ಸಂಭ್ರಮದ ಗುರು ಹಾಲಸ್ವಾಮೀಜಿ ಮುಳ್ಳು ಗದ್ದುಗೆ ಉತ್ಸವ

ಸಂಭ್ರಮದ ಗುರು ಹಾಲಸ್ವಾಮೀಜಿ ಮುಳ್ಳು ಗದ್ದುಗೆ ಉತ್ಸವ  

ಹೂವಿನ ಹಡಗಲಿ 15:   ತಾಲೂಕಿನ ನಾಗತಿಬಸಾಪುರ ಗ್ರಾಮದ  ಗುರುಹಾಲಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತ ಗುರುಹಾಲಸ್ವಾಮಿ ಮಠದ ತೆಗ್ಗಿನ ಗಿರಿರಾಜ ಹಾಲಸ್ವಾಮಿಗಳ ಮುಳ್ಳು ಗದ್ದುಗೆ ಉತ್ಸವಕ್ಕೆ ಭಕ್ತ ಸಮೂಹದೊಡನೆ ವಿಜೃಂಭಣೆಯಿಂದ ಗುರುವಾರ ರಾತ್ರಿ 10.30ಕ್ಕೆ ಜರುಗಿತು. ಗ್ರಾಮದಲ್ಲಿ   ಗುರುಹಾಲಸ್ವಾಮೀಜಿಗಳ ಮುಳ್ಳುಗದ್ದುಗೆಯನ್ನು ಆರೋಹಣ  ಮಾಡಿದಾಗ ನೆರೆದ ಭಕ್ತ ಸಮೂಹ ಪುಳಕಿತಗೊಂಡಿತು.  

ನಂತರ ಹೊರಟ ಮುಳ್ಳುಗದ್ದುಗೆ ಮೆರವಣಿಗೆಯಲ್ಲಿ ಕೇವಲ ಅಡಕೆ ಹಾಳೆಯ ಕೌಪೀನ ಮಾತ್ರ ಧರಿಸಿದ್ದ ಸ್ವಾಮಿಗಳು ಎರಡು ಅಂಗುಲ ಉದ್ದವಾದ ಜಾಲಿ ಮುಳ್ಳುಗಳನ್ನು ಪೃಷ್ಠ ಭಾಗದಿಂದ ತುಳಿಯುವ ದೃಶ್ಯ ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ರಾತ್ರಿ 10.30ರಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬೆಳಿಗ್ಗೆ 4 ಗಂಟೆವರೆಗೆ ಜರುಗಿತು. ಈ ಮೆರವಣಿಗೆಯಲ್ಲಿ ಭಜನೆ, ಡೊಳ್ಳುಕುಣಿತ, ನಂದಿಕೋಲು ಕುಣಿತ ಗಮನ ಸೆಳೆಯಿತು.ಎಂ.ಪಿ.ಎಂ.ಮಂಜುನಾಥ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಮಹೋತ್ಸವ ಗಮನ ಸೆಳೆಯಿತು.