ಅಪಘಾತದಲ್ಲಿ ಮರಣ ಹೊಂದಿದವರ ವಾರಸುದಾರರಿಗೆ ಬೀರೇಶ್ವರ ಸೊಸೈಟಿ ವತಿಯಿಂದ ಪರಿಹಾರ ವಿತರಣೆ

ಅಪಘಾತದಲ್ಲಿ ಮರಣ ಹೊಂದಿದವರ ವಾರಸುದಾರರಿಗೆ ಬೀರೇಶ್ವರ ಸೊಸೈಟಿ ವತಿಯಿಂದ ಪರಿಹಾರ ವಿತರಣೆ Bireshwar Society distributes compensation to the heirs of those who died in the accident

ಅಪಘಾತದಲ್ಲಿ ಮರಣ ಹೊಂದಿದವರ ವಾರಸುದಾರರಿಗೆ ಬೀರೇಶ್ವರ ಸೊಸೈಟಿ ವತಿಯಿಂದ ಪರಿಹಾರ ವಿತರಣೆ 

ಕಾಗವಾಡ   07: ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಶಾಖೆಯ ಸದಸ್ಯ ವಿಜಯ ಅಶೋಕ ಭಜಂತ್ರಿ ಇತ್ತಿಚಿಗೆ ಅಪಘಾತದಲ್ಲಿ ನಿಧನರಾಗಿದ್ದು, ಅವರ ಪತ್ನಿ ಕೋಮಲ ಭಜಂತ್ರಿ ಅವರಿಗೆ ರೂ. 50 ಸಾವಿರ ಪರಿಹಾರವನ್ನು ಗುರುವಾರ ದಿ. 07 ರಂದು ವಿತರಿಸಲಾಯಿತು. 

ರಸ್ತೆ ಅಪಘಾತದಲ್ಲಿ ನಿಧನರಾದ ವಿಜಯ ಭಜಂತ್ರಿ ಅವರು ಶಿರಗುಪ್ಪಿ ಶಾಖೆಯ ಸದಸ್ಯರಾಗಿದ್ದು, ಅವರ ಸರಳ ವಾರಸುದಾರಳಾದ ಪತ್ನಿ ಕೋಮಲ ಭಜಂತ್ರಿ ಅವಳಿಗೆ ಬೀರೇಶ್ವರ ಸೊಸೈಟಿಯ ಸದಸ್ಯರ ಅಪಘಾತ ಮರಣೋತ್ತರ ನಿಧಿಯಿಂದ ಮಂಜೂರಾದ ರೂ. 50 ಸಾವಿರ ಪರಿಹಾರವನ್ನು ಶಾಖೆಯ ಆಡಳಿತ ಮಂಡಳಿಯ ಸದಸ್ಯರು, ಗಣ್ಯರು ವಿತರಿಸಿದರು. 

ಈ ವೇಳೆ ಗ್ರಾಮದ ಹಿರಿಯ ಮುಖಂಡ ಶಿವಾನಂದ ಪಾಟೀಲ ಮಾತನಾಡಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವದಲ್ಲಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ಸಹಕಾರಿಯ ಸದಸ್ಯರಿಗೆ ಮತ್ತು ಸಾಲಗಾರರಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಅವರು ಅಪಘಾತ ಮತ್ತು ಆಕಷ್ಮಿಕ ಮರಣದ ನಂತರ ಅವರ ವಾರಸುದಾರರಿಗೆ ಪರಿಹಾರ ದೊರೆಯುವಂತಾಗಿದ್ದು, ಸಾಕಷ್ಟು ಅನುಕೂಲವಾಗಿದೆ ಎಂದರು. 

ಈ ಸಮಯದಲ್ಲಿ ಮುಖ್ಯ ಕಚೇರಿಯ ನಿರ್ದೇಶಕ ಅಣ್ಣಾಸಾಬ ಚೌಗುಲಾ, ಶಿರಗುಪ್ಪಿ ಶಾಖೆಯ ಅಧ್ಯಕ್ಷ ರಮಾಕಾಂತ ಬಾಡಗೆ, ಸದಸ್ಯರಾದ ಮಹಾವೀರ ಕಾತ್ರಾಳೆ, ರಾಮಗೌಡಾ ಪಾಟೀಲ, ಓರಂಗ ಕನವಾಡೆ, ಮಹೇಶ ಪಾಟೀಲ, ಭೀಮು ಭೋಲೆ, ಸುಭಾಷ ಪಾಟೀಲ, ಮುಖಂಡ ಪ್ರಶಾಂತ ಚೌಗುಲೆ ಸೇರಿದಂತೆ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.