ಸರ್ವರಿಗೂ ಅವಕಾಶ ನೀಡಿದ ಬಜೆಟ್, ಜಿಲ್ಲೆಗೆ ಇನ್ನಷ್ಟು ಬೇಕಿತ್ತು : ಜ್ಯೋತಿ
Budget that gave opportunity to everyone, the district needed more: Jyoti
ಕೊಪ್ಪಳ 06: ಬರೋಬ್ಬರಿ 4.48 ಲಕ್ಷ ಕೋಟಿಯ ಬಜೆಟ್ ಒಂದು ದಾಖಲೆ ಆದರೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡಿಸಿ ಎಂದಿಗೂ ಮುರಿಯದ ಸಾರ್ವಕಾಲಿಕ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸರಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಜೊತೆಗೆ ಹೊಸ ನಿಗಮಗಳ ರಚನೆ, ವಿನೂತನ ಯೋಜನೆಗಳು, 56 ಸಾವಿರ ಸರಕಾರಿ ಉದ್ಯೋಗ ಭರ್ತಿ ಸೇರಿದಂತೆ ಸಮತೋಲನ ಬಜೆಟ್ ಮಂಡಿಸಿದ್ದಾರೆ. ಕೊಪ್ಪಳಕ್ಕೆ ಕ್ಯಾನ್ಸರ್ ಆಸ್ಪತ್ರೆ, ಕೆರೆ ತುಂಬಿಸುವ ಯೋಜನೆ, ಹಾಸ್ಟೆಲ್ ಸೇರಿ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಆದರೆ ಜಿಲ್ಲೆಗೆ ಇನ್ನಷ್ಟು ನೀರೀಕ್ಷೆಗಳು ಇದ್ದರೂ ಮುಂದಿನ ಎರಡು ಮೂರು ತಿಂಗಳಲ್ಲಿ ಅವುಗಳನ್ನು ಈಡೇರಿಸಬಹುದು ಎಂಬ ಭರವಸೆ ಇದೆ. ಜ್ಯೋತಿ ಎಂ. ಗೊಂಡಬಾಳಜಿಲ್ಲಾಧ್ಯಕ್ಷರು,ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 