ಶ್ರೀ ಮಹಾಯೋಗಿ ವೇಮನ ಜಯಂತ್ಯೋತ್ಸವ ಆಚರಣೆ
Celebration of the birth anniversary of Sri Mahayogi Vemana
ಯರಗಟ್ಟಿ, 20 : ತಾಲೂಕು ರೆಡ್ಡಿ ಸಮಾಜದ ಹಾಗೂ ತಾಲೂಕಾಡಳಿತ ಸಹಯೋಗದಲ್ಲಿ ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತ್ಯೋತ್ಸವ ಸಮಾರಂಭಕ್ಕೆ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಚಾಲನೆ ನೀಡಿದರು.
ನಂತರ ಮಾತನಾಡಿ ವಿಲಾಸಿ ಜೀವನವನ್ನು ಅನುಭವಿಸುತ್ತಿದ್ದ ಶ್ರೀ ವೇಮನರು ಅವರ ಅತ್ತಿಗೆ ಮಲ್ಲಮ್ಮನವರಿಂದ ಜಾಗೃತಿಗೊಂಡು ಯೋಗಿಯಾಗಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದರು.ಅವರಂತೆ ಎಲ್ಲಾ ಮಹನೀಯರ ಕಾರ್ಯಗಳನ್ನು ಸಮಾಜಕ್ಕೆ ಜಾಗೃತಿ ಮೂಡಿಸುವಂತಹ ಸರ್ಕಾರದ ಮಹತ್ತರ ಕಾರ್ಯವನ್ನು ಮಾಡುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಬಾಗಿಯಾಗುವಂತೆ ತಹಶೀಲ್ದಾರ ಸೂಚಿಸಿದರು.ರೆಡ್ಡಿ ಸಮಾಜದ ಮುಖಂಡ ವಿಶಾಲಗೌಡ ಪಾಟೀಲ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನು ಆದರ್ಶನೀಯವಾಗಿ ಬದುಕಲು ಬೇಕಾದಂತಹ ಎಲ್ಲಾ ಮಾರ್ಗಗಳನ್ನು ಆಗಿನ ಶರಣರು, ಮಹನೀಯರು ನಮಗೆ ಹಾಕಿಕೊಟ್ಟಿದ್ದಾರೆ.
ಆ ಎಲ್ಲಾ ಮಾರ್ಗಗಳನ್ನು ನಾವು ಅಳವಡಿಸಿಕೊಂಡು ಮುಂದಿನ ಪೀಳಿಗೆಯ ಮಕ್ಕಳಿಗೂ ಜಾಗೃತಿ ಮೂಡಿಸುವುದರೊಂದಿಗೆ ಸುಸಂಸ್ಕೃತಾಗಿ ಬಾಳೋಣಹಾಗೂ ಅಂದಿನ ಕಂದಾಚಾರ, ಮೂಡನಂಬಿಕೆಗಳನ್ನು ಹೋಗಲಾಡಿಸಲು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಪದ್ಯಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಮೇಲು ಕೀಳರಿಮೆಯನ್ನು ಹೋಗಲಾಡಿಸಿದವರಲ್ಲಿ ಶ್ರೀ ವೇಮನರೂ ಒಬ್ಬರಾಗಿದ್ದಾರೆಂದು ತಿಳಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪಶು ವೈದ್ಯಾಧಿಕಾರಿ ಎಂ ವ್ಹಿ ಪಾಟೀಲ, ಪಿಎ??? ಎಲ್ ಬಿ ಮಾಳಿ, ಎಎ??? ಬಿ. ಎಸ್. ರಂಗಣ್ಣವರ, ಎನ್. ಕೆ. ಹುಚ್ಚರಡ್ಡಿ, ವಿಠ್ಠಲಗೌಡ ದೇವರಡ್ಡಿ, ಸಿದ್ದು ದೇವರಡ್ಡಿ, ರಾಘವೇಂದ್ರ ದೇವರಡ್ಡಿ, ರಾಮಣ್ಣಾ ಪಾಟೀಲ, ಬಸವರೆಡ್ಡಿ ಗಣಿ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನಮಂತ ಹಾರುಗೊಪ್ಪ, ಸಲಿಂಬೇಗ ಜಮಾದಾರ ಮತ್ತು ರೆಡ್ಡಿ ಸಮುದಾಯದ ಮುಖಂಡರು ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 