ಜಾತಿಗಣತಿ: ಧರ್ಮಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದು ನಮೂದಿಸಿ
Caste Census: Enter Hindu in the religion column and Panchamasali Lingayat in the caste column.
ಜಾತಿಗಣತಿ: ಧರ್ಮಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದು ನಮೂದಿಸಿ
ಅಥಣಿ 11: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದೇ ನಮೂದಿಸಬೇಕು ಎಂದು ಅಥಣಿ ತಾಲೂಕಾ ಪಂಚಮಸಾಲಿ ಸಮಾಜ ಬಂಧುಗಳು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಭೆ ಸೇರಿ ಒಗ್ಗಟ್ಟಿನ ನಿರ್ಧಾರ ಪ್ರಕಟಿಸಿದರು.
ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಮಾಜ ಬಾಂಧವರ ಸಭೆ ಕರೆದು ಸಭೆಯಲ್ಲಿ ಸಮಾಜ ಬಾಂಧವರ ಅಭಿಪ್ರಾಯ ಪಡೆದು ಸೆ.17 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಸಭೆಯಲ್ಲಿ ಜಾತಿ ಕಾಲಂನ 1010 ಸಂಖ್ಯೆಯಲ್ಲಿರುವ ಪಂಚಮಸಾಲಿ ಲಿಂಗಾಯತ ಮತ್ತು 1367 ರ ಸಂಖ್ಯೆಯಲ್ಲಿ ನಮೂದಿಸಿರುವ ವೀರಶೈವ ಪಂಚಮಸಾಲಿ ಈ ಎರಡರಲ್ಲಿ ಯಾವುದನ್ನು ನಮೂದಿಸಬೇಕು ಎನ್ನುವುದನ್ನು ಸಭೆಯಲ್ಲಿ ನಿರ್ಧಾರ ಮಾಡಿ ಸಮಾಜದ ಕಟ್ಟಕಡೆಯ ಬಾಂಧವರ ವರೆಗೂ ತಲುಪಿಸುತ್ತೇವೆ ಎಂದರು.
ಈಗಾಗಲೇ ಎಳೆಂಟು ಜಿಲ್ಲೆಗಳಲ್ಲಿ ಸಮಾಜದ ರಾಜ್ಯ ಅಧ್ಯಕ್ಷರಾದ ಸೋಮನಗೌಡ ಮಾಲಿಪಾಟೀಲರ ಜೊತೆಗೆ ಪ್ರವಾಸ ಕೈಗೊಂಡು ಸಮಾಜದ ಬಂಧುಗಳ ಅಭಿಪ್ರಾಯ ಪಡೆದುಕೊಂಡಿರುವೆ ಎಲ್ಲ ಜಿಲ್ಲೆಗಳಲ್ಲಿಯೂ ಸಮಾಜ ಬಾಂಧವರು ತಮ್ಮ ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ ಜೊತೆಗೆ ಸೆ.17 ರ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಒಗ್ಗಟ್ಟಿನಿಂದ ನಿರ್ಧಾರ ಮಾಡಿದ್ದಾರೆ ಎಂದ ಅವರು ಬೇರೆ ಯಾವುದೇ ಹೇಳಿಕೆ ಅಥವಾ ಮಾತುಗಳಿಗೆ ಮನ್ನಣೆ ಕೊಡದೇ ಪಂಚಮಸಾಲಿ ಸಮಾಜ ಸಂಘಟನೆಯ ನಿರ್ಧಾರವನ್ನೇ ಬೆಂಬಲಿಸಿ ಆಗಲೇ ನಮ್ಮ ಜಾತಿಯ ಸಂಖ್ಯೆ ನಿಖರವಾಗಿ ಲಭ್ಯವಾಗುತ್ತದೆ ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚನಸಾಲಿ ಸಮಾಜ ಸಂಘಟನೆಯ ರಾಜ್ಯ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ರಾಜ್ಯದ 18 ಜಿಲ್ಲೆಗಳಲ್ಲಿ ಪಂಚಮಸಾಲಿ ಸಮಾಜದ ಸಂಘಟನೆ ಬೆಳೆಯಲು ಅಥಣಿ ತಾಲೂಕಿನ ಪಂಚಮಸಾಲಿ ಸಮಾಜ ಬಾಂಧವರೇ ಕಾರಣವಾಗಿದ್ದು, ಪಂಚಮಸಾಲಿ ಸಮಾಜದ ಸಂಘಟನೆ ಪ್ರಾರಂಭಗೊಂಡಿದ್ದು ಅಥಣಿಯಿಂದಲೇ ಎಂದ ಅವರು ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿಯೇ 400 ಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ವಕೀಲರು ಕಾರ್ಯನಿರ್ವಹಿಸುತ್ತಿರುವುದು ನಮ್ಮ ಸಂಘಟನೆಯ ಬಲ ಹೆಚ್ಚಿದೆ ಎಂದರು
ಇಂದು ರಾಜ್ಯದ 129 ತಾಲೂಕುಗಳಲ್ಲಿ ಪಂಚಮಸಾಲಿ ಸಮಾಜದ ಸಂಘಟನೆಗಳಿದ್ದು, ವಿಜಯಪುರ, ಕೊಪ್ಪಳ, ಧಾರವಾಡ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರಿದ್ದಾರೆ ಎಂದ ಅವರು ವೀರಶೈವ ಮಹಾಸಭೆ, ಲಿಂಗಾಯತ ಮಹಾ ಸಭೆಯವರು ಎನೆನೋ ಹೇಳಿಕೆ ಕೊಡುವ ಮೂಲಕ ಮೋಸ ಮಾಡುತ್ತಾರೆ ಅವರನ್ನು ನಂಬ ಬೇಡಿ, ಇದೇ ತಿಂಗಳ 17 ರಂದು ಪಂಚಮಸಾಲಿ ಸಮಾಜದ 60 ಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಮಠಾಧೀಧರನ್ನು ಶಾಸಕರನ್ನು, ಸಚಿವರನ್ನು, ಮಾಜಿ ಶಾಸಕರನ್ನು ಈಗಾಗಲೇ ಸಭೆಗೆ ಆವ್ಹಾನಿಸಿದ್ದು, ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿ ಕೈಗೊಳ್ಳುವ ನಿರ್ಧಾರಕ್ಕೆ ಸಮಾಜ ಬಾಂಧವರು ಬದ್ಧರಾಗಿರಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಮುಖಂಡ ಶಿವು ಗುಡ್ಡಾಪುರ, ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ ಹೀಗಾಗಿ ಜಾತಿ ಗಣತಿಯಲ್ಲಿ ಏನನ್ನು ನಮೂದಿಸಬೇಕು ಎನ್ನುವುದನ್ನು ನಿರ್ಧಾರ ಮಾಡಿ ಹೇಳಿ ಆ ಪ್ರಕಾರ ಸಮಾಜ ಬಾಂಧವರಿಗೆ ಮಾಹಿತಿ ಕೊಡುತ್ತೇವೆ ಎಂದ ಅವರು ಒಟ್ಟಾರೆಯಾಗಿ ನಮ್ಮ ನಿರ್ಧಾರ ಮುಂದಿನ ದಿನಗಳಲ್ಲಿ ಸಮಾಜದ ಯುವ ಪಿಳಿಗೆಗೆ ಸರಕಾರಿ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.
ನ್ಯಾಯವಾದಿ ಡಿ.ಬಿ.ಠಕ್ಕಣ್ಣವರ ಸ್ವಾಗತಿಸಿದರು, ರಾಮನಗೌಡ ಪಾಟೀಲ ನಿರೂಪಿಸಿದರು.
ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ, ಸಮಾಜದ ಮುಖಂಡರಾದ ಗುರುಲಿಂಗ ಗುಮತಾಜ, ಸುರೇಶ ಚಿಕ್ಕಟ್ಟಿ, ರಾಜಶೇಖರ ಗುಡೋಡಗಿ, ಶಿವರುದ್ರ ಘೂಳಪ್ಪನವರ, ಶಿವಾನಂದ ಮಾಲಗಾಂವಿ, ಮುರುಘೇಶ ಪಾಟೀಲ, ಕೆ.ಆರ್.ಪಾಟೀಲ, ವಿಜಯ ನೇಮಗೌಡ, ಸುರೇಶ ವಾಡೇದ, ಈರಗೌಡ ಪಾಟೀಲ, ಕುಮಾರ ಪಾಟೀಲ, ರಾಮು ಗುಮತಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 