ಕ್ರೀಡಾ ಮಹೋತ್ಸವ ಪೂರ್ವ ಸಿದ್ಧತೆ ಮಾಜಿ ಮುಖ್ಯಮಂತ್ರಿ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ

ಕ್ರೀಡಾ ಮಹೋತ್ಸವ ಪೂರ್ವ ಸಿದ್ಧತೆ ಮಾಜಿ ಮುಖ್ಯಮಂತ್ರಿ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ Bommai instructs former Chief Minister's officials to prepare for the sports festival


ಗದಗ 05:  ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶಗಳ ಯುವಕರನ್ನುಆಸಕ್ರಿಯಿಂದ ಬಳಸಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಸದರಕ್ರೀಡಾ ಮಹೋತ್ಸವ ಏರಿ​‍್ಡಸಿದ್ದಾರೆ. ಗದಗಜಿಲ್ಲೆಯಲ್ಲಿ  ಫೆಬ್ರವರಿ ಮೊದಲ ವಾರದಲ್ಲಿ ನಡೆಸಲುಎಲ್ಲರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.  

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದರ ಕ್ರೀಡಾ ಮಹೋತ್ಸವದ ಪೂರ್ವ ಸಿದ್ದತಾ ಸಭೆ ನಡೆಸಿದ ಅವರು, ಯುವಕರ ಸ್ಪೂರ್ತಿಯ ಸೆಲೆಯನ್ನು ನಿರತಂರವಾಗಿ ಇಟ್ಡುಕೊಂಡುಒಂದು ಸದೃಢ ಭಾರತ ಮತ್ತು ಚೈತನ್ಯವಾಗಿರುವ ಭಾರತಕಟ್ಟಲು 45 ವರ್ಷ ವಯೋಮಾನದೊಳಗಿರುವ ಯುವಕರನ್ನುದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ಮಾಡುತ್ತಿದೆ. ಉದಾಹರಣೆಗೆ ಎನ್‌ಇಪಿಯಲ್ಲಿ ಬಹಳ ದೊಡ್ಡ ಬದಲಾವಣೆ ತರಲು ಒಬ್ಬ ವಿದ್ಯಾರ್ಥಿಒಂದೇ ಸಮಯದಲ್ಲಿ ಮೂರು ನಾಲ್ಕು ಡಿಗ್ರಿ ಪಡೆಯಲು ಅವಕಾಶ, ಕ್ರಿಯಾಶೀಲವಾಗಿ ತಮ್ಮನ್ನುತಾವು ತೊಡಗಿಸಿಕೊಳ್ಳಲು ಅವಕಾಶ ಪ್ರಾಥಮಿಕ ಹಂತದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜಗತ್ತಿನಎಲ್ಲ ಒಳ್ಳೆಯ ವ್ಯವಸ್ಥೆಯನ್ನುಅಧ್ಯಯನ ಮಾಡಿ ಪ್ರೊ. ಯು.ಆರ್‌.ರಾವ್‌ಅವರ ಅಧ್ಯಕ್ಷತೆಯಲ್ಲಿ ನೂತನ ಶಿಕ್ಷಣ ಪಾಲಿಸಿ ತಂದಿದ್ದೇವೆ. ಇದರಲ್ಲಿ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಆದ್ಯತೆ ನಿಡಿದೆಎಂದು ಹೇಳಿದರು.  ಕೇಂದ್ರ ಸರ್ಕಾರಕ್ರೀಡೆಗೆ ಮಹತ್ವ ನೀಡಿದೆ.ಅದಕ್ಕೆ ಮೊದಲು ಕಳೆದ ಹತ್ತು ವರ್ಷದಿಂದ ಫಿಟ್‌ಇಂಡಿಯಾಕಾರ್ಯಕ್ರಮ ಮಾಡಿದ್ದೇವು.ಆ  ಮೇಲೆ ಓಲಂಪಿಕ್ ಬಂದಾಗ ಖೆಲೊ ಇಂಡಿಯಾ ಮಾಡಿದರು. ಓಲಂಪಿಕ್ ಹತ್ತಿರ ಬಂದಾಗ ಜಿತೊ ಇಂಡಿಯಾ ಮಾಡಿದರು.ಅದರಿಂದ ಒಲಂಪಿಕ್ ನಲ್ಲಿ ಭಾರತ ಹೆಚ್ಚು ಮೆಡಲ್ ಪಡೆಯಲು ಸಾಧ್ಯವಾಯಿತು.

ಈಗ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನುಆಸಕ್ರಿಯಿಂದ ಬಳಸಿಕೊಳ್ಳಲು ಸಂಸದರ ಕ್ರೀಡೋತ್ಸವ ಮಾಡಿದ್ದಾರೆ ಇಂತಹ ಚಟುವಟಿಕೆಯಲ್ಲಿ ಸಂಸದರು ಪಾಲ್ಗೊಳ್ಳಲು ಈ ಯೋಜನೆ ಮಾಡಿದ್ದಾರೆ ಏನೇನು ಮಾಡಬೇಕು ಎನ್ನುವುದನ್ನು ಮಾರ್ಗಸೂಚಿ ನೀಡಿದ್ದಾರೆ. ಯಾವ ದೇಶಿ ಕ್ರಿಡೆ ಆಡಿಸಬೇಕು ಹೇಗೆ ಸಂಘಟಿಸಬೇಕು ಎಷ್ಟು ಸಮಯದಲ್ಲಿ ಮಾಡಬೇಕುಎಂದು ಹಲವಾರು ವಿಚಾರ ಮಾಡಿದ್ದಾರೆ .ಈ ಕ್ರೀಡೆ ಹೋಬಳಿಯಿಂದ ತಾಲೂಕು ಮಟ್ಟ, ಅಲ್ಲಿಂದಜಿಲ್ಲಾ ಮಟ್ಟಕ್ಕೆ ಬರುತ್ತದೆ.ಇದಕ್ಕೆ ಶಿಕ್ಷಣ ಹಾಗೂ ಆರೋಗ್ಯಇಲಾಖೆಯ ಸಹಕಾರ ಬೇಕು.ಕೆಲವು ಸ್ಪಾನ್ಸರ್ ಶಿಪ್ ಮೇಲೆ ಪ್ರಶಸ್ತಿಗಳನ್ನು ನೀಡಲಾಗುವುದು.

ಜಿಲ್ಲಾ ಪಂಚಾಯತ್, ಪೊಲಿಸ್ ಇಲಾಖೆ ಸಹಯೋಗ ಮುಖ್ಯ.ಎಲ್ಲ ಇಲಾಖೆಗಳ ಸಹಕಾರಅಗತ್ಯ. ಮಂಗಳವಾರದಿಂದಲೇ ನೋಂದಣಿ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಹೆಚ್ಚು ತಂಡ ಪಾಲ್ಗೊಳ್ಳಲು ಅವಕಾಶಗುಂಪು ಆಟಗಳಲ್ಲಿ ಖೋ ಖೊ, ವಾಲಿಬಾಲ್, ಕಬಡ್ಡಿ, ಅಥ್ಲೆಟಿಕ್ ನಲ್ಲಿ 100 ಮೀಟರ್, 4*100 ಮೀಟರ್‌ರಿಲೆ, ಹಗ್ಗ ಜಗ್ಗಾಟ ಸೇರಿದಂತೆ ಕ್ರೀಡೆಗಳನ್ನು ಆಡಿಸಲು ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಮತ್ತುಜಿಲ್ಲಾ ಮಟ್ಟದಲ್ಲಿಇರುವ ಒಳ್ಳೆಯ ತಂಡಗಳನ್ನು ಆಹ್ವಾನಿಸಿ, ಹೆಚ್ಚು ಯುವತಿಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು.

ಎಲ್ಲ ತಂಡಗಳಿಗೂ ಟಿ ಶರ್ಟ್‌ ನೀಡಬೇಕು. ವಿಜೇತರಾದ ತಂಡಗಳಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಬೇಕು. ಕೊನೆಯ ದಿನ ಸರ್ಕಾರಿ ನೌಕರರಿಗೆಒಂದುದಿನ ಪ್ರದರ್ಶನ ಮ್ಯಾಚ್ ಆಡಿಸಿ ಅವರಿಗೂ ಬಹುಮಾನಕೋಡೊಣಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಶಾಸಕರುಗಳಾದ ಸಿ.ಸಿ ಪಾಟೀಲ್, ಡಾಚಂದ್ರು ಲಮಾಣಿ, ವಿಧಾನ ಪರಿಷತ್ತ ಸದಸ್ಯರಾದಎಸ್‌.ವಿ ಸಂಕನೂರ, ಜಿಲ್ಲಾಧಿಕಾರಿಗಳಾದ  ಸಿ.ಎನ್ ಶ್ರೀಧರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ  ರೋಹನಜಗದೀಶ, ಜಿಲ್ಲಾಯುವಜನ, ಕ್ರೀಡಾ ಮತ್ತು ಸೇವಾ ಇಲಾಖೆಯಅಧಿಕಾರಿಯಾದ  ಶರಣುಗೊಗೇರಿ ಸೇರಿದಂತೆಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.