ಭೈರ್ಪನವರದ್ದು ಸ್ವಯಂಭು ವ್ಯಕ್ತಿತ್ವ : ಶಾಸ್ತ್ರಿ
Bhairava has a spontaneous personality: Shastri
ಭೈರ್ಪನವರದ್ದು ಸ್ವಯಂಭು ವ್ಯಕ್ತಿತ್ವ : ಶಾಸ್ತ್ರಿ
ಬೆಳಗಾವಿ 29- ರಂಗಸಂಪದ ಬೆಳಗಾವಿಯ ತಂಡದ ಹೊಸ ಆವಿಷ್ಕಾರ ಸಮಾಸದ ಎರಡನೆಯ ಕಂತು ಖ್ಯಾತ ಕಾದಂಬರಿಕಾರ ಡಾ. ಎಸ್ ಎಲ್. ಭೈರ್ಪ ಅವರ ಭಿತ್ತಿ ಕುರಿತು ಚರ್ಚೆಯು ಲೇಖಕಿ ಶ್ರೀಮತಿ ದೀಪಿಕಾ ಚಾಟೆ ವಡಗಾವಿಯಲ್ಲಿರುವ ಅವರ ಮನೆಯಲ್ಲಿ ಜರುಗಿತು.
ಹಿರಿಯ ಪತ್ರಕರ್ತ ಲೇಖಕ ಎಲ.ಎಸ.ಶಾಸ್ತ್ರೀ ಅವರು ಸುಮಾರು ಭಿತ್ತಿ ಪುಸ್ತಕದ ಬಗ್ಗೆ ಮಾತನಾಡುತ್ತ ಭೈರ್ಪನವರದ್ದು ಸ್ವಯಂಭು ವ್ಯಕ್ತಿತ್ವ ಅಂದರೆ ತಮ್ಮನ್ನು ತಾವೇ ಕಟೆದುಕೊಂಡ ಶಿಲ್ಪಿ ಅವರು. ತಮ್ಮ ಬದುಕನ್ನು ತಾವೆ ಗುರುತಿಸಿಕೊಂಡವರು. ಭಿತ್ತಿಯಲ್ಲಿ ಯಾವುದೇ ವೈಭವಿಕರಣವಿಲ್ಲ. ಸತ್ಯವನ್ನು ಬಿಚ್ಚಿಡುತ್ತ ಹೋಗಿದ್ದಾರೆ ಎಂದು ಹೇಳಿದರು.
ಮುಂದೆ ಮಾತನಾಡುತ್ತ ಶಾಸ್ತ್ರಿಯವರು ಭೈರ್ಪನವರ ಬರವಣೆಗೆ ಹಿಂದೆ ಪೂರ್ವ ತಯಾರಿ ಬಹಳವಿರುತ್ತಿತ್ತು. ಯಾರೂ ಪ್ರಶ್ನಿಸದಂತೆ ಆಧಾರವನ್ನಿಟ್ಟುಕೊಂಡು ಅವರು ಬರೆಯುತ್ತ ಹೋಗುತ್ತಾರೆ. ಜನಪ್ರಿಯತೆಯ ತುತ್ತತುದಿಯನ್ನೇರಿದ ಸಾಹಿತಿಯೆಂದರೆ ಭೈರ್ಪನವರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲೇಖಕಿ ಚಾಟೆಯವರ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಯೋಗದಾನ ಕೃತಿಯನ್ನು ಎಲ್. ಎಸ್. ಶಾಸ್ತ್ರೀಯವರು ಬಿಡುಗಡೆಗೊಳಿಸಿದರು.
ಡಾ. ಅರವಿಂದ ಕುಲಕರ್ಣಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇದು ಸಮಾಸ ದ ಎರಡನೇ ತಿಂಗಳ ಕಾರ್ಯಕ್ರಮ. ಈ ತಿಂಗಳು ಡಾ. ಭೈರ್ಪನವರ ಆತ್ಮ ಚರಿತ್ರೆ ಭಿತ್ತಿ ಕುರಿತು ಚರ್ಚೆಯನ್ನು ಇಟ್ಟುಕೊಂಡಿದ್ದೇವೆ. ಸಾಹಿತಿಗಳನ್ನು ಸಾಹಿತ್ಯಾಸಕ್ತರನ್ನ ಒಂದೆಡೆ ಸೇರಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಈ ಕುರಿತಂತೆ ಪ್ರತಿಕ್ರಿಯೆ ಚೆನ್ನಾಗಿದೆ ಎಂದು ಹೇಳಿದರು.
ಡಾ. ಭೈರ್ಪನವರ ಭಿತ್ತಿ ಕುರಿತಂತೆ ಜ್ಯೋತಿ ಬದಾಮಿ, ವಂದನಾ ಮಳಗಿ, ದೀಪಿಕಾ ಚಾಟೆ, ಶರಣಯ್ಯ ಮಠಪತಿ, ಮಂಜುನಾಥ ಕಲಾಲ, ಸತೀಶ ಕುಲಕರ್ಣಿಯವರು ತಮ್ಮ ಅನಿಸಿಕೆಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು. ಚಂದ್ರಶೇಖರ ನವಲಗುಂದ ಅವರು ಬರೆದ ಡಾ. ಭೈರ್ಪನವರ ಕುರಿತಾದ ಬರೆಹವನ್ನು ಪದ್ಮಾ ಕುಲಕರ್ಣಿಯವರು ವಾಚಿಸಿದರು.
ದೀಪಿಕಾ ಚಾಟೆ ಸ್ವಾಗತಿಸಿದರು ಗುರುನಾಥ ಕುಲಕರ್ಣಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 