ಶಿವಾಜಿ ಮಹಾರಾಜರ ಜಯಂತಿ ಆಚರಣೆ
ಗುರ್ಲಾಪೂರ 19: ಗ್ರಾಮದ ಸರಾರಿ ಶಾಸಕರ ಮಾದರಿ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಶಾಲೆಯ ಪದವೀಧರ ಮುಖ್ಯೋಪಾಧ್ಯಯ ಜಿ ಆರ್ ಪತ್ತಾರ ಇವರ ಅಧ್ಯಕ್ಷತೆಯಲ್ಲಿ ಛತ್ರಪತಿ ಶಿವಾಜಿಯವರ ಬಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪಾರ್ಚಣೆ ಮಾಡಲಾಯಿತು. ನಂತರ ಶಿವಾಜಿ ಮಹಾರಾಜರು ದೇಶಕ್ಕೆ ನೀಡಿದ ಸಾಧನೆಗಳೂ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮಕ್ಕಳಾದ ಐಶ್ವರ್ಯ ಸುಳ್ಳನವರ ಹಾಗೂ ಸತ್ತಿಗೇರಿ ಯವರು ಶಿವಾಜಿಯ ಬಾಲ್ಯ ಜೀವನ ಹಾಗೂ ತಾಯಿ ಜೀಜಾಮಾತೆ ಶಿವಾಜಿಗೆ ನೀಡಿದ ಶಿಕ್ಷಣದ ಬಗ್ಗೆ ಮಾತನಾಡಿದರು. ಶಿವಾಜಿ ಜಯಂತಿಯಲ್ಲಿ ಬಿ ಬಿ ಸಸಾಲಟ್ಟಿ, ಬಿ ವಾಯ ಮೋಮಿನ್, ಎಲ್ ಆರ್ ಸಾಲಿಮಠ, ಎಸ್ ಬಿ ದರೂರ, ಎ ಡಿ ಪಡಗಾನೂರ, ಜ್ಯೋತಿ ಕಾಳಪ್ಪಗೋಳ ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ವಿದ್ಯಾಶ್ರೀ ನೇಮಗೌಡರ ಸ್ವಾಗತಿಸಿ, ನಿರೂಪಿಸಿದರು. ಕವಿತಾ ಕಟಗಿ ವಂದಿಸಿದರು.