ಕಲ್ಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಚಿವೆ ಹೆಬ್ಬಾಳಕರ ಭೂಮಿಪೂಜೆ
Bhoomipuja by Minister Hebbalaka for the construction of Kalmeshwara temple
ಕಲ್ಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಚಿವೆ ಹೆಬ್ಬಾಳಕರ ಭೂಮಿಪೂಜೆ
ಚಂದನ ಹೊಸೂರ 05: ಕಳೆದ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಚಂದನಹೊಸೂರಿನಲ್ಲಿ 2 ಕೋಟಿ ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿ-್ಮ ಹೆಬ್ಬಾಳ್ಕರ ಹೇಳಿದರು.
ಅವರು ಸೋಮವಾರ ದಿ. 04 ರಂದು ಚಂದನಹೊಸೂರ ಗ್ರಾಮದ ಕಲ್ಮೇಶ್ವರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 140 ದೇವಸ್ಥಾನಗಳ ಅಭಿವೃದ್ದಿ ಮಾಡಿರುವೆ. ನಮಗೆ ದೇವಸ್ಥಾನ ಎಂದು ಭಕ್ತಿ ಭಯ ಎರಡು ಇದೆ ಕಷ್ಟ ಕಾಲದಲ್ಲಿ ನಾವು ನೆನೆಯುವುದು ದೇವರನ್ನು ಎಲ್ಲ ಗ್ರಾಮಗಳಲ್ಲಿಯೂ ದೇವಸ್ಥಾನಗಳ ಜೀರ್ಣೋದ್ದಾರ ಮಾಡಲಾಗುತ್ತಿದೆ. ಅದರಂತೆ ಕಲ್ಮೇಶ್ವರ ದೇವಸ್ಥಾನಕ್ಕೆ ಈಗಾಗಲೇ ಮೊದಲನೆಯ ಹಂತದಲ್ಲಿ ರೂ. 40 ಲಕ್ಷ ಹಾಗೂ ಎರಡನೇ ಹಂತದಲ್ಲಿ ರೂ., 40 ಲಕ್ಷ ಒಟ್ಟು ರೂ 80 ಲಕ್ಷ ಬಿಡುಗಡೆಗೊಂಡಿದ್ದು ಇನ್ನುಳಿದ ಹಣ ಹಂತ ಹಂತವಾಗಿ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ಪಾವನ ಕ್ಷೇತ್ರ ಬಡೇಕೊಳ್ಳ ಮಠದ ಶಿವಯೋಗಿ ನಾಗಯ್ಯ ಮಹಾಸ್ವಾಮಿಗಳು, ಹಣಬರಹಟ್ಟಿಯ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು, ಮುತ್ನಾಳ ಕೇದಾರ ಶಾಖಾಪೀಠದ ಶಿವಾನಂದ ಶಿವಾಚಾರ್ಯರು, ಚಂದನಹೊಸೂರ ಸುತಗಟ್ಟಿ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮಹೇಶ ಸ್ವಾಮಿಗಳು, ಗಂಗಯ್ಯ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸದೆಪ್ಪಾ ತಾನಸಿ, ಶಿವನಗೌಡ ನಾಗನಗೌಡ ಪಾಟೀಲ, ನಾಮದೇವ ಜೋಗನ್ನವರ, ಶಿಲ್ಪಕಾರ ಚಂದ್ರಕಾಂತ, ರಾಯಪ್ಪ ತವಗದ, ನಾಗಲಿಂಗ ಬಡಿಗೇರ, ಶಿವಲಿಂಗ ಕರಬನ್ನವರ, ಕಲ್ಮೇಶ ತಾನಸಿ, ಯಲ್ಲಪ್ಪ ಕರಬನ್ನವರ, ಶಂಕರಗೌಡ ಪಾಟೀಲ, ಹಾಗೂ ಸಮಸ್ತ ಗ್ರಾಮದ ಹಿರಿಯರು ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 