ಯಳವತ್ತಿ ಪಂಚಾಯಿತಿಯಲ್ಲಿ ಫ.ಗು. ಹಳಕಟ್ಟಿ ಅವರ ಜಯಂತಿ ಆಚರಣೆ

ಯಳವತ್ತಿ ಪಂಚಾಯಿತಿಯಲ್ಲಿ ಫ.ಗು. ಹಳಕಟ್ಟಿ ಅವರ ಜಯಂತಿ ಆಚರಣೆ Celebration of F.G. Halakatti's Jayanti at Yelavatti Panchayat

 ಲಕ್ಷ್ಮೇಶ್ವರ 02 : ಯಳವತ್ತಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ವಚನ ಪಿತಾಮಹ ಎಂದು ಪ್ರಖ್ಯಾತರಾದ ಫಕೀರ​‍್ಪ ಗುರುಬಸಪ್ಪ ಹಳಕಟ್ಟಿ (ಫ.ಗು. ಹಳಕಟ್ಟಿ) ಅವರು ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು ಫ.ಗು. ಹಳಕಟ್ಟಿ ಅವರ ಜಯಂತಿ ಆಚರಿಸಿ ಮಾತನಾಡಿದ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಸವಿತಾ ಎಸ್ ಹುನುಗುಂದ ಅವರು ಕನ್ನಡ ವಚನ ಸಾಹಿತ್ಯದ ಉದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು ಫ.ಗು ಹಳಕಟ್ಟಿ ಅವರು 12ನೇ ಶತಮಾನದ ಶರಣರ ಕಳೆದುಹೋಗಿದ್ದ ವಚನಗಳನ್ನು ಶೋಧಿಸಿ, ಸಂಪಾದಿಸಿ ಪ್ರಕಟಿಸುವ ಮೂಲಕ ಕನ್ನಡಿಗರಿಗೆ ಸಾಹಿತ್ಯಿಕ ಕೊಡುಗೆಯನ್ನು ನೀಡಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ ಜನನ ಜುಲೈ 2, 1880 ರಂದು ಧಾರವಾಡದಲ್ಲಿ ಜನಿಸಿದರು ಅವರ ತಂದೆ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ದಾನಾದೇವಿ ಇವರ ವಿದ್ಯಾಭ್ಯಾಸ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ನಡೆಯಿತು ನಂತರ ಮುಂಬೈನ ಸೇಂಟ್ ಝೇವಿಯರ್ಸ್‌ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಎಲ್‌.ಎಲ್‌.ಬಿ. (ಕಾನೂನು) ಪದವಿ ಪಡೆದರು. ಸಾಹಿತ್ಯದ ಪ್ರಭಾವ ಅವರ ತಂದೆಯವರು ಸಾಹಿತಿಯಾಗಿದ್ದ ಕಾರಣ ಇವರಿಗೆ ಬಾಲ್ಯದಿಂದಲೇ ಸಾಹಿತ್ಯದ ಒಲವಿತ್ತು ಮುಂಬೈನಲ್ಲಿ ಓದುತ್ತಿದ್ದಾಗ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಬೆಳೆಸಿಕೊಂಡರು.ವೃತ್ತಿ ಜೀವನ ಮತ್ತು ಸಮಾಜ ಸೇವೆ 1904 ರಲ್ಲಿ ಕಾನೂನು ಪದವಿ ಮುಗಿಸಿ, ವಿಜಯಪುರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ವಿಜಯಪುರದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಸಿದ್ಧೇಶ್ವರ ಬ್ಯಾಂಕ್ ಮತ್ತು ಹಲವಾರು ಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದರು.ಪತ್ರಿಕೋದ್ಯಮ ವಚನ ಸಾಹಿತ್ಯ ಮತ್ತು ತತ್ತ್ವಗಳ ಪ್ರಚಾರಕ್ಕಾಗಿ 1926 ರಲ್ಲಿ ’ಶಿವಾನುಭವ’ ಮಾಸಿಕ ಪತ್ರಿಕೆ ಮತ್ತು 1927 ರಲ್ಲಿ ’ನವ ಕರ್ನಾಟಕ’ ವಾರಪತ್ರಿಕೆಯನ್ನು ಆರಂಭಿಸಿದರು.ವಚನ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಅಪಾರವಾಗಿದೆ ಇಂಥ ಮಹನೀಯರನ್ನು ನಾವು ನೆನೆಯುವದರ ಮೂಲಕ ಅವರ ಆದರ್ಶ ಜೀವನವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರುಈ ಸಮಯದಲ್ಲಿ ಪಂಚಾಯತಿಯ ಕಾರ್ಯದರ್ಶಿ ಯಲ್ಲಪ್ಪ ಹರಿಜನ ಬಸವರಾಜ ಅರ್ಕಸಾಲಿ ಸೇರಿದಂತೆ ಪಂಚಾಯ್ತಿಯ ಎಲ್ಲ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಇದ್ದರು.