ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ : ತಹಶೀಲ್ದಾರ ಮನವಿ
Celebrate festivals with harmony: Tahsildar appeals
ಬೀಳಗಿ 28 : ಹಬ್ಬದ ಸಮಯದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಸರ್ವ ದಾರ್ಮಿಕ ಮುಖಂಡರಿಗೆ ಸಿಪಿಐ ಹಣಮಂತ ಸಣಮನಿ ಹಾಗೂ ತಹಶೀಲ್ದಾರ ವಿನೋದ ಹತ್ತಳ್ಳಿ ಜಂಟಿಯಾಗಿ ಮನವಿ ಮಾಡಿಕೊಂಡರು. ಬೀಳಗಿ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಾಗೂ ರಮಜಾನ ಪೂರ್ವಭಾವಿ ಕರೆದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಬ್ಬ ಹರಿದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಜೊತೆ ನಿಮ್ಮ ಸಹಕಾರ ಅಷ್ಟೇ ಮುಖ್ಯ.
ಬೀಳಗಿ ತಾಲೂಕು ಜಿಲ್ಲೆಯಲ್ಲೇ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವ ಪ್ರತೀತಿ ಮೊದಲಿನಿಂದಲು ಇದೆ. ಇಲ್ಲಿಯವರೆಗೆ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರುವ ಉದಾಹರಣೆಗಳೆ ಇಲ್ಲಾ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಹೋಳಿ ಹಬ್ಬ ಬಣ್ಣದ ದಿನ ಹೆಣ್ಣು ಮಕ್ಕಳಿಂದ ನಡೆಯುವ ಹಾಡು-ಕುಣಿತ ರಸಮಂಜರಿಗೆ ಅವಕಾಶ ಕಲ್ಪಿಸಿಕೊಡುವುದು-ಬಿಡುವುದು ನಾವು ನಿರ್ಣಯ ತೆಗೆದುಕೊಳ್ಳುತ್ತೇವೆ. ಕಳೆದ ಬಾರಿ ಬಸ್ ನಿಲ್ದಾಣ ಬಳಿಯಿರುವ ರಸ್ತೆಯಲ್ಲಿ ಆಯೋಜಿಸಿದ ಹಾಡು-ಕುಣಿತ ರಸಮಂಜರಿ ವೇದಿಕೆ ಕಾರ್ಯಕ್ರಮದಿಂದ ಬಣ್ಣ ಆಡದ ವೃದ್ಧರಿಗೆ, ಮಹಿಳೆಯರಿಗೆ, ಬೇರೆಡೆಗೆ ಹೋಗುವ ಪ್ರಯಾಣಿಕರಿಗೆ, ವಾಹನಗಳಲ್ಲಿ ತೆರಳುತ್ತಿರುವ ಸಾರ್ವಜನಿಕರಿಗೆ ತುಂಬಾ ತೊಂದರೆಗಳಾಗಿವೆ. ಈ ಬಾರಿ ಬೇರೆಯವರಿಗೆ ತೊಂದರೆ ಯಾಗದಂತೆ ಹೋಲಿ ಆಡಬೇಕು, ಪಿಯು ಪರೀಕ್ಷೆಗಳು ಇರುವುದರಿಂದ ಪರೀಕ್ಷೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದರು.
ರಾಜು ಬೋರ್ಜಿ ಮಾತನಾಡಿ, ಹೆಣ್ಣು ಮಕ್ಕಳನ್ನು ಕರೆಸಿ ಹಾಡು-ಕುಣಿತ ರಸಮಂಜರಿ ಬಂದ್ ಆಗಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದರು. ಮುತ್ತು ಬೋರ್ಜಿ ಮಾತನಾಡಿ, ಕಳೆದ ಬಾರೆಯಂತೆ ಹಾಡು-ಕುಣಿತದ ಜೊತೆಗೆ ಬಣ್ಣ ಆಡುವುದರಿಂದ ಹೋಳಿ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಯುವಕರಲ್ಲಿ ಬಣ್ಣ ಆಡಿದ ಖುಷಿ ಮೂಡುತ್ತದೆ ಎಂದರು. ಸಂಗಪ್ಪ ಗಾಳಿ ಮಾತನಾಡಿ, ಬಸವ ವೃತ್ತದಲ್ಲಿ ದಿ.3ರಂದು ಸಂಜೆ ಹಲಗಿ ಮೇಳ ಇರುತ್ತದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಆಯೋಜನೆ ಮಾಡಿ ಎಂದರು. ನಿಂಗಪ್ಪ ದಂದರಗಿ, ಶಿವನಗೌಡ ಪಾಟೀಲ್, ಸಿದ್ದು ಮಾದರ, ಹಾಸಿಮಪೀರ ಮುಜಾವರ, ಮಂಜುಳಾ ಮೇರಾಕರ ಮಾತನಾಡಿದರು. ಮಹಾದೇವ ಬೋರ್ಜಿ, ಸಿದ್ದಪ್ಪ ಮೇಟಿ, ಅಜ್ಜು ಬಾಯಸರಕಾರ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 