ಬ್ಲಾಕ್ ಯುತ ಕಾಂಗ್ರೆಸ್ ನಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
Black Yuta Congress forms human chain to protest
ಬ್ಲಾಕ್ ಯುತ ಕಾಂಗ್ರೆಸ್ ನಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಮಹಾಲಿಂಗಪುರ 15: ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ವಕೀಲನೋರ್ವ ನ್ಯಾಯಾಲಯದಲ್ಲಿಯೇ ಶ್ಯೂ ಎಸೆದಿರುವುದನ್ನು ಖಂಡಿಸಿ ತೇರದಾಳ, ರಬಕವಿ-ಬನಹಟ್ಟಿ,ಮಹಾಲಿಂಗಪುರ ಬ್ಲಾಕ್ ಯುತ ಕಾಂಗ್ರೆಸ್ ವತಿಯಿಂದ ಬುಧವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎನ್ ಎ ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ತೇರದಾಳ ಬ್ಲಾಕ್ ಯುತ ಕಾಂಗ್ರೆಸ್ ಅಧ್ಯಕ್ಷ ಲಿಯಾಸ ಯಾದವಾಡ ಮತ್ತು ರಬಕವಿ-ಬನಹಟ್ಟಿ,ಮಹಾಲಿಂಗಪುರ ಬ್ಲಾಕ್ ಯುತ ಕಾಂಗ್ರೆಸ್ ಅಧ್ಯಕ್ಷ ಸೈಯದ ಶೇಖ ಮಾತನಾಡಿ, ಅಕ್ಟೋಬರ್ 6 ರಂದು ನ್ಯಾಯಾಲಯ ಕಲಾಪ ನಡೆದಾಗ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ, ನ್ಯಾಯಾಧೀಶರು ಖಜೂರಾಹೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪರ ನಿಲುವು ಪ್ರಕಟಿಸಿಲ್ಲ ಎಂಬ ಅಸಮಾಧಾನ ಹೊರಹಾಕಿ ನ್ಯಾಯಾಲಯದಲ್ಲಿಯೇ 'ಶ್ಯೂ' ಎಸೆದದ್ದು ಭಾರತ ದೇಶದ ಇತಿಹಾಸದಲ್ಲಿಯೇ ಘೋರ ಘಟನೆಯಾಗಿದ್ದು, ಭಾರತೀಯ ಸಂವಿಧಾನಕ್ಕೆ ಅವಮಾನಗೊಳಿಸಿದಂತಾಗಿದೆ. ಹೀಗಾಗಿ ತಕ್ಷಣ ಬಂಧಿಸಿ ವಕೀಲನಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ನಂತರ ಜೀತು ಕೆಸರಗೊಪ್ಪ,ಪರಶುರಾಮ ಮೇತ್ರಿ,ಶಪೀಕ್ ಬೆಪಾರಿ ಮಾತನಾಡಿದರು.ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಐ ಲವ್ ಅಂಬೇಡ್ಕರ್ ಎಂಬ ಫ್ಲೆಕ್ಸ್ ಗಳನ್ನು ಹಿಡಿದು ಘೋಷಣೆ ಹಾಕುತ್ತಾ, ಪುರಸಭೆವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ,ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಹಾಲಿಂಗ ಮಾಳಿ, ಪುರಸಭೆ ನಾಮನಿರ್ದೇಶಕ ಸದಸ್ಯರಾದ ವಿನೋದ ಸಿಂಪಿ, ಆನಂದ ಬಂಡಿ,ಕಾಂಗ್ರೆಸ್ ಮುಖಂಡರಾದ ಅಶೋಕ ಬಿ.ಅಂಗಡಿ, ಲಕ್ಷ್ಮಣ ಮಾಂಗ, ರಾಜು ಭಾವಿಕಟ್ಟಿ, ಅಶೋಕ ಅಂಗಡಿ, ಮಹಾದೇವ ಕಡಬಲ್ಲನವರ, ಸಿಂಧೂರ ಹಲಸಪ್ಪಗೊಳ, ಸೈಪ ಬಾಗವಾನ,ದಾದಾ ಸನದಿ, ಮಹಾಲಿಂಗ ಪಾಟೀಲ,ವಿನೋದ ಉತ್ತೂರ, ಸೋಹೆಲ್ ಮುಲ್ಲಾ, ಪ್ರತಾಪ ಗೌಡಪ್ಪಗೋಳ, ಜಾವೀದ ಜಮಾದಾರ, ದಾನೇಶ ಮೇತ್ರಿ, ಆಫ್ರಿದ ಪಕಾಲಿ, ಸಲ್ಮಾನ್ ಪಠಾಣ, ಕಾರ್ತಿಕ ಉತ್ತೂರ, ಅಬ್ದುಲ್ ರೋಣ, ಸಲೀಂ ಸರಕಾವಸ ಸೇರಿದಂತೆ ಮಹಿಳೆಯರು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 