ದೇಶದಲ್ಲಿಯೇ ಸಿ.ಬಿ.ಎಸ್‌.ಈ. ಶಾಲೆ ಮಾದರಿಯಾಗಿದೆ-ಮಹೇಶ ಬೆಲ್ಲದ

ದೇಶದಲ್ಲಿಯೇ ಸಿ.ಬಿ.ಎಸ್‌.ಈ. ಶಾಲೆ ಮಾದರಿಯಾಗಿದೆ-ಮಹೇಶ ಬೆಲ್ಲದ CBSE schools are the model in the country - Mahesh Bellada

              ಸಂಕೇಶ್ವರ 11: ವರದಿ ಎಂ.ಬಿ. ಘಸ್ತಿ ಸಿ.ಬಿ.ಎಸ್‌.ಈ. ಹಾಯಸ್ಕೂಲ ದೇಶದಲ್ಲಿಯೇ ಮಾದರಿಯಾಗಿದೆ ಇಲ್ಲಿ ಶಿಕ್ಷಕರು ಒಳ್ಳೆಯ ಗುಣಮಟ್ಟದ ವಿದ್ಯಾರ್ಥಿಗಳಿಗೆ ಬೋಧಿಸುವುದು ವಿಶೇಷವಾಗಿದೆ ಎಂದು "ಉಡಾನ 12" ಮುಕ್ತಾಯ ಕಾರ್ಯಕ್ರಮದಲ್ಲಿ ಸಿ.ಇ.ಓ. ಆನಲೈನ್ ಇನ್ಸು-್ಟ್ರಮೆಂಟ ್ಘ ಮ್ಯಾಶಬೆಲ್ ಇಂಡಸ್ಟ್ರೀಸ್ ಬೆಂಗಳೂರು ಮಹೇಶ ಬೆಲ್ಲದ ಇವರು ಮುಂದುವರೆದು ಮಾತನಾಡುತ್ತಾ ಶಿಕ್ಷಕರು ಆರೋಗ್ಯದ ಬಗ್ಗೆ ತಿಳುವಳಿಕೆ ಶಿಸ್ತು ಇವುಗಳನ್ನು ಮೂಡಿಸಬೇಕು ಮತ್ತು ಅವರಿಗೆ ಒಳ್ಳೆಯ ಗುರಿ ಹೊಂದಲು ಶಿಕ್ಷಕರು ಪ್ರಯತ್ನ ಮಾಡಬೇಕು, ಉತ್ತರ ಕರ್ನಾಟಕದಲ್ಲಿ ಸುಮಾರು ಒಂದು ಸಾವಿರು ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದೇವೆ ಮತ್ತು 300 ಅಭಿಯಂತರನ್ನು ನೇಮಕ ಮಾಡಿಕೊಂಡಿದ್ದೇವೆ, ಬೋಮರಡ್ಡಿ ಕಾಲೇಜ, ನಿಡಸೋಶಿ ಪಾಲಿಟೆಕ್ನಿಕ ಕಾಲೇಜದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಮಾಡಿಕೊಡಲಾಗಿದೆ,

             ಅಮೇರಿಕೆಯ ಕಂಪನಿಯು ಸಹ ನಮ್ಮ ಜೊತೆಗೆ ಸಹಕರಿಸಲು ಮುಂದಾಗಿವೆ ಇದರಿಂದ ಯುವಕರಿಗೆ ಇನ್ನೂ ಹೆಚ್ಚಿನ ಉದ್ಯೋಗ ಬೆಳೆಯುವ ಅವಕಾಶಗಳು ಇವೆ ಎಂದು ವಿದ್ಯಾರ್ಥಿಗಳು ತಾವು ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು. ಇದೆ ಸಂದರ್ಭದಲ್ಲಿ ಅಡ್ಮಿನಿಸ್ಟ್ರೇಟರ ಗ್ರೇಟರ್ ಬೆಂಗಳೂರು ಅಥೋರಿಟಿ ರವೀಂದ್ರ ಕರಲಿಂಗನವರ ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮಲ್ಲಿ ಗುರಿ ಹೊಂದಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗಡಿ ಭಾಗದ ಶಿಕ್ಷಣ ಕಾಶಿಯಲ್ಲಿ "ಉಡಾನ 12" ಸಾಂಸ್ಕೃತಿಕ ಹಬ್ಬದ ಕೊನೆಯ ದಿನದಂದು ಶಿಕ್ಷಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗುರಿ ಹೊಂದುವ ಶಿಕ್ಷಣ ವಿನಯತೆ ನಮ್ರತೆ ಭಾರತೀಯ ಸಂಸ್ಕೃತಿ ಇವುಗಳೆನ್ನಲ್ಲಿ ಬೋಧಿಸಿದರೆ ಮಾತ್ರ ಅವರು ಒಳ್ಳೆಯ ಪ್ರಜೆಯಾಗಲು ತಾವು ಸಹಕರಿಸಬೇಕೆಂದು ಹೇಳಿದಲ್ಲದೇ

              ಬೆಳಗಾವಿಯ ಸಿ.ಬಿ.ಎಸ್‌. ಹಾಯಸ್ಕೂಲಕ್ಕಿಂತ ತಮ್ಮ ಸಿ.ಬಿ.ಎಸ್‌. ಶಾಲೆಯು ಕಡಿಮೆ ಇಲ್ಲವೆಂದು ಇದೆ ಸಂದರ್ಭದಲ್ಲಿ ಹೇಳಿದರು ಪ್ರಾರಂಭದಲ್ಲಿ ಸಮಾರಂಭದಲ್ಲಿ ಆಗಮಿಸಿದ ಅತಿಥಿಗಳಿಂದ ದೀಪ ಪ್ರಜ್ವಲಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಸಮಾರಂಭದಲ್ಲಿ ಮುಖ್ಯ ಅತಿಥಿಗಳು ಮತ್ತು ಸಂಘದ ನಿರ್ದೇಶಕರು ಸಂಘದ ಕಾರ್ಯದರ್ಶಿಗಳು ಇನ್ನುಳಿದ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು, ಈ ಸಮಾರಂಭವು ಎಸ್‌.ಡಿ.ವ್ಹಿ.ಎಸ್‌. ಸಂಘದ ಎ.ಬಿ.ಪಾಟೀಲ ಪಬ್ಲಿಕ ಸ್ಕೂಲ ಆವರಣದಲ್ಲಿ ಈ ಸಮಾರಂಭವು ಜರುಗಿತು, ಭಾರತಿ ಕುಂಕುರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು,