ಭರಮಾ ಅಣ್ಣಪ್ಪಾ ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವ
Bharama Annappa Chowgule Educational Institute Festival
ಭರಮಾ ಅಣ್ಣಪ್ಪಾ ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವ
ರಾಯಬಾಗ 25: ಪಟ್ಟಣದ ಭರಮಾ ಅಣ್ಣಪ್ಪಾ ಚೌಗುಲೆ ಶಿಕ್ಷಣ ಸಂಸ್ಥೆಯ 17ನೇ ವರ್ಷದ ಉತ್ಸವವು ಅ.28 ರಿಂದ 30 ರವರೆಗೆ ಸಂಸ್ಥೆಯ ಕಾಲೇಜ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ ಅವರು ಹೇಳಿದರು. ಶನಿವಾರ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.28 ರಂದು ಬೆಳ್ಳಿಗ್ಗೆ 11 ಗಂಟೆಗೆ ಸಂಸ್ಥೆಯ ಉತ್ಸವ ಸಮಾರಂಭದ ಉದ್ಘಾಟನೆಯನ್ನು ಗದಗ ಬೃಹನ್ಮಠದ ಶಿವಾನಂದ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಗಜಾನನ ನಾಯಿಕ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಲ್.ಬಿ.ಚೌಗುಲೆ, ಗೌರವ ಅಧ್ಯಕ್ಷತೆಯನ್ನು ಸಂಸ್ಥೆ ನಿರ್ದೇಶಕ ಅಮರ ನಾಗರಾಳೆ ವಹಿಸಲಿದ್ದಾರೆ.ಅ.29 ರಂದು ಮುಂ.11 ಗಂಟೆಗೆ ನಡೆಯುವ ಹಿರಿಯರ ಸ್ಮರಣೆ ಹಾಗೂ ಭವ್ಯ ಕೀರ್ತನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ನಂದಿಕುರಳಿ ವೀರಭದ್ರ ಸ್ವಾಮೀಜಿ ವಹಿಸಲಿದ್ದಾರೆ.ಅತಿಥಿಗಳಾಗಿ ಬೆಳಗಾವಿ ರಾಣಿ ಚನ್ನಮ್ಮ ವಿ.ವಿ ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಎನ್.ಪಾಟೀಲ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ ಮತ್ತು ಗೌರವ ಅಧ್ಯಕ್ಷತೆಯನ್ನು ಸಂಸ್ಥೆ ನಿರ್ದೇಶಕಿ ಐಶ್ವರ್ಯ ಚೌಗುಲೆ ವಹಿಸಲಿದ್ದಾರೆ. ಪಂಡರಪುರದ ಗೋಪಾಲ ತುಕಾರಾಮ ವಾಸ್ಕರ ಮಹಾರಾಜರಿಂದ ಕೀರ್ತನೆ ಹಾಗೂ ಜಮಖಂಡಿ ಮತ್ತು ಖುಜೇರಿ ವಾರಕರಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅ.30 ರಂದು ಮುಂ.11 ಗಂಟೆಗೆ ನಡೆಯುವ ಸತೀಶ ಚೌಗುಲೆ ಇತನ 35ನೇ ಹುಟ್ಟುಹಬ್ಬದ ನೆನಪು ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ಸಾನ್ನಿಧ್ಯವನ್ನು ಹಿರೇವಡ್ಡಟ್ಟಿಯ ಮಣಕವಾಡ ಅನ್ನದಾನೀಶ್ವರ ದೇವ ಮಂದಿರದ ಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಮತ್ತು ಮಮದಾಪೂರದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ವಹಿಸಲಿದ್ದಾರೆ. ಅತಿಥಿಗಳಾಗಿ ಜಮಖಂಡಿಯ ಓಲೆಮಠದ ಆನಂದ ದೇವರು ಆಗಮಿಸಲಿದ್ದಾರೆ. ಗೌರವ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾದ್ಯಕ್ಷರಾದ ಭಾರತಿ ಚೌಗುಲೆ ವಹಿಸಲಿದ್ದಾರೆ. ಈ ಉತ್ಸವದಲ್ಲಿ ಪಟ್ಟಣದ ನಾಗರೀಕರು ಮತ್ತು ಪಂಢರಿನಾಥನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎಸ್.ದಿಗ್ಗೆವಾಡಿ, ಎಸ್.ಎ.ನಾಂದಣಿ, ಇಕ್ಬಾಲ ತಾಜಿವಾಲೆ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 