ಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ

ಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ  Chandaya Jayanti celebration of Sharan Nuli

ಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ  

ಕಾಗವಾಡ   10: ಕಾಯಕ ಸಮಾಜದ ಪ್ರಮುಖರಾದ ಂಬಿಗರ ಚೌಡಯ್ಯ,ನುಲಿಯ ಚಂದಯ್ಯ, ಸಮಗಾರ ಹರಳಯ್ಯ ಹಾಗೂ ಮಾದರ ಚನ್ನಯ್ಯನಂತಹ ಹಲವಾರು ಶರಣರು ಕಾಯಕದ ಶ್ರೇಷ್ಠತೆ ಸಾರಿದ ಮಹಾಪುರುಷರು, ಅವರು ಸಮಾಜದಲ್ಲಿ ತಮ್ಮ ಕಾಯಕಗಳಿಗೆ ಬೆಲೆಕೊಟ್ಟು ಜೀವಿಸಿದ್ದರು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ ಬಾಗಡಿ ಹೇಳಿದರು. ಅವರು ಮದಭಾವಿ ಗ್ರಾಮದಲ್ಲಿ ನೂಲಿಯ ಚಂದಯ್ಯ ಜಯಂತಿ ಆಚರಣೆ ಸಮೀತಿಯ ವತಿಯಿಂದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಯಾರು ಕೂಡ ಹುಟ್ಟುವ ಮುನ್ನ ಈ ಜಾತಿಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ, ಇವುಗಳ ಮದ್ಯೆ ನಾವು ಜಾತಿಯನ್ನು ತೊರೆದು ಮಾಡುವ ಕಾರ್ಯ ಶಾಸ್ವತ. ಅಂಥ ಕಾರ್ಯವನ್ನು ನಾವು ಮಾಡಬೇಕು ಎಂದರು. ಜಾತಿಯನ್ನು ತೊರೆದು ಕಾಯಕ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಸವಣ್ಣನವರ ಕೊಡುಗೆ ಅಪಾರ. 

 ನುಲಿಯ ಚಂದಯ್ಯ ಸಮುದಾಯದವರ ನಿಗಮ ಮಂಡಳಿ ರಚನೆ, ಸಮುದಾಯ ಭವನ ನಿರ್ಮಾಣ, ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಜಾಪ್ರತೀನೀಧಿ ಸ್ಥಾನಮಾನೆ ಶಾಸಕದ್ವಯರಾದ   ಸವದಿ, ರಾಜು ಕಾಗೆಯವರ ಕಡೆಯಿಂದ ವಿಶೇಷ ಅನುದಾನ ತಂದು ಶ್ರಮಿಸುವುದಾಗಿ ವಿನಾಯಕ ಬಾಗಡಿ ಹೇಳಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾದೇವ ಕೋರೆ ಮಾತನಾಡಿ ಕಲ್ಯಾಣವೆಂಬ ಪ್ರದೇಶದಲ್ಲಿ ಬಸವಣ್ಣನವರ ಸಮಕಾಲಿನರದ ಚಂದಯ್ಯನವರ ಕಾಯಕ ಹಗ್ಗ ಹೆಣೆಯುವುದು,ಅದರಿಂದಲೇ ಇವರನ್ನು ನುಲಿಯ ಚಂದಯ್ಯ ಎಂದು ಕರೆಯಲಾಗುತ್ತಿದೆ. ಲಿಂಗಕ್ಕಿಂತ ಕಾಯಕ ಶ್ರೇಷ್ಠ ಎಂದು ನಂಬಿದ್ದ ಚಂದಯ್ಯನವರನ್ನು ನಾಸ್ತಿಕರು ಎಂದು ಕೆಲವರು ದೂರಿದರು. ದಾಸೋಹದಲ್ಲಿ ನಂಬಿಗೆ ಇಟ್ಟಿದ್ದ ಚಂದಯ್ಯನವರು ಬಡವರಿಗೆ, ನಿರ್ಗತಿಕರಿಗೆ ಹಸಿದವರಿಗೆ ಹಂಚಿ ತಿನ್ನುವ ಸ್ವಭಾವದವರಾಗಿದ್ದರು ಎಂದು ತಿಳಿಸಿದರು.  

ಈ ವೇಳೆ ವಿನಾಯ ಬಾಗಡಿ ಹಾಗೂ ಮಹಾದೇವ ಕೋರೆ, ಅವರನ್ನು ಸನ್ದಮಾನಿಸಿದರು.ಮಾಜಿ ತಾ.ಪಂ ಅಧ್ಯಕ್ಷ ನಿಜಗುಣಿ ಮಗದುಮ್, ನುಲಿಯ ಚಂದಯ್ಯ ಯುವಕ ಮಂಡಳದ ಅಧ್ಯಕ್ಷ ಪ್ರಭು ಬಜಂತ್ರಿ,ಶಿವಾನಂದ ಮಗದುಮ್,ವಿಠ್ಠಲ ಅವಳೆ, ಸಿದ್ದು ಭಂಡಾರೆ, ರಾಹುಲ ಭಂಡಾರೆ,ವಿಠ್ಠಲ ಹೊನಕಾಂಡೆ, ವಿಠ್ಠಲ ಶಿಂಧೇ, ಬಾಹುಬಲಿಉಮದಿ, ಸಮಾಜದ ಮುಖಂಡರಾದ ಕುಮಾರ ಭಜಂತ್ರಿ, ಮಹಾದೇವ ಭಜಂತ್ರಿ, ಶೇಖರ ಭಜಂತ್ರಿ, ಅಶೋಕ ಭಜಂತ್ರಿ, ಶ್ರೀಕಾಂತ ಭಜಂತ್ರಿ, ರಾಖೇಶ ಭಜಂತ್ರಿ, ಶಂಕರ ಭಜಂತ್ರಿ, ನಾಗಪ್ಪ ಭಜಂತ್ರಿ, ಹಣಮಂತ ಭಜಂತ್ರಿ ಸೇರಿದಂತೆ ನೂರಾರು ಸಮಾಜದ ಮುಖಂಡರು ಗ್ರಾಮದ ನಾಯಕರು ಸೇರಿದಂತೆ ನೂರಾರು ಜನರಿದ್ದರು.ಪೊಟೋ ಶಿರ್ಷಿಕೆ(10-ಕಾಗವಾಡ-1) ಮದಭಾವಿ ಗ್ರಾಮದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ವಿನಾಯಕ ಬಾಗಡಿ, ಮಹಾದೇವ ಕೋರೆ ಹೂಮಾಲೆ ಭಾವಚಿತ್ರಕ್ಕೆ ಪೂಜೆ ಮಾಡಿ ಮೆರವಣಿಗೆಗೆ ಚಾಲನೆ ನೀಡುತ್ತಿರುವ ಚಿತ್ರ.