ದಾಸಶ್ರೇಷ್ಠ ಕನಕದಾಸ ಜಯಂತಿಯ ಸಂಭ್ರಮಾಚರಣೆ

ದಾಸಶ್ರೇಷ್ಠ ಕನಕದಾಸ ಜಯಂತಿಯ ಸಂಭ್ರಮಾಚರಣೆ Celebration of the birth anniversary of the great Dasasreshtha Kanakadasa


ಗಂಗಾವತಿ 08: ತಾಲ್ಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ“ಕನಕದಾಸಜಯಂತಿ”ಯನ್ನುಅತ್ಯಂತ ಸಂಭ್ರಮದಿಂದಆಚರಿಸಲಾಯಿತು. ಶಾಲೆಯಉಪಾಧ್ಯಕ್ಷರಾದ ನೆಕ್ಕಂಟಿ ಆದರ್ಶ್‌ ಅವರು ಕನಕದಾಸರ ಭಾವಚಿತ್ರಕ್ಕೆ ಮಾಲಾರೆ​‍್ಣಯನ್ನು ಮಾಡುವ ಮೂಲಕ ಪೂಜೆಯನ್ನು ನೆರವೇರಿಸಿದರು. 

ತದನಂತರಕನ್ನಡ ಭಾಷಾ ಶಿಕ್ಷಕರಾದ ಶಿವಪ್ಪ ಅವರು ಮಾತನಾಡಿಕನಕದಾಸರಜೀವನಚರಿತ್ರೆ,ತಿಮ್ಮಪ್ಪ ನಾಯಕ,ದಾಸ ಶ್ರೇಷ್ಠ ಕನಕದಾಸನಾಗಿ ಬದಲಾದರೀತಿ, ಸಮಾಜದಲ್ಲಿಜಾತಿ ಪದ್ದತಿ ಮನೆ ಮಾಡಿದಕಾಲದಲ್ಲಿ ಸಮಾನತೆಯನ್ನುತರಲು ಪ್ರಯತ್ನಿಸಿದ ಸಂದರ್ಭ, ಕನಕದಾಸರಅಭೂತಪೂರ್ವ ಭಕ್ತಿಯ ಪವಾಡಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿನಿಯರಾದ ಕುಮಾರಿರೋಷನ್ ಮತ್ತು ಕುಮಾರಿ ಸಾಕ್ಷಿ ಕನಕದಾಸರ ಕುರಿತು ಭಾಷಣವನ್ನು ಮಾಡಿದರು. 

ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಎಸ್‌.ಕೃಷ್ಣವೇಣಿ, ಪಿ.ಆರ್‌.ಎಮ್‌. ನಿಂಗಪ್ಪ, ವಸತಿ ನಿಲಯದ ಮುಖ್ಯನಿಲಯ ಪಾಲಕ ಕಾಳೇಶ್, ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.