ಕನರ್ಾಟಕ ಆಡಳಿತ ಮಂಡಳಿಗೆ ಜನವರಿ ಅಂತ್ಯದೊಳಗೆ ಐದು ಸದಸ್ಯರ ಭತರ್ಿ: ಕೃಷ್ಣಭೈರೇಗೌಡ ಭರವಸೆ

ಬೆಳಗಾವಿ 17: ಕನರ್ಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಐದು ಸದಸ್ಯರನ್ನು ನೇಮಿಸುವ ಪ್ರಸ್ತಾವವನ್ನು ಕೇಂದ್ರ ಸಕರ್ಾರಕ್ಕೆ ಕಳುಹಿಸಲಾಗಿದ್ದು, ಜನವರಿ ಅಂತ್ಯದೊಳಗೆ ಭತರ್ಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಕನರ್ಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಪೀಠ ಉದ್ಘಾಟಿಸಿ ಅವರು ಮಾತನಾಡಿದರು. ಕನರ್ಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಎರಡು ಪೀಠಗಳು ಉತ್ತರ ಕನರ್ಾಟಕ ಭಾಗದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ನ್ಯಾಯಮಂಡಳಿಗೆ ಐದು   ಸದಸ್ಯರನ್ನು ನೇಮಿಸುವ ಪ್ರಸ್ತಾವವನ್ನು ಕೇಂದ್ರ ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗೆ ಒಂದೂವರೆ ತಿಂಗಳ ಹಿಂದೆ ಕಳುಹಿಸಲಾಗಿದೆ. ಶೀಘ್ರವೇ ಕೇಂದ್ರ ಸಕರ್ಾರ ಇದಕ್ಕೆ ಒಪ್ಪಿಗೆ ನೀಡಲಿದ್ದು, ಜನವರಿ ಅಂತ್ಯದೊಳಗೆ ಐದು ಸದಸ್ಯರನ್ನು ಭತರ್ಿ ಮಾಡಲಾಗುವುದು. ಈ ಮೂಲಕ ಆಡಳಿತ ನ್ಯಾಯಮಂಡಳಿಯ ಬೆಳಗಾವಿ ಮತ್ತು ಕಲಬುಗರ್ಿ ಪೀಠಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು. 

2015 ರಲ್ಲಿ ಬೆಳಗಾವಿ ಮತ್ತು ಕಲಬುಗರ್ಿಯಲ್ಲಿ ಕನರ್ಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಪೀಠಗಳನ್ನು ಸ್ಥಾಪಿಸಲು ಸಕರ್ಾರ ನಿಧರ್ಾರ ಕೈಗೊಂಡಿತ್ತು. ಅದರಂತೆ ಇಂದು ಬೆಳಗಾವಿ ಪೀಠ ಉದ್ಘಾಟನೆಗೊಂಡು ಇಂದಿನಿಂದಲೇ ಕಾರ್ಯ ನಿರ್ವಹಿಸಲಿದೆ. ಇನ್ನೇರಡು ವಾರಗಳಲ್ಲಿ ಕಲಬುಗರ್ಿ ನ್ಯಾಯ ಮಂಡಳಿ ಪೀಠವು ಉದ್ಘಾಟನೆಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು. 

ಉತ್ತರ ಕನರ್ಾಟಕ ಭಾಗಕ್ಕೆ ಕನರ್ಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಎರಡೂ ಪೀಠಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಈ ಭಾಗದ ಪ್ರಕರಣಗಳು ಶೀಘ್ರ ಗತಿಯಲ್ಲಿ ಇತ್ಯರ್ಥವಾಗಲು ಅನುಕೂಲವಾಗಿದೆ. ಈ ಮೂಲಕ ಸಕರ್ಾರ ಸಕಾರಾತ್ಮಕವಾಗಿ ಸ್ಪಂದಿಸಿ ಜನರ ಬಳಿಗೆ ಆಡಳಿತ ವ್ಯವಸ್ಥೆಯನ್ನು ಕೊಂಡೊಯ್ದಿದೆ ಎಂದು ಅವರು ತಿಳಿಸಿದರು. 

ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಕನರ್ಾಟಕ ರಾಜ್ಯ ನ್ಯಾಯ ಮಂಡಳಿ ಬೆಳಗಾವಿ ಪೀಠ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ನಡೆದ ಹೋರಾಟಕ್ಕೆ ಜಯ ಸಂದಿದೆ. ಈ ಹಂತದಲ್ಲಿ ಹೋರಾಟದಲ್ಲಿ ಭಾಗಿಯಾದ ಹಲವಾರು ವಕೀಲರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪ್ರಕರಣಗಳನ್ನು ಹಿಂಪಡೆಯುವಂತೆ ಸಕರ್ಾರಕ್ಕೆ ಮನವಿ ಮಾಡಿದರು. ಅಲ್ಲದೇ ನ್ಯಾಯ ಮಂಡಳಿ ಪೀಠಕ್ಕೆ ಸ್ವಂತ ಕಟ್ಟಡ ಶೀಘ್ರದಲ್ಲಿ ಒದಗಿಸುವಂತೆ ಅವರು ಸಚಿವರ ಗಮನಕ್ಕೆ ತಂದರು. 

ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಅಧ್ಯಕ್ಷ ನ್ಯಾಯಮೂತರ್ಿ ಡಾ.ಕೆ. ಭಕ್ತವತ್ಸಲ ಮಾತನಾಡಿ, ಉತ್ತರ ಕನರ್ಾಟಕ ಭಾಗದಲ್ಲಿ ನ್ಯಾಯಮಂಡಳಿ ಪೀಠ ಸ್ಥಾಪನೆಗೆ ಹೋರಾಟಗಳು ನಡೆದಿದ್ದವು. ಅದರ ಪ್ರತಿಫಲವಾಗಿ ಇಂದು ಸುಸಜ್ಜಿತ ನ್ಯಾಯಪೀಠ ಉದ್ಘಾಟನೆಗೊಂಡಿದ್ದು, ಇಂದಿನಿಂದಲೇ ಪೀಠ ಕರ್ತವ್ಯ ನಿರ್ವಹಿಸಲಿದೆ. ಎಲ್ಲರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ನ್ಯಾಯಮಂಡಳಿ ಕಾರ್ಯ ನಿರ್ವಹಿಸಲಿದ್ದು, ಇದರ ಸದ್ಬಳಕೆ ಆಗಬೇಕು ಎಂದರು. 

ಸಕರ್ಾರದ ಮುಖ್ಯ ಸಚೇತಕ ಗಣೇಶ್ ಪ್ರಕಾಶ ಹುಕ್ಕೇರಿ ಉಪಸ್ಥಿತರಿದ್ದರು. ಕನರ್ಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ರಿಜಿಸ್ಟ್ರಾರ್ ರಾಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನರ್ಾಟಕ ಸಕರ್ಾರ ಮುಖ್ಯ ಕಾರ್ಯದಶರ್ಿ ಟಿ.ಎನ್. ವಿಜಯಭಾಸ್ಕರ್ ಸ್ವಾಗತಿಸಿದರು. ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ್ ವಂದಿಸಿದರು.