ರಾಹುತನಕಟ್ಟಿಯಲ್ಲಿ 78ಲಕ್ಷ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ

ರಾಹುತನಕಟ್ಟಿಯಲ್ಲಿ 78ಲಕ್ಷ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ Bhoomi puja for Valmiki Bhavan in Rahuthanakatti at a cost of Rs. 78 lakhs

ರಾಣೆಬೆನ್ನೂರ 12: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾದ ಗ್ಯಾರಂಟಿ ಯೋಜನೆಗಳ ಬಗೆಗೆ ಅಪ್ರಚಾರಕ್ಕೆ ನಾಂದಿ ಹಾಡಿದ್ದು,  ತಮ್ಮ ಅಧಿಕಾರವಧಿಯಲ್ಲಿ ಇಲ್ಲಿಯವರೆಗೆ ಸುಮಾರು 500ಕೋಟಿ  ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.  

ಬುಧವಾರ ತಾಲೂಕಿನ  ರಾಹುತನಕಟ್ಟಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂದಾಜು 78 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಾಲ್ಮೀಕಿ ಮಹರ್ಷಿ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹಿಂದಿನ ಸರ್ಕಾರ ಮಾರ್ಚ 2023ರಲ್ಲಿ ಬಜೆಟನಲ್ಲಿ 3.11 ಲಕ್ಷ ಕೋಟಿ ರೂ ವೆಚ್ಚದ ಬಜೆಟ್  ಮಂಡನೆ ಮಾಡಿದ್ದು, ಸಿದ್ದರಾಮಯ್ಯನವರು ಅದಕ್ಕಿಂತ 1 ಲಕ್ಷ ಕೋಟಿ ಹೆಚ್ಚಿನ ಬಜೆಟ್ ಮಂಡನೆ ಮಾಡಿದ್ದು, ಬಿಜೆಪಿಯವರು ಮಾಡಿದ ಹಣಕ್ಕೆ ನಾವು ಸರಿದೂಗಿಸಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ ಎಂದರು.  ಹಿಂದಿನ ಅವಧಿಯ ಯಾವುದೇ ಕೆಲಸ  ಈಗ ಮಾಡುತ್ತಿಲ್ಲ.

ಆ ಎಲ್ಲ ಯೋಜನೆಗಳನ್ನು  ರದ್ದು ಮಾಡಿ,   ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಪತ್ರ ನೀಡಿ ಹೊಸ ಅನುದಾನ ಹಾಕಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದಾಗಿ  ಹೇಳಿದರು.    ದೀನ ದಲಿತರ, ಬಡವರ, ಪರವಾಗಿ ಸಿದ್ದರಾಮಯ್ಯ ಸರ್ಕಾರವಿದೆ.  ಅವರುಗಳ ಹಿತ ಕಾಪಾಡುವಲ್ಲಿ ಸರಕಾರ ಮುಂದಾಗಿದೆ. ಎಲ್ಲಾ ಸಮುದಾಯದವರಿಗೆ ಹೆಚ್ಚಿನ ಅನುದಾನ ನೀಡಿ ಅವರ ಏಳಿಗೆಗೆ ಸರಕಾರವು ಮುಂದಾಗಿರುವುದಾಗಿ ಕೋಳಿವಾಡ ಹೇಳಿದರು.   ಗ್ರಾಪಂ ಸದಸ್ಯ ಹೊನ್ನಪ್ಪ ಗೌಡ್ರ, ಭೂ ಸೇನಾ ನಿಗಮದ ಸಿದ್ದೇಶ, ಅವಿನಾಷರೆಡ್ಡಿ,   ಸಮಾಜದ ಕಲ್ಯಾಣ ಇಲಾಖೆಯ ಅಧಿಕಾರಿ ಮಾಲತೇಶ ಬಾರ್ಕಿ, ಪಿಡಿಓ ಸುಜಾತಾ ಆರ್‌., ಚಿನ್ನಪ್ಪಅಜ್ಜನವರ, ಕೆ.ಎನ್ ಉಪ್ಪಾರ,  ವೆಂಕಟೇಶ ಬಣಕಾರ, ಸಂತೋಷ ಬುಳ್ಳಮ್ಮನವರ, ದಿಳ್ಳೆಪ್ಪ ಭೂತನವರ,  ಪರಶುರಾಮ ಪವಾರ ಸೇರಿದಂತೆ ಮತ್ತಿತರರು ಇದ್ದರು.