ಚಡಚಣ ಸಂಗಮೇಶ್ವರ ಜಾನುವಾರ ಜಾತ್ರೆ: ಪ್ರತಿ ವಗಿವಾಟಿಗೆ 5 ರೂ. ಗೆ ಪಡೆಯಲು ರೈತರ ಆಗ್ರಹ
Chadachana Sangameshwara cattle fair: Farmers demand to get Rs. 5 per hectare
ಚಡಚಣ 18: ರಂದು ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟಗಾರಗೆ ಹಾಗೂ ಖರೀದಿಗಾರರಿಗೆ ಪ್ರತಿ ವಹಿವಾಟಿಗೆ ರೂ.5 ಘೋಷಣೆ ಮಾಡುವಂತೆ ಆಗ್ರಹಿಸಿ ರೈತರು ಎಪಿಎಂಸಿ ಅಧಿಕಾರಿಗೆ ಮನವಿ ಶುಕ್ರವಾರ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ವಸಂತ ಬೈರಾಮಡಿ, ಜ.18 ರಂದು ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆ ಪ್ರಾರಂಭವಾಗುವದರಿಂದ ಜಾತ್ರೆಗೆ ಆಗಮಿಸುವ ರೈತರಿಂದ ಜಾತ್ರಾ ಸಮೀತಿಯವರು ಖರೀದಿದಾರರಿಗೆ ರೂ 100, ಮಾರಾಟಗಾರರಿಗೆ ರೂ.100 ವಸೂಲಿ ಮಾಡುತ್ತಿದ್ದಾರೆ.
ಈ ಹಣ ರೈತರಿಗೆ ಹೊರೆಯಾಗುತ್ತದೆ. ಆದುದರಿಂದ ಎಪಿಎಂಸಿ ನಿಯಮಾನುಸಾರ ಪ್ರತಿ ವಹಿವಾಟುದಾರರಿಗೆ 5 ರೂ ಪಡೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶ್ರೀಶೈಲ ದೈಗೊಂಡಿ, ಮುರಗೇಶ ಸಿಂಪಿ, ಪ್ರಕಾಶ ಬತಗುಣಕಿ, ಭೀಮಾಶಂಕರ ಉಮರಾಣಿ ಇದ್ದರು.- ಪ್ರತಿ ಜಾನುವಾರ ಜಾತ್ರೆಯಲ್ಲಿ ಎಪಿಎಂಸಿ ನಿಯಮಾನುಸಾರ ಪ್ರತಿ ಜಾನುವಾರ ವಹಿವಾಟಿಗೆ 5 ರೂ. ತೆಗೆದುಕೊಳ್ಳುವ ನಿಯಮವಿದೆ. ಪಟ್ಟಣದಲ್ಲಿ ಎಪಿಎಂಸಿ ವತಿಯಿಂದ ಜಾತ್ರೆ ನಡೆಸಲು ಸ್ಥಳಾವಕಾಶ ಇಲ್ಲದ ಕಾರಣ ಪಟ್ಟಣದ ಶ್ರೀ ಸಂಗಮೇಶ್ವರ ಸಂಸ್ಥೆಗೆ ಜಾತ್ರೆ ನಡೆಸಲು ಅನುಮತಿಸಿದೆ. ಅವರಿಗೂ ಪ್ರತಿ ಜಾನುವಾರು ವಹಿವಾಟಿಗೆ 5 ಪಡೆಯುವಂತೆ ತಿಳಿಸಿಲಾಗಿದೆ. ಐ.ಎಸ್. ಓರಾದಕರ ಎಪಿಎಂಸಿ ಅಧಿಕಾರೀ
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 