ವ್ಯಸನ ಮುಕ್ತ ಸಮಾಜ ನಿರ್ಮಾಣ ಅವಶ್ಯಕ: ಡಾ. ಸ್ಪೂರ್ತಿ ಮಾಸ್ತಿಹೊಳಿ
Building an addiction-free society is essential: Dr. Spurthi Mastiholi
ವ್ಯಸನ ಮುಕ್ತ ಸಮಾಜ ನಿರ್ಮಾಣ ಅವಶ್ಯಕ: ಡಾ. ಸ್ಪೂರ್ತಿ ಮಾಸ್ತಿಹೊಳಿ
ಬೆಳಗಾವಿ 05:ವಿದ್ಯಾರ್ಥಿಗಳು ಡ್ರಗ್ ವ್ಯಸನಿಗಳಾಗುತ್ತಿರುವದು ವಿಷಾದದ ಸಂಗತಿ. ಇತ್ತಿಚಿನ ಸರ್ವೇ ಪ್ರಕಾರ ಜಾಗತಿಕ ಮಟ್ಟದಲ್ಲಿ 1.9 ಬಿಲಿಯನ್ ಡ್ರಗ್ ವ್ಯಸನಿಗಳಿದ್ದಾರೆ. ಅವರಲ್ಲಿ 53ಮಿಲಿಯನ್ ಡ್ರಗ್ ವ್ಯಸನಿಗಳು ಓಷಧೀಯ ಗುಳಿಗೆಗಳ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ 10 ಮಿಲಿಯನ್ ವ್ಯಸನಿಗಳು ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕರನ್ನು ಡ್ರಗ್ ವ್ಯಸನದಿಂದ ಮುಕ್ತಗೊಳಿಸಬೇಕಾದ ಅವಶ್ಯಕತೆ ಇದೆ. ಇದರಲ್ಲಿ ಪಾಲಕರ ಪಾತ್ರ ಮುಖ್ಯ. ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಸಮಾಜಪರ ಚಿಂತನೆಗಳ ಸೇವಾ ಸಂಸ್ಥೆಗಳು ಮೆಲಿಂದ ಮೇಲೆ ಕಾರ್ಯಾಗಾರವನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮಾಡಿಸಬೇಕು. ನಮ್ಮ ನಾಡಿನ ಮುಂದಿನ ಪ್ರಜೆಗಳಾದ ಇಂದಿನ ಯುವ ಪೀಳಿಗೆ ವ್ಯಸನಮುಕ್ತ ಪ್ರಜೆಗಳಾಗಿ ಸದೃಢ ದೇಶದ ನಿರ್ಮಾಣದ ಹೊಣೆ ತಮ್ಮ ಮೇಲಿದೆ ಎಂದು ರೊ.ಡಾ. ಸ್ಪೂರ್ತಿ ಮಾಸ್ತಿಹೊಳಿ ಅವರು ಮೇಲಿನಂತೆ ಹೇಳಿದರು.
ರಾಜಾ ಲಖನಗೌಡ ವಿಜ್ಞಾನ ಮಹಾವಿದ್ಯಾಲಯದ ಸಿ.ವಿ.ರಾಮನ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅವರು ಆಯೋಜಿಸಿದ "ವ್ಯಸನಮುಕ್ತ ಜಾಗೃತಿ ಅಭಿಯಾನ" ಕಾರ್ಯಕ್ರಮದಲ್ಲಿ "ಡ್ರಗ್ ವ್ಯಸನ ಮಾರಕ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ರೊ.ಉದಯಸಿಂಗ ರಜಪೂತ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದನೆ ಮಾಡಿದರು. ವೇದಿಕೆಯ ಮೇಲೆ ಇವೆಂಟ್ ಚೇರ್ಮನ್ ರೊ. ಗೀರೀಶ ಕತ್ತಿಶೆಟ್ಟಿ, ರೊ.ನಂದನ ಬಾಗಿ ಇದ್ದರು ವಿದ್ಯಾಲಯದ ಪ್ರಾಚಾರ್ಯರು ಸ್ವಾಗತಿಸಿದರು. ವಿನಯಕುಮಾರವರು ವಂದನಾರೆ್ಣ ಮಾಡಿದರು. ಡಾ.ವಿಜಯ ಪೂಜಾರ, ರೊ.ಅಶೋಕ ಬದಾಮಿ, ರೊ.ರಾಜೀವ ದೇಶಪಾಂಡೆ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 