ಬುಲೆಟ್ ರೈಲು: ಸುರಂಗ ಕೊರೆಯುವ ಕಾರ್ಯ ಯಶಸ್ವಿ
Bullet train: Tunnel boring operation successful
ಮುಂಬೈ: ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯು ಮಗದೊಂದು ಮಹತ್ವದ ಪ್ರಗತಿ ಕಂಡಿದೆ. ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಬುಲೆಟ್ ರೈಲು ಯೋಜನೆಯ 1.5 ಕಿ.ಮೀ. ಉದ್ದದ ಕಣಿವೆ ಸುರಂಗ ಕೊರೆಯುವ ಅಂತಿಮ ಪ್ರಗತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು (ಶುಕ್ರವಾರ) ನವದೆಹಲಿಯ ರೈಲು ಭವನದಿಂದ ವರ್ಚುವಲ್ ಆಗಿ ವೀಕ್ಷಿಸಿದ್ದಾರೆ.
1.5
ಕಿ.ಮೀ. ಉದ್ದದ ಈ ಮಾರ್ಗವು ಪಾಲ್ಘರ್ ಜಿಲ್ಲೆಯ ಅತಿ ಉದ್ದದ ಸುರಂಗಗಳಲ್ಲಿ ಒಂದಾಗಿದೆ. ವಿರಾರ್ ಹಾಗೂ ಬೋಯ್ಸರ್ ಬುಲೆಟ್ ರೈಲು ನಿಲ್ದಾಣಗಳ ನಡುವೆ ಇದನ್ನು ಕೊರೆಯಲಾಗಿದೆ.
ಮಹಾರಾಷ್ಟ್ರದ ಎರಡನೇ ಬುಲೆಟ್ ಸುರಂಗ ಮಾರ್ಗ ಇದಾಗಿದೆ. 2025ರ ಸೆಪ್ಟೆಂಬರ್ನಲ್ಲಿ ಠಾಣೆ ಹಾಗೂ ಬಿಕೆಸಿ ನಡುವೆ ಮೊದಲ ಸುರಂಗ ಮಾರ್ಗ ಕೊರೆಯಲಾಗಿತ್ತು. ಒಟ್ಟು 508 ಕಿ.ಮೀ. ಉದ್ದದ ಮುಂಬೈ-ಅಹಮದಾಬಾದ್ ನಡುವಣ ಹೈಸ್ಪೀಡ್ ರೈಲು ಯೋಜನೆ ಇದಾಗಿದೆ.
ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ರೈಲು ಸಂಚರಿಸಲಿದ್ದು, 2 ಗಂಟೆ 17 ನಿಮಿಷಗಳಲ್ಲಿ ಗಮ್ಯಸ್ಥಾನವನ್ನು ತಲುಪಲಿದೆ.ಈ ಯೋಜನೆಯನ್ನು ಜಪಾನ್ ಸರ್ಕಾರದ ತಾಂತ್ರಿಕ ಹಾಗೂ ಹಣಕಾಸಿನ ನೆರವಿನೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.
ಬುಲೆಟ್ ರೈಲು ಯೋಜನೆಯಲ್ಲಿ ಒಟ್ಟು 12 ನಿಲ್ದಾಣಗಳಿರಲಿವೆ. ಸಬರ್ಮತಿ ಹಾಗೂ ಮುಂಬೈ ಟರ್ಮಿನಲ್ ನಿಲ್ದಾಣವಾಗಿರಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಜನಪ್ರಿಯ ವ್ಯಕ್ತಿ ಸಾವು, ಮಹಾಯುದ್ಧ: 2026ರ ನಾಸ್ಟ್ರಾಡಾಮಸ್ ಸ್ಫೋಟಕ ಭವಿಷ್ಯ
2026ರ
ಹೊಸ ವರ್ಷ ಆರಂಭವಾಗಿದೆ. ಈ ವರ್ಷದ ಭವಿಷ್ಯ ಹೇಗಿರಲಿದೆ ಎಂಬುದರ ಕುರಿತು ಬಾಬಾ ವಂಗಾ ಸೇರಿದಂತೆ ವಿವಿಧ ಭವಿಷ್ಯಕಾರರ ಭವಿಷ್ಯಗಳನ್ನು ಅವರ ಅನುಯಾಯಿಗಳು ಬಿಡುಗಡೆ ಮಾಡುತ್ತಿದ್ದಾರೆ. ಸದ್ಯ, ನಾಸ್ಟ್ರಾಡಾಮಸ್ ಅನುಯಾಯಿಗಳು ಈ ವರ್ಷ ಜಾಗತಿಕವಾಗಿ ಸಂಭವಿಸಬಹುದಾದ ಘಟನೆಗಳ ಕುರಿತಾದ ಭವಿಷ್ಯವನ್ನು ಬಿಡುಗಡೆ ಮಾಡಿದ್ದಾರೆ.
ನಾಸ್ಟ್ರಾಡಾಮಸ್ ಒಬ್ಬ ಫ್ರೆಂಚ್ ಜ್ಯೋತಿಷಿ ಮತ್ತು ವೈದ್ಯರಾಗಿದ್ದರು. 1500ರ ದಶಕದಲ್ಲಿ ಜೀವಿಸಿದ್ದ ಅವರು, ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದಿದ್ದು, ಸೆಪ್ಟೆಂಬರ್ 11ರ ಮುಂಬೈ ದಾಳಿ ಸೇರಿದಂತೆ ಕೋವಿಡ್ 19 ರಂತಹ ಸಾಂಕ್ರಾಮಿಕ ರೋಗಗಳ ಸಂಭವದ ಬಗ್ಗೆ ಮೊದಲೇ ಹೇಳಿದ್ದರು.
ನಾಸ್ಟ್ರಾಡಾಮಸ್ ಅವರು ಸ್ಪಷ್ಟವಾಗಿ ಬರೆಯದಿದ್ದರೂ ಕೂಡ ಅವರ ಅಸ್ಪಷ್ಟ ಬರಹಗಳ ಪ್ರಕಾರ, ವಿಶ್ವದ ಜನಪ್ರಿಯ ನಾಯಕ ಅಥವಾ ವ್ಯಕ್ತಿ ಸಿಡಿಲು ಬಡಿದು ಸಾಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.
‘ಸ್ವಿಸ್ ಪ್ರದೇಶವಾದ ಟಿಸಿನೊ ರಕ್ತದಿಂದ ತುಂಬಿ ತುಳುಕುತ್ತದೆ’ ಎಂದು ನಾಸ್ಟ್ರಾಡಾಮಸ್ನ ಪದ್ಯದಲ್ಲಿ ಹೇಳಿದ್ದಾರೆ. ಟಿಸಿನೊ ಪ್ರದೇಶ ದಕ್ಷಿಣ ಸ್ವಿಟ್ಜರ್ಲ್ಯಾಂಡ್ನಲ್ಲಿದೆ. ಈ ನಗರ ಸರೋವರಗಳು ಮತ್ತು ಹಿಮನದಿಗಳಿಗೆ ಹೆಸರುವಾಸಿ. ಆದರೆ ಕಾಕತಾಳೀಯ ಎಂಬಂತೆ 2026ರ ಜನವರಿ 1ರಂದು ಸ್ವಿಟ್ಜರ್ಲ್ಯಾಂಡ್ನ
ಟಿಸಿನೊದಿಂದ ಸುಮಾರು 167 ಕಿಮೀ ದೂರದಲ್ಲಿರುವ ಕ್ರಾನ್ಸ್ ಮೊಂಟಾನಾದ ಸ್ಕೀ ರೆಸಾರ್ಟ್ ಎಂಬಲ್ಲಿ ಬೆಂಕಿ ಅವಘಢ ಸಂಭವಿಸಿದೆ. ಇದರ ಪರಿಣಾಮ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.
‘7 ತಿಂಗಳುಗಳ ಕಾಲ ಮಹಾಯುದ್ಧದಲ್ಲಿ ಜನರು ದುಷ್ಟತನದಿಂದ ಸತ್ತರು. ರೂಯೆನ್, ಎವ್ರೂ ರಾಜ ವಿಫಲನಾಗುವುದಿಲ್ಲ‘ ಎಂದು ನಾಸ್ಟ್ರಾಡಾಮಸ್ನ ಭವಿಷ್ಯ ಹೇಳುತ್ತದೆ. ಅಂದರೆ ವಿಶ್ವದಲ್ಲಿ 7 ತಿಂಗಳ ಕಾಲ ಇಬ್ಬರು ನಾಯಕರ ನಡುವೆ ಮಹಾಯದ್ದ ನಡೆಯಲಿದ್ದು, ಸೈನಿಕರು ಸತ್ತರು ನಾಯಕರು ಗೆಲ್ಲುತ್ತಾರೆ ಎಂಬುದು ಒಳ ಅರ್ಥವಾಗಿದೆ.
ನಾಸ್ಟ್ರಾಡಾಮಸ್ನ ಬರಹಗಳಲ್ಲಿ ಇರುವಂತೆ ಈ ವರ್ಷ ’ಏಳು ಹಡಗುಗಳ ಸುತ್ತಲಿನ ಮಾರಣಾಂತಿಕ ಯುದ್ಧ‘ ಎಂದು ಹೇಳಿದ್ದಾರೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುವ ಪ್ರಾದೇಶಿಕ ಯುದ್ಧ ಎಂಬ ನಂಬಿಕೆ ಇದೆ. ಇಲ್ಲಿ ಪ್ರಮುಖವಾಗಿ ಚೀನಾ, ತೈವಾನ್, ವಿಯೆಟ್ನಾಂ, ಮಲೇಷಿಯ, ಬ್ರೂನಿ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ 7 ಹಡಗುಗಳು ಯುದ್ದ ನಡೆಸಲಿವೆ ಎಂದು ಅವರ ಅನುಯಾಯಿಗಳು ಭವಿಷ್ಯ ನುಡಿದಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 