ವಿಶ್ವ ಶಾಂತಿ ದಿನಾಚರಣೆ ಪ್ರಯುಕ್ತ ನಾಳೆ ಕೊಪ್ಪಳದಲ್ಲಿ ಬೃಹತ್ ಜಷ್ನೆ ಮೀಲಾದ್ ಕಾರ್ಯಕ್ರಮ
Big Jashne Meelad event tomorrow in Koppal on the occasion of World Peace Day
ವಿಶ್ವ ಶಾಂತಿ ದಿನಾಚರಣೆ ಪ್ರಯುಕ್ತ ನಾಳೆ ಕೊಪ್ಪಳದಲ್ಲಿ ಬೃಹತ್ ಜಷ್ನೆ ಮೀಲಾದ್ ಕಾರ್ಯಕ್ರಮ
ಕೊಪ್ಪಳ 16: ಪ್ರವಾದಿ ಹಜರತ್ ಮಹಮ್ಮದ್ , ಸ, ಪೈಗಂಬರ್ ರವರ 1,500 ನೆ ಜನ್ಮದಿನೋತ್ಸವದ ಪ್ರಯುಕ್ತ ಹಾಗೂ ವಿಶ್ವ ಶಾಂತಿ ದಿನಾಚರಣೆಯ ಅಂಗವಾಗಿ ದಿನಾಂಕ 18 ರ ಶನಿವಾರ ಸಂಜೆ ಆರು ಗಂಟೆಗೆ ನಗರದ ತಾಲೂಕ ಕ್ರೀಡಾಂಗಣದಲ್ಲಿ ಬೃಹತ್ ಜಶ್ನೆ ಮಿಲಾದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ತಿಳಿಸಿದರು, ಅವರು ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಕಲಬುರ್ಗಿಯ ಖಾಜಾ ಬಂದ ನವಾಜ್ ದರ್ಗಾದ ಪೀಠಾಧಿಪತಿ ಸಜ್ಜಾದೆ ನಶೀನ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಸಲಹಾ ಮಂಡಳಿಯ ರಾಜ್ಯ ಅಧ್ಯಕ್ಷರಾಗಿರುವ ನಮ್ಮ ಮುಸ್ಲಿಂ ಧರ್ಮಗುರು ಹಜರತ್ ಅಲಿ ಹಸನ್ ಉಲ್ ಹಸನ್ ಹುಸೇನಿ ಸಾಹೇಬ್ ರವರು ಕೊಪ್ಪಳಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಅದ್ದೂರಿ ಸನ್ಮಾನ ಸಹ ಜರುಗಲಿದೆ ಎಂದು ವಿವರಿಸಿದ್ದರು, ಮುಂದುವರೆದು ಮಾತನಾಡಿದ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ 1500 ನೆ ಜನ್ಮದಿನೋತ್ಸವ ಹಾಗೂ ವಿಶ್ವ ಶಾಂತಿ ದಿನಾಚರಣೆ ಮಾಡುವುದರ ಜೊತೆಗೆ ಪರಸ್ಪರ ಶಾಂತಿ ಸೌಹಾರ್ದತೆಯ ವಾತಾವರಣ ಸಮಾಜದಲ್ಲಿ ನಿರ್ಮಿಸುವ ಸದುದ್ದೇಶದಿಂದ ಈ ಬೃಹತ್ ಕಾರ್ಯ ಕ್ರಮ ನಡೆಯಲಿದೆ ಎಂದು ಹೇಳಿದರು,
ಸದರಿ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಶರಣಬಸವ ಅಪ್ಪ ನವರು ಶಿರಹಟ್ಟಿಯ ಫಕೀರೇಶ್ವರ ಮಹಾಸ್ವಾಮಿಗಳು ಚನ್ನಬಸವ ಮಹಾಸ್ವಾಮಿಗಳು ಕೊಪ್ಪಳ ಗವಿಮಠದ ಶ್ರೀಗಳು ಅಳವಂಡಿಯ ಸ್ವಾಮಿಗಳು ಸೇರಿದಂತೆ ಅನೇಕ ಸೂಫಿ ಸಂತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಮಹಾರಾಷ್ಟ್ರ ನೀಲಂಗ ಶರೀಫ್ ದರ್ಗಾದ ಪೀಠಾಧಿಪತಿ ಸಜ್ಜಾದ ನಶಿನ್ ಹಜರತ್ ಹೈದಾರ್ ನೂರುಲ್ಲ ಖಾದ್ರಿ ಸಾಹೇಬ್ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಸದರಿ ಕಾರ್ಯಕ್ರಮದಲ್ಲಿ ಸಚಿವರುಗೋಳಾದ ಎಚ್ ಕೆ ಪಾಟೀಲ್ ,ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಶಿವರಾಜ್ ತಂಗಡಗಿ ,ರಹೀಮ್ ಖಾನ್, ಬಿಕೆ ಹರಿಪ್ರಸಾದ್ ,ಸೇರಿದಂತೆ ಸಂಸದ ರಾಜಶೇಖರ್ ಹಿಟ್ನಾಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಅಮರೇಗೌಡ ಪಾಟೀಲ್ ಬಯ್ಯಾಪುರ, ಹಸನ್ ಸಾಬ್ ಡ್ಯೂಟಿಹಾಳ, ಕೆ ಬಸವರಾಜ್ ಹಿಟ್ನಾಳ್ ,ಸಂಗಣ್ಣ ಕರಡಿ ಸೇರಿದಂತೆ ಅನೇಕರು ಪಾಲ್ಗೊಳ್ಳುವವರು ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ವಿವರಿಸಿದ್ದರು.ಪತ್ರಿಕಾಗೋಷ್ಠಿಯಲ್ಲಿ ಹಜರತ್ ಹೈದರ್ ನೂರುಲ್ಲಾ ಖಾದ್ರಿ ಸಾಹೇಬ್ ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ ಮುಖಂಡ ಅಲ್ತಾಫ್ ಕಿತ್ತೂರ್ ಎಸ್ ಜಿ ಮಕಾಂದಾರ್ ದಾದಾ ಹಾಜಿ ಅಲ್ತಾಫ್ ಕಿತ್ತೂರ್ ಬಸವರಾಜ್ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ ಎಂ ಸಯ್ಯದ್, ಬಾಶು ಸಾಬ್ ಖತೀಬ್ ಪಾಷಾ ಕಾಟನ ಸೈಯದ್ ಎಜೆದಾನಿ ಭಾಷಾ ಖಾದರಿ ಪಾಲ್ಗೊಂಡಿದ್ದರು, ಅನೇಕರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 