ಮುರುಗಿಸ್ವಾಮಿಮಠದಲ್ಲಿ ಚನ್ನಬಸವೇಶ್ವರ ಜಯಂತಿ
Channabasaveshwara Jayanti at Murugiswamy Math
ಮುರುಗಿಸ್ವಾಮಿಮಠದಲ್ಲಿ ಚನ್ನಬಸವೇಶ್ವರ ಜಯಂತಿ
ಹಾವೇರಿ 29: ನಗರದ ಕಾಗಿನೆಲೆ ರಸ್ತೆಯ ಮುರುಗಿಸ್ವಾಮಿಮಠದಲ್ಲಿ ಚನ್ನಬಸವೇಶ್ವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಣೆ ಮಾಡಲಾಯಿತು. ಕಿರಿಯ ವಯಸ್ಸಿನಲ್ಲೇ ಅದ್ಭುತ ಸಂದೇಶ ನೀಡಿದ ಹಿರಿಮೆ ಅವಿರಳ ಜ್ಞಾನಿ ಚೆನ್ನಬಸವಣ್ಣನವರು. 12 ಶತಮಾನದ ಅನುಭವ ಮಂಟಪದ ಸಂಪೂರ್ಣ ಹೊಣೆಗಾರಿಕೆಯನ್ನು ನಿಭಾಯಿಸಿದ ಹೆಗ್ಗಳಿಕೆ ಚನ್ನಬಸವಣ್ಣನವರಿಗೆ ಸಲ್ಲುತ್ತದೆ ಹೊಸಮಠ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಚನ್ನಬಸವಣ್ಣನವರ ವಚನಗಳಲ್ಲಿ ಭಕ್ತ, ಮಹೇಶ.ಪ್ರಸಾದಿ.ಪ್ರಾಣಲಿಂಗಿ. ಶರಣ ಮತ್ತು ಐಕ್ಯ ಸ್ಥಿತಿಗಳನ್ನು ವಿವರವಾಗಿ ಪ್ರತಿಪಾದಿಸಿದರು. ಭಕ್ತನು ಲೌಕಿಕ ಜೀವನದಿಂದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ.ಅಂತಿಮವಾಗಿ ಶಿವನಲ್ಲಿ ಐಕ್ಯನಾಗುವ ಮಾರ್ಗವನ್ನು ಸೂಚಿಸುತ್ತದೆ. ಕಲ್ಯಾಣ ಕ್ರಾಂತಿಗೆ ಮತ್ತು ವಚನ ಸಂಗ್ರಹ:ಕಲ್ಯಾಣದ ಕ್ರಾಂತಿಯ ನಂತರ,ಚನ್ನಬಸವಣ್ಣನವರು ಎಲ್ಲ ವಚನಕಾರರ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ನಾಶವಾಗದಂತೆ ಉಳಿವಿಯ ಕಡೆಗೆ ಕೊಂಡೊಯ್ದುರು. ಇದರಿಂದಾಗಿ ಇಂದಿಗೂ ವಚನ ಸಾಹಿತ್ಯ ನಮಗೆ ಲಭ್ಯವಾಗಿದೆ.ಎಂದು ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಾಹಿತಿ ಹನುಮಂತಗೌಡ ಗೊಲ್ಲರ ಹಾಗೂ ಮಲ್ಲಿಕಾರ್ಜುನ ಇಂಚ್ಚಿಗೇರಿ ಅವರು ಮಾತನಾಡಿ ಮಹಾಶರಣರ ಜಯಂತಿ ಭಾಗವಹಿಸಿದ್ದು ನಮ್ಮ ಭಾಗ್ಯ. ಶರಣರ ತತ್ವ ಸಿದ್ದಾಂತಗಳನ್ನು ಪಾಲಿಸೋಣ ಎಂದರು. ಈ ಸಂದರ್ಭದಲ್ಲಿ ಗಣ್ಯರಾದ ಪರಶುರಾಮ ಹರ್ಲಾಪುರ,ಜಯದೇವ ಕೆರೂಡಿ,ಗೂಳಪ್ಪ ಅರಳಿಕಟ್ಟಿ,ನಿಂಗಪ್ಪ ಆರೇರ, ಮಲ್ಲೇಶ ಬಾಗಲಿ,ಬಸವರಾಜ ತಟಪಟ್ಟಿ,ಮುತ್ತುರಾಜ ಹೀರೆಮಠ,ಪರಸಪ್ಪ ಕರೆದ್ಯಾಮಣ್ಣನವರ, ಗಣೇಶ,ಜ್ಯೋತಿ,ನಿರಂಜನ ಪಾವಲಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 