ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ಅಗಲೀಕರಣಕ್ಕೆ ರಸ್ತೆ ಅಕ್ಕಪಕ್ಕದ ವ್ಯಾಪಾರಸ್ಥರು, ಮನೆ ಮಾಲಕರು ವಿರೋಧ

ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ಅಗಲೀಕರಣಕ್ಕೆ ರಸ್ತೆ ಅಕ್ಕಪಕ್ಕದ ವ್ಯಾಪಾರಸ್ಥರು, ಮನೆ ಮಾಲಕರು ವಿರೋಧ Businessmen and homeowners along the road oppose the widening of the Tumminakatti-Honnali road

ರಾಣಿಬೆನ್ನೂರು 10: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವ ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ಅಗಲೀಕರಣ ಮಾಡುವದನ್ನು ವಿರೋಧಿಸಿ, ರಸ್ತೆ ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಸ್ಥರು ಮತ್ತು ಮನೆ ಮಾಲಕರು ಬುಧವಾರ ಗ್ರಾಪಂ ದ್ವಿತೀಯ ದರ್ಜೆ ಸಹಾಯಕ ನಾಗೇಂದ್ರ​‍್ಪ ಚಲವಾದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

   ಈ ವೇಳೆ ಗ್ರಾಮದ ಮುಖಂಡ ಶಿವಣ್ಣ ರಜಪೂತ ಮಾತನಾಡಿ, ತುಮ್ಮಿನಕಟ್ಟಿ ಗ್ರಾಮದ ಮಧ್ಯ ಭಾಗದಲ್ಲಿರುವ ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ಪಕ್ಕದಲ್ಲಿರುವ ವ್ಯಾಪಾರಸ್ಥರ ಅಂಗಡಿಗಳು ಹಾಗೂ ಮನೆಗಳು ತೆರವುಗೊಳಿಸುವದರಿಂದ ಬಡವರಿಗೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಕೆಲವರಿಗೆ ಬೇರೆಕಡೆ ಜಾಗ ಕೂಡಾ ಇರುವದಿಲ್ಲ. ಬಡವರ ಹೊಟ್ಟೆ ಮೇಲೆ ಬರೆ ಎಳೆದಂತೆ ಆಗುತ್ತದೆ.

ಆದಕಾರಣ ಅಗಲೀಕರಣ ಮಾಡುವುದನ್ನು ಕೈಬಿಡಬೇಕು. ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಇಲ್ಲವಾದರೆ ಅಂಗಡಿ ವ್ಯಾಪಾರಸ್ಥರಿಗೆ ಮನೆ ಮಾಲಿಕರಿಗೆ ನಿವೇಶನ ಕೊಡಬೇಕು ಎಂದು ಒತ್ತಾಯಿಸಿದರು.   ಈಗಾಗಲೆ ಗ್ರಾಮದಿಂದ ಹೊರವಲಯದಲ್ಲಿ ರಾಜ್ಯ ಹೆದ್ದಾರಿಯಾಗಿ ವಾಹನ ಸವಾರರಿಗೆ ಅನುಕೂಲವಾಗಿದೆ. ಈಗಾಗಲೆ ಎಲ್ಲಾ ವಾಹನಗಳು ರಾಜ್ಯ ಹೆದ್ದಾರಿ ಮೂಲಕ ಹೊನ್ನಾಳಿ, ಹರಿಹರ, ಶೀವಮೊಗ್ಗ, ದಾವಣಗೆರೆ, ಉಕ್ಕಡಗಾತ್ರಿ, ಬೆಂಗಳೂರು, ರಾಣೇಬೆನ್ನೂರು, ಹಾವೇರಿಗೆ ಬಸ್‌ಗಳು ಓಡಾಡಲು ಅನುಕೂಲವಾಗಿದೆ.

ರಾಜ್ಯ ಹೆದ್ದಾರಿ ಮಾಡುವಾಗ ಲೋಕೋಪಯೋಗಿ ಇಲಾಖೆಯವರು ಹಾಗೂ ಗ್ರಾಪಂನವರು ಸರ್ವೆ ಮಾಡಿ ಅಳತೆ ಮಾಡಿ ಅಗಲೀಕರಣಕ್ಕೆ ಮುಂದಾಗಿದ್ದರು. ಇದರಿಂದ ಗ್ರಾಮಸ್ಥರು ರಸ್ತೆತಡೆದು ಪ್ರತಿಭಟನೆ ಮಾಡಿದ್ದರು. ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಮಸ್ಥರು ಅಗಲೀಕರಣ ಮಾಡಬಾರದೆಂದು ಮನವಿ ಪತ್ರ ಸಲ್ಲಿಸಿದ್ದರು. ಆದರೂ ಅದನ್ನು ಸ್ಪಂದಿಸಿದ ಅಧಿಕಾರಿಗಳು ಗ್ರಾಮದಿಂದ ಹೊರವಲಯದಲ್ಲಿ ರಾಜ್ಯ ಹೆದ್ದಾರಿ ಮಾಡಿದ್ದಾರೆ ಹಾಗಾಗಿ ಈ ರಸ್ತೆಯನ್ನು ಅಗಲಿಕರಣ ಮಾಡಬಾರದು ಎಂದು ಆಗ್ರಹಿಸಿದರು. 

 ಡಾಽ ಪರಶುರಾಮಪ್ಪ ದೊಡ್ಮನಿ, ಮಾಂತೇಶ ಮಾಸೂರ, ನಾರಾಯಣ ಹಳ್ಳಳ್ಳಿ, ರಾಘವೇಂದ್ರ ಕಠಾರಿ, ಮಂಜುನಾಥ ಮಾಸೂರ, ಆಂಜನೇಯ ಹಳ್ಳಳ್ಳಿ, ಮಂಜುನಾಥ ಕ್ಯಾದಿಗಿ, ಸುನೀಲ ಕಾಟಣ್ಣನವರ, ಕರಬಸಪ್ಪ, ಪ್ರಕಾಶ ಪಾಳೇದ, ರಮೇಶ ಪೂಜಾರ, ಶಂಬುಲಿಂಗ ಶಿವಪೂಜಿ, ಬಶೀರ್‌ಸಾಬ್ ಕಠಾರಿ, ಪ್ರಹಲ್ಲಾದ, ಜಗದೀಶ ಅಂಗರಗಟ್ಟಿ, ವಿನಾಯಕ ಮೂಡಿ ಮತ್ತಿತರು ಇದ್ದರು.