ಜಾತಿ ಗಣತಿ: ನಾಳೆ ಪಂಚಮಸಾಲಿ ಲಿಂಗಾಯತ ರಾಜ್ಯ ಕಾರ್ಯಕಾರಣಿ ಸಭೆ

ಜಾತಿ ಗಣತಿ: ನಾಳೆ ಪಂಚಮಸಾಲಿ ಲಿಂಗಾಯತ ರಾಜ್ಯ ಕಾರ್ಯಕಾರಣಿ ಸಭೆ  Caste Census: Panchmasali Lingayat State Working Committee meeting tomorrow

ಜಾತಿ ಗಣತಿ: ನಾಳೆ ಪಂಚಮಸಾಲಿ ಲಿಂಗಾಯತ ರಾಜ್ಯ ಕಾರ್ಯಕಾರಣಿ ಸಭೆ  

ಚಿಕ್ಕೋಡಿ 12: ಹಿಂದುಳಿದ ವರ್ಗದ ಆಯೋಗದಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಪಂಚಮಸಾಲಿ ಲಿಂಗಾಯತರು ಯಾವುದನ್ನು ನಮೂದಿಸಬೇಕೆಂದು ಚರ್ಚೆ ನಡೆಸಲು ಸೆ.14 ರಂದು ಚಿಕ್ಕೋಡಿಯ ಕೇಶವ ಕಲಾ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಪಂಚಮಸಾಲಿ ಲಿಂಗಾಯತ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲು ತಿರ್ಮಾನಿಸಲಾಗಿದೆ. ರಾಜ್ಯದ ಎಲ್ಲ ಘಟಕದ ಪದಾಧಿಕಾರಿಗಳು ಈ ಚಿಂತನಾ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈಗಾಗಲೇ ಮೊದಲ ಚಿಂತನಾ ಸಭೆಯನ್ನು ವಿಜಯಪೂರ ನಗರದಲ್ಲಿ ಕರೆದು ಚರ್ಚೆ ನಡೆಸಲಾಗಿತ್ತು. ಆದರೂ ಮತ್ತೊಮ್ಮೆ ಸಭೆ ಮಾಡಬೇಕೆಂದು ಕಾರ್ಯಕಾರಣಿ ಸದಸ್ಯರ ಮನವಿ ಮೇರೆಗೆ ಚಿಕ್ಕೋಡಿಯಲ್ಲಿ ಎರಡನೆ ರಾಜ್ಯ ಕಾರ್ಯಕಾರಣಿ ಸಭೆ ಕರೆಯಲಾಗಿದೆ. ಎಲ್ಲ ಲಿಂಗಾಯತ ಪಂಚಮಸಾಲಿ ವಿವಿಧ ಘಟಕಗಳ ಪದಾಧಿಕಾರಿಗಳು ಆಗಮಿಸಿ ಸಲಹೆ ಸೂಚನೆ ನೀಡಬೇಕು ಎಂದರು. 

ಕರ್ನಾಟಕದಲ್ಲಿ ವಿವಿಧ ಲಿಂಗಾಯತ ಸಂಘಟನೆಗಳು ಸಾಮಾಜಿಕ ಜಾಲತಾನದಲ್ಲಿ ಇದನ್ನೇ ನಮೂಧಿಸಲು ಸುಳ್ಳು ಮಾಹಿತಿ ಹರಿದು ಬಿಡುತ್ತಿದ್ದಾರೆ.ಅದನ್ನು ಯಾರು ನಂಬಬಾರದು. ಪಂಚಮಸಾಲಿ ಲಿಗಾಯತ್‌ರು ಇದನ್ನೇ ನಮೂಧಿಸಬೇಕೆಂದು ಪಂಚಮಸಾಲಿ ಲಿಂಗಾಯತ ಕಾರ್ಯಕಾರಣಿ ಅಂತಿಮಗೊಳಿಸಿದ ಮೇಲೆ ಜಾತಿ ಗಣತಿ ಕಾಲಂದಲ್ಲಿ ನಮೂದಿಸಬೇಕು ಎಂದರು. 

ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಹರಗಾಪೂರೆ, ಸುಧಾಕರ ಪಾಟೀಲ, ಮಹಾದೇವ ಬೆಂಡವಾಡೆ, ಎಂ.ಎಸ್‌.ಈಟಿ, ಚಿದಾನಂದ ಕಪಲಿ, ನಾಗಪ್ಪ ಹುಕ್ಕೇರಿ ಮುಂತಾದವರು ಇದ್ದರು.