನಮ್ಮೇಲ್ಲರ ಹೃದಯದಲ್ಲಿ ನೆಲಿಸಿ ಬದುಕಿದವರು ಚನ್ನಮ್ಮ ಎಂದರು. 

ತಹಶಿಲ್ದಾರ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಶಿವಶಂಕರಗೌಡ ಹಿರೇಗೌಡರ, ತಾಲೂಕಾ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಬಸಲಿಂಗಪ್ಪ ರಕ್ಕಸಗಿ, ಶ್ರೀಶೈಲ ದೊಡಮನಿ, ಕುಮಾರ ಸೂಳಿಭಾವಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬು ಗೊಳಸಂಗಿ,  ತಾಲೂಕಾ ಅಕ್ಷರ ದಾಸೋಹದ ಸಹಾಯಕ ನಿರ್ಧೇಶಕ ಎಂ ಎಂ ಬೆಳಗಲ್ಲ, ಪ್ರಭುಗೌಡ ಪಾಟೀಲ, ಶರಣು ಸಾಲವಾಡಗಿ,  ಮುರಿಗೆಪ್ಪ ಹಡಲಗೇರಿ, ಪರುಶುರಾಮ ಢವಳಗಿ, ಅನೀಲಗೌಡ ಪಾಟೀಲ, ದಾನಪ್ಪ ಅಂಗಡಿ, ಗುರಲಿಂಗಪ್ಪಗೌಡ ಪಾಟೀಲ, ಗುರುಸಂಗಪ್ಪ ಅಂಗಡಿ, ಕಲ್ಲಣ್ಣ ಪ್ಯಾಟಿ, ಬಸವರಾಜ ಗೋನಾಳ, ಸಂಗಣ್ಣ ಹಾರಿವಾಳ, ಸಂಗಣ್ಣ ಕತ್ತಿ,  ಸುರೇಶ ಕಮತ, ಮಲ್ಲು ಕತ್ತಿ, ಮಲ್ಲು ಬಿಳೆಭಾವಿ, ರವಿ ಅಮರಣ್ಣವರ, ಪುರಸಭೆ  ಉಪಾಧ್ಯಕ್ಷೇ  ಪ್ರೀತಿ ದೇಗಿನಾಳ, ಸದಸ್ಯೆ ಸಂಗಮ್ಮ ದೇವರಳ್ಳಿ,  ಅಶ್ವೀನ ಬಿರಾದಾರ, ಉದಯ ರಾಯಚೂರ, ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು.