ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ : ಡಾ.ನಾಗಲಕ್ಷ್ಮೀ ಚೌಧರಿ
Change is possible only through education: Dr. Nagalakshmi Chaudhary
ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ : ಡಾ.ನಾಗಲಕ್ಷ್ಮೀ ಚೌಧರಿ
ಹಾವೇರಿ:ಶೋಷಣೆ,ದೌರ್ಜನ್ಯದ ವಿರುದ್ಧ ಮಹಿಳೆ ಧ್ವನಿ ಎತ್ತಬೇಕು ಹಾಗೂ ವಿದ್ಯಾವಂತಳಾಗಬೇಕು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.
ನಗರದ ಜಿ ಎಚ್ ಕಾಲೇಜು ಸಭಾಂಗಣದಲ್ಲಿ ಜಿಲ್ಲೆಯ ಪಿಯು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಗಟ್ಟಿಗಿತ್ತಿ, ತಾಯಿ ಪ್ರೀತಿ, ತ್ಯಾಗ, ಕರುಣಾಮಯಿ, ಎಲ್ಲರ ಕಷ್ಟಕ್ಕೆ ಸ್ಪಠಸುವ ಮಹತಾಮಹಿ. ಆದರೆ ಹೆಣ್ಣು ದೌರ್ಜನ್ಯ ಶೋಷಣೆ ದಬ್ಬಾಳಗೆ ಒಳಗಾಗುವುದು ವಿಷಾದನೀಯ ಸಂಗತಿಯಾಗಿದೆ. ಮಹಿಳೆಯನ್ನು ಹುಟ್ಟಿನಿಂದ ವ್ಯವಸ್ಥೆಯ ಕಟ್ಟುಪಾಡಿನಲ್ಲಿ ಕಟ್ಟಿಹಾಕಲಾಗಿದೆ. ಬಸವಣ್ಣ,ಅಂಬೇಡ್ಕರ್, ರಾಜಾರಾಮ್ ಮೋಹನ್ ರಾಯ್ ಸೇರಿದಂತೆ ಅನೇಕರು ಮಹಿಳಾ ಸಮಾನತೆಗೆ ಹೋರಾಡಿದರು. ಮಹಿಳೆಯರು ಸಮಾಜದಲ್ಲಿ ಧ್ವನಿ ಎತ್ತಬೇಕು ಅಂದಾಗಲೇ ಬದುಕಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ ಪ್ರೇಮಕ್ಕೆ ಒಳಗಾಗದೆ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಗುರಿ ಮುಟ್ಟುವ ತನಕ ಶ್ರಮ ಪಡಬೇಕು ಶ್ರದ್ಧೆ ಶಿಸ್ತು ಶಿಕ್ಷಣದಿಂದ ಮೇಲೆ ಬರಲು ಸಾಧ್ಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಇವುಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಅದರಲ್ಲಿಯೂ ಅಪರಿಚಿತ ವ್ಯಕ್ತಿಗಳೊಂದಿಗೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಕಳಿಸಬಾರದು ಅದರಂತೆ ಅಪರಿಚಿತರನ್ನು ಸಹ ಸ್ವೀಕರಿಸಬಾರದು. ಮೊಬೈಲ್ ಬಳಕೆ ನಮ್ಮ ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಬೇಕು. ಎಲ್ಲ ಸವಾಲುಗಳನ್ನು ಎದುರಿಸಬೇಕು ಹಾಗೂ ಅಮೂಲ್ಯವಾದದ್ದು ನದಿಯಲ್ಲಿರುವ ಕಲ್ಲು ಬಂಡೆಯ ಹಾಗೆ ಗಟ್ಟಿಯಾಗಿ ನಿಂತು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಎಂದರೆ ವಿನಯ,ಸೇವೆ ಅರಿವು, ಹಾಗಾಗಿ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳಬೇಕು. ಹಾಗೂ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಸೈಬರ್ ಕ್ರೈಂ ಹೆಲ್ಪ್ ಲೈನ್ 1930, ಕರ್ನಾಟಕ ಹೆಲ್ಪ್ ಲೈನ್ 112 ಇವುಗಳ ಬಗ್ಗೆ ತಿಳಿದುಕೊಳ್ಳಬೇಕು ಯಾವುದೇ ಸಮಸ್ಯೆ ಆದಲ್ಲಿ ಕೂಡಲೇ ಈ ನಂಬರಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಗ್ರಾಮೀಣ ಮಹಿಳೆಯರು ಸೌಲಭ್ಯಗಳನ್ನು ಪಡೆಯಲು ಹೋರಾಡಬೇಕು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಅಂದಾಗ ಮಾತ್ರ ಸಮಾಜದಲ್ಲಿ ಬದಕಲು ಸಾಧ್ಯ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯಲ್ಲಿ ಹೇಳಿಕೊಳ್ಳಬಹುದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕ ಬೆಳವಾಟಿ ಗ್ರಾಮದ ವಿದ್ಯಾರ್ಥಿನಿ ತಮ್ಮ ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲವೆಂದು ಅಧ್ಯಕ್ಷರಿಗೆ ಸಮಸ್ಯೆ ಹೇಳಿಕೊಂಡರು. ಮಹಿಳಾ ಆಯೋಗ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದ್ರಿ ಅವರು ರಾಯಚೂರು ಜಿಲ್ಲೆ ಕೆಎಸ್‌ಆರ್‌ಟಿಸಿ ಎಂಡಿ ಅವರಿಗೆ ಕರೆ ಮಾಡಿ ಬೆಳವಾಟ್ಟಿ ದೂರವಾಣಿ ಕರೆ ಮಾಡಿ ಬೆಳವಾಟ್ಟಿ ಗ್ರಾಮಕ್ಕೆ ಶಾಲಾ ಕಾಲೇಜು ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು. ಪೊಲೀಸ್ ಠಾಣೆ ನಮಗೆ ತವರು ಮನೆ ಇದ್ದ ಹಾಗೆ ಏನೇ ಅನ್ಯಾಯ ನಡೆದರೂ ತಮಗೆ ರಕ್ಷಣೆ ನೀಡುತ್ತಾರೆ ಹಾಗೂ ನ್ಯಾಯ ಒದಗಿಸುತ್ತಾರೆ ಅದಕ್ಕೆ ಉದಾಹರಣೆ ಎಂದರೆ ಮಾಜಿ ಎಂಪಿ ಓರ್ವರಿಗೆ ಜೀವಾವಧಿ ಶಿಕ್ಷೆ ಆಗುವವರಿಗೆ ತನಿಖೆ ನಡೆಸಿ ದಾಖಲೆ ಒದಗಿಸಿರುವ ಕೆಲಸ ಮಾಡಿದವರು ನಮ್ಮ ಕರ್ನಾಟಕ ಪೊಲೀಸ್ ಎಂದು ಹೇಳಿದರು.
ಮಹಿಳೆಯರು ಶೋಷಣೆಯಿಂದ ಹೊರ ಬಂದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಸೋಲು, ಅವಮಾನ, ಸವಾಲು ಏನೇ ಬಂದರು, ಧೈರ್ಯವಾಗಿ ಎದುರಿಸಬೇಕು ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಹಾಗಾಗಿ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಯಶೋದ ವೆಂಟಗೋಡಿ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನ ಕಡೆ ಮಾತ್ರ ಗಮನ ಕೊಡಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಬಿದು ಜೀವನವನ್ನು ಹಾಳು ಮಾಡಿಕೊಳ್ಳದೆ ತಂದೆ ತಾಯಿ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಶೋಷಣೆ,ದೌರ್ಜನ್ಯ ಆದಾಗ ಧ್ವನಿ ಎತ್ತಬೇಕು ಪೊಲೀಸ್ ಠಾಣೆಗೆ ಬರಲು ಯಾವುದೇ ಅಳುಕು ಬೇಡ ಮಹಿಳೆಯರ ಸಮಸ್ಯೆಗೆ ಸದಾ ಸ್ಪಂದಿಸುತ್ತೇವೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರು ಶ್ರೀಮತಿ ರುಚಿ ಬಿಂದಾಲ್,ಅಪರ ಜಿಲ್ಲಾಧಿಕಾರಿ ನಾಗರಾಜ್ ಎಲ್, ಡಿಡಿಪಿಯು ಅಶೋಕ್ ಶಾಸ್ತ್ರಿ, ಮಹಿಳಾ ಮತ್ತು ಬಹಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಮತಿ ರೇವತಿ ಹೊಸಮಠ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಭಾರತೀಯ ಎಚ್, ತಹಶೀಲ್ದಾರ್ ಶರಣಮ್ಮ, ಕಾಲೇಜು ಪ್ರಾಂಶುಪಾಲ ಹಾಗೂ ಇತರರು ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾರ್ಯಕ್ರಮ ನಿರ್ಮಾಣ ಅಧಿಕಾರಿ ಶ್ರೀಮತಿ ಶೈಲಾ ಕುರಹಟ್ಟಿ ಸ್ವಾಗತಿಸಿದರು.ಶ್ರೀಮತಿ ಸುಮಂಗಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 