ಪಾಂಡವರ ಸ್ಮರಣಾರ್ಥ ಎಮ್ಮೆಗಳಿಗೆ ಅಲಂಕಾರ : ಅದ್ಧೂರಿ ಮೆರವಣಿಗೆ
Buffaloes decorated in memory of Pandavas: Grand procession
ಪಾಂಡವರ ಸ್ಮರಣಾರ್ಥ ಎಮ್ಮೆಗಳಿಗೆ ಅಲಂಕಾರ : ಅದ್ಧೂರಿ ಮೆರವಣಿಗೆ
ಕಂಪ್ಲಿ 24: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದ ಗೌಳೇರು ಓಣಿಯಲ್ಲಿ ವಿಶಿಷ್ಟ ಸಂಭ್ರಮ ಮನೆ ಮಾಡುತ್ತದೆ. ದೀಪಾವಳಿ ಹಬ್ಬದಲ್ಲಿ ಗೌಳೇರು ಸಮುದಾಯದವರು ತಾವು ಸಾಕುತ್ತಿರುವ ಹಾಗೂ ತಮ್ಮ ಆರ್ಥಿಕ ಮೂಲವಾದ ಎಮ್ಮೆಗಳನ್ನು ಶೃಂಗರಿಸಿ ಮೆರವಣಿಗೆ ಮಾಡಿ ದೇವಸ್ಥಾನ ಮತ್ತು ಪಾಂಡವರಿಗೆ ಚೆಲ್ಲು ಹೊಡೆಸುವ (ಮನೆಯ ಮುಂದೆ, ಗೋದಲಿಯಲ್ಲಿ ಅಲಂಕಾರ ಮಾಡಿರುವ ದೇವರ ಮುಂದೆ ಎಮ್ಮೆಗಳಿಂದ ಬಾಗಿ ನಮಸ್ಕರಿಸುವ) ವಿಶಿಷ್ಟ ಆಚರಣೆ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ದೀಪಾವಳಿ ಪಾಡ್ಯದಂದು ಎಮ್ಮೆಗಳನ್ನು ಶೃಂಗರಿಸಿ ಚೆಲ್ಲು ಹೊಡೆಸುವ ಮತ್ತು ಎಮ್ಮೆಗಳ ವಿಶಿಷ್ಟ ಮೆರವಣಿಗೆ ಈ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಗೌಳೇರು ಓಣಿಯಿಂದ ಮುಖ್ಯ ರಸ್ತೆಗಳ ಮೂಲಕ ಸಾಗಿ ಗ್ರಾಮದ ದೇವತೆ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು ನಂತರ ಎಮ್ಮೆಗಳ ಮೆರವಣಿಗೆಯಲ್ಲಿ ದೇವಸ್ಥಾನಗಳ ಮುಂದೆ, ಮನೆ ಮುಂದೆ ಇಟ್ಟ ಪಾಂಡವರಿಗೆ ಎಮ್ಮೆಗಳು ಚೆಲ್ಲು ಹೊಡೆದು ಸಂಪ್ರದಾಯ ಮೆರೆಯುತ್ತವೆ. ಹೆಣ್ಣು ಮಕ್ಕಳು ಕಳಸದಾರತಿ ಬೆಳಗಿ ಪೂಜಿಸುತ್ತಾರೆ. ನಂತರ ಎಮ್ಮೆಗಳನ್ನು ಪಾಂಡವರ ಎದುರಿಗೆ ಚೆಲ್ಲು (ಬಾಗಿ ನಮಸ್ಕರಿಸುವ) ಹೊಡೆಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಮನೆಗಳ ಎಲ್ಲಾ ಕೋನೆಗಳಲ್ಲಿ ಪಾಂಡವರು ಆಗಮಿಸುವ ನೀರೀಕ್ಷೆಯಲ್ಲಿ ವನಂಬಾರಿ (ಅಂಬ್ರೆ ಹೂ ಅಥವಾ ಹಳದಿ ಹೂ) ಹೂಗಳನ್ನು ಎರಚುತ್ತಾರೆ..ಎಮ್ಮೆಗಳು ಗೌಳೇರು ಸಮುದಾಯದ ಆರ್ಥಿಕ ಸಂಪತ್ತಿನಂತೆ ಮನೆಯಲ್ಲಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಸಮೃದ್ಧವಾಗಿರಲು ಪ್ರಾರ್ಥಿಸುತ್ತಾರೆ. ಎಮ್ಮೆ ಕರುಗಳ ಸಂತಿ ಅಧಿಕವಾಗುವಂತೆ, ಜಾನುವಾರುಗಳು ರೋಗ ರುಜಿನದಿಂದ ಬಳಲದಂತೆ ಕೋರಿ ಪಾಂಡವರನ್ನು ಪೂಜಿಸುವ ಮತ್ತು ಮೆರವಣಿಗೆ ಮಾಡುವ ಸಂಪ್ರದಾಯವಿದೆ ಎಂದು ನಂ.10 ಮುದ್ದಾಪುರ ಗ್ರಾಮದ ಗೌಳೇರು ಸಮುದಾಯದ ಹಿರಿಯರು ತಿಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 