ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಿ ಹಾವೇರಿಯ ಭೂಮಿಪೂಜೆ
Bhumi Puja of Rashtrothana Vidyakendra Hi Haveri
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಿ ಹಾವೇರಿಯ ಭೂಮಿಪೂಜೆ
ಹಾವೇರಿ 15: ಸಂತ-ಮಹಂತರ ಉಪಸ್ಥಿತಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಿ ಹಾವೇರಿಯ ಭೂಮಿಪೂಜೆಯನ್ನು ಇಲ್ಲಿನ ದೇವಿಹೊಸೂರ ಗ್ರಾಮದ ರಸ್ತೆಯಲ್ಲಿರುವ ಸರ್ವೆ ನಂ. 21/5 ಮತ್ತು 21/6ರಲ್ಲಿ ನೆರವೇರಿಸಲಾಯಿತು. ಇದು ರಾಷ್ಟ್ರೋತ್ಥಾನ ಸಮೂಹದ 20ನೇ ಸಿಬಿಎಸ್‌ಇ ಶಾಲೆಯಾಗಿದ್ದು, 2026ರಲ್ಲಿ ಕಾರ್ಯಾರಂಭ ಮಾಡಲಿದೆ.
ಹಾವೇರಿಯ ಹೊಸಮಠದ ಪೂಜ್ಯ ಬಸವಶಾಂತಲಿಂಗ ಮಹಾಸ್ವಾಮಿಗಳು, ನರಸೀಪುರದ ನಿಜಗುಣ ಅಂಬಿಗರ ಚೌಡಯ್ಯನ ಪೀಠದ ಪೂಜ್ಯ ಜಗದ್ಗುರುಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಪೂಜ್ಯಸದಾಶಿವ ಮಹಾಸ್ವಾಮಿಗಳು, ಗೌರಿಮಠದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹರಸೂರು ಬಣ್ಣದಮಠದ ಪೂಜ್ಯ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಅಗಡಿ ಆನಂದವನದ ಪೂಜ್ಯ ಗುರುದತ್ತ ಚಕ್ರವರ್ತಿ ಮಹಾಸ್ವಾಮಿಗಳು, ನೆಗಳೂರು ಸಂಸ್ಥಾನ ಹಿರೇಮಠದ ಪೂಜ್ಯ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗುತ್ತಲದ ಪ್ರಭುಸ್ವಾಮಿ ಮಠದ ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಹೊಸರಿತ್ತಿಯ ಗುದ್ದಲಿಸ್ವಾಮಿ ಮಠದ ಪೂಜ್ಯ ಗುದ್ದಲಿ ಶಿವಯೋಗೀಶ್ವರ ಮಹಾಸ್ವಾಮಿಗಳು, ಅಗಡಿಯ ಅಕ್ಕಿ ಮಠದ ಪೂಜ್ಯ ಗುರುಲಿಂಗ ಮಹಾಸ್ವಾಮಿಗಳು, ಅಗಡಿಯ ಆನಂದವನದ ಪೂಜ್ಯ ವಿಶ್ವನಾಥ ಚಕ್ರವರ್ತಿ ಮಹಾಸ್ವಾಮಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು. ರಾಮಣ್ಣ, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಮಹನೀಯರು ಉಪಸ್ಥಿತರಿದ್ದರು.
ಸು. ರಾಮಣ್ಣಅವರು ಮಾತನಾಡುತ್ತ ರಾಷ್ಟ್ರೋತ್ಥಾನ ಪರಿಷತ್ನ ತಮ್ಮ ಸುದೀರ್ಘ ಅವಧಿಯ ಒಡನಾಟವನ್ನು ಮೆಲುಕು ಹಾಕುತ್ತಾ ರಾಷ್ಟ್ರೋತ್ಥಾನ ಪರಿಷತ್ನ ವಿವಿಧ ಸೇವಾ ಮನೋಭಾವದ ಪ್ರಕಲ್ಪಗಳ ಬಗೆಗೆ ತಿಳಿಸಿದರು. ನಂತರ ವಿದ್ಯಾಕೇಂದ್ರಗಳಲ್ಲಿನ ಮೌಲ್ಯಯುತ ಹಾಗೂ ಸಂಸ್ಕಾರ ಭರಿತ ಶಿಕ್ಷಣ ಕ್ರಮಗಳನ್ನು ಹೊಗಳುತ್ತಾ ಹಾವೇರಿ ನಗರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯು ಪ್ರಾರಂಭವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಭಾಗದ ಜನರೆಲ್ಲರೂ ತನು ಮನ ಧನ ಸಮರ್ಿಸಿ ಸರಸ್ವತಿಯನ್ನು ಒಲಿಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡುತ್ತಾ ಭವ್ಯ ಭಾರತದ ಕನಸನ್ನು ನನಸಾಗಿಸುವ ಸಲಹೆಗಳನ್ನು ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 