ದಿನನಿತ್ಯದ ಚಟ ಮಾಡಲು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ ಬ್ಯಾಡಗಿ ಆರಕ್ಷಕ ಸಿಬ್ಬಂದಿ

ದಿನನಿತ್ಯದ ಚಟ ಮಾಡಲು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ ಬ್ಯಾಡಗಿ ಆರಕ್ಷಕ ಸಿಬ್ಬಂದಿ Byadagi police arrest a thief accused of stealing to fuel his daily addiction

ಬ್ಯಾಡಗಿ 04 :  ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ದಿನಾಂಕ 06.01.2026 ರಂದು ಬೆಳಗ್ಗಿನ ಜಾವ 5.50 ರ ಸುಮಾರಿಗೆ ಗ್ರಾಮದ ಹಾಲ ಸ್ವಾಮಿ ಮಠದ ಹತ್ತಿರ ಪಿರ್ಯಾದುದಾರರು ಇರುವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಬಾಗಿಲನ್ನು ಮುರಿದು ಬೀರುವಿನಲ್ಲಿದ್ದ ಸುಮಾರು ಒಟ್ಟು 13.74,500 ಲಕ್ಷ   ಕಿಮ್ಮತ್ತಿನ 111. 750 ಮಿಲಿ ತೂಕದ ಬಂಗಾರ ಆಭರಣಗಳನ್ನು ಹಾಗೂ ಒಟ್ಟು 44,800 ಗಳ ಕಿಮ್ಮತ್ತಿನ 355 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು ಬ್ಯಾಡಗಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು ಸದರಿ ಪೊಲೀಸರು ಆರೋಪಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಯಶೋಧ ವಂಟಗೋಡಿ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಲಕ್ಷ್ಮಣ್ ಶಿರೋಳಕರ ಮತ್ತು ಗಿರಿಮಲ್ಲ ತಳಕಟ್ಟಿ ಡಿವೈಎಸ್ಪಿ ಹಾವೇರಿ ವಿಭಾಗ ಅವರ ಮಾರ್ಗದರ್ಶನದಲ್ಲಿ ಸದರಿ ತಾಲೂಕಿನ ತನಿಖಾಧಿಕಾರಿಗಳಾದ ವೃತ್ತ ನೀರೀಕ್ಷಕರಾದ ಎಂ. ಬಿ ಚಿಕ್ಕಣ್ಣನವರ್ ಇವರ ನೇತೃತ್ವದಲ್ಲಿ ಪಿಎಸ್‌ಐ ಭಾರತಿ ಕುರಿ. ಮತ್ತು ಪಿಎಸ್‌ಐ ಎನ್ಕೆ ನಿಂಗೇನಹಳ್ಳಿ.

ಪರಮೇಶ್ ಡಿಜೆ ಪಿಎಸ್‌ಐ ಮತ್ತು ಎನ್ ಹೆಚ್ ದೊಡ್ಡಮನಿ ಪಿಎಸ್‌ಐ ಹಾಗೂ ಇಲಾಖೆಯ ಸಿಬ್ಬಂದಿಗಳ ಒಳಗೊಂಡು ತನಿಖೆ ರಚಿಸಿ ಹಲವು ಆಯಾಮಗಳ ಮೂಲಕ ತನಿಕೆ ಕೈಗೊಂಡು ಖಚಿತ ಮಾಹಿತಿಯ ಮೇರೆಗೆ ಮತ್ತು ತಾಂತ್ರಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಿಯನ್ನು ಕಾನೂನು ಸಂಘರ್ಷಕ್ಕೆ ಒಳಗಾಗದೆ ಪತ್ತೆ ಮಾಡಿ ಬಾಲಕನನ್ನು  ಹಿಡಿಯಲಾಗಿದೆ. "ಸದರಿ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಪ್ರಶಂಶಿಸಿ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ".ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಡಿವೈಎಸ್ಪಿ ಗಿರಿಮಲ್ಲ ತಳ ಕಟ್ಟಿ. ಬ್ಯಾಡಗಿ ಠಾಣೆ ವೃತ್ತ ನೀರೀಕ್ಷಕರಾದ ಶ್ರೀ ಎಂಡಿ ಚಿಕ್ಕಣ್ಣನವರ್ ಮತ್ತು ಪಿಎಸ್‌ಐ ಭಾರತಿ ಕುರಿ. ಪಿಎಸ್‌ಐ ಎನ ಕೆ ನಿಂಗೇನಹಳ್ಳಿ ಹಾಗೂ ಬಸವರಾಜ್ ಹಂಚಟಗಿ. ಯುಬಿ ನಂದೇಗೌಡ ಅಶೋಕ್ ಬಾರ್ಕಿ ಲೋಕೇಶ್ ಲಮಾಣಿ. ಗುಡ್ಡಪ್ಪ ಹಳ್ಳೂರ್ ಮಂಜುನಾಥ್ ಬಾಳೆಕಾಯಿ, ಹಿದಾಯತ್ ದೊಡ್ಡ ಮುಲ್ಲಾ .ಪ್ರಭು. ಸತೀಶ್ ಮಾರಿಕಟ್ಟಿ. ಮಾರುತಿ ಹಾಲಬಾವಿ. ಪಿಕೆ ಲಮಾಣಿ. ಮಂಜು ಮುಚ್ಚಟ್ಟಿ. ಹನುಮಂತ ಸುಂಕದ. ಬೀರ​‍್ಪ ಹುಲಿಹಳ್ಳಿ .ಡಿ ಎಚ್ ಪುಜಾರ. ಹಾಗೂ ಅನೇಕ ಪೊಲೀಸ್ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.