ತಾಲೂಕಾ ಆಸ್ಪತ್ರೆಯ ನವೀಕರಣ ಕಾಮಗಾರಿಗೆ ಭೂಮಿ ಪೂಜೆ

ತಾಲೂಕಾ ಆಸ್ಪತ್ರೆಯ ನವೀಕರಣ ಕಾಮಗಾರಿಗೆ ಭೂಮಿ ಪೂಜೆ  Bhoomi Puja for the renovation work of the Taluka Hospital

ತಾಲೂಕಾ ಆಸ್ಪತ್ರೆಯ ನವೀಕರಣ ಕಾಮಗಾರಿಗೆ ಭೂಮಿ ಪೂಜೆ  

ಮುದ್ದೇಬಿಹಾಳ 07: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳ ಜತೆಗೆ ಶಿಕ್ಷಣ, ಆರೋಗ್ಯ ಸುಧಾರಣೆಯ ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಉತ್ತಮ ಜನಪರ ಆಡಳಿತ ನೀಡುತ್ತಿದೆ ಎಂದು ಶಾಸಕ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ಪಟ್ಟಣದ ಹಡಲಗೇರಿ ರಸ್ತೆ ಮಾರ್ಗದಲ್ಲಿರುವ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತಾಲೂಕಾ ಆಸ್ಪತ್ರೆಯ ನವೀಕರಣ ಹಾಗೂ ದುರಸ್ಥಿ ಕಾಮಗಾರಿ ಭೂಮಿ ಪೂಜೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಾರ್ವಜನಿಕ ಪ್ರಯೋಗಾಲಯ ಘಟಕವನ್ನು ಗುರುವಾರ ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು. 

ಮತಕ್ಷೇತ್ರದಲ್ಲಿ ರಸ್ತೆ, ಚರಂಡಿ, ನೀರಾವರಿ ಯೋಜನೆ, ಶಾಲಾ ಕಟ್ಟಡಗಳ ದುರಸ್ಥಿ ಹೀಗೆ ಹಲವು ರೀತಿಯಲ್ಲಿ ಅಭಿವೃದ್ಧಿ ಪೂರಕ ಕಾಮಗಾರಿಗಳು ಪ್ರಗತಿಯಲ್ಲಿ ಸಾಗಿವೆ, ಜನಸಾಮಾನ್ಯರ ಹಿತ ಕಾಪಾಡುವುದು ನಮ್ಮ ಸರಕಾರದ ಪ್ರಥಮ ಕರ್ತವ್ಯವಾಗಿದೆ. ಈ ಹಿನ್ನೇಲೆಯಲ್ಲಿ ಸಧ್ಯ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಜನರ ಬೇಡಿಕೆಯಂತೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಹೊಂದಿದ ಪ್ರಯೋಗಾಲಯ ನಿರ್ಮಿಸಲಾಗಿದೆ ಅದರಂತೆ ಆಸ್ಪತ್ರೆಯಲ್ಲಿ ಕೆಲ ಕೊಠಡಿಗಳ ದುರಸ್ಥಿ ಹಾಗೂ ನವೀಕರಣಗೊಳಿಸಲು ತೀರ್ಮಾನಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಅಭಿವೃದ್ಧಿ ಪೂರಕ ಕಾಮಗಾರಿಗಳಿಗೆ ಸಹಕಾರ ಅತ್ಯಗತ್ಯವಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮತ್ತು ತುರ್ತು ಚಿಕತ್ಸೆಗೆ ಸಂಬಂಧಿಸದಂತೆ ಇನ್ನೂ ವಿವಿಧ ಸೌಲಭ್ಯಗಳನ್ನು  ಹೊಂದಿದ ತುರ್ತು ಆರೋಗ್ಯ ಸೇವೆ  ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. 

ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಲೂಕಾ ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ, ಅನೀಲಕುಮಾರ ಶೇಗುಣಸಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಮುಖಂಡರಾದ ಸಂಗನಗೌಡ ಬಿರಾದಾರ(ಜಿಟಿಸಿ)  ಗಣೇಶ ಅನ್ನಗೋನಿ, ಆನಂದಗೌಡ ಬಿರಾದಾರ, ಕೆಯುಸಿ ಬ್ಯಾಂಕ್ ಅಧ್ಯಕ್ಷ ಸಿ ಎಲ್ ಬಿರಾದಾರ, ಶೋಭಾ ಶಳ್ಳಗಿ, ಸೇರಿದಂತೆ ಹಲವರು ಇದ್ದರು.