ನ್ಯಾಯವಾದಿಗಳಿಗೆ ಸಂವಿಧಾನವೇ ಭಗವದ್ಗೀತೆ : ನಿಜಗಣ್ಣವರ

ಧಾರವಾಡ 07: ಇತರೆಲ್ಲ ವರ್ಗಗಳಿಗಿಂತ ದೇಶಕ್ಕಾಗಿ ಸರ್ವ ತ್ಯಾಗ ಮಾಡಿದ ಸಮುದಾಯ ವಕೀಲರದು. ನಮಗೆ ಸಂವಿಧಾನವೇ ಭಗವದ್ಗೀತೆ ಎಂದು ಕನರ್ಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ  ಅಶೋಕ ಜಿ. ನಿಜಗಣ್ಣವರ ಹೇಳಿದರು.  

ಕನರ್ಾಟಕ ವಿದ್ಯಾವರ್ಧಕ ಸಂಘವು, ಹಿರಿಯ ನ್ಯಾಯವಾದಿ ಎಂ.ಜಿ. ಅಗಡಿ ಸಂಸ್ಮರಣೆ ದತ್ತಿ ಅಂಗವಾಗಿ ವಕೀಲರ ದಿನಾಚರಣೆ ನಿಮಿತ್ತ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಭಾರತೀಯ ನ್ಯಾಯಾಂಗ ವ್ಯವಸ್ಥೆ' ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.

ನಮ್ಮ ಸಂವಿಧಾನ ಉಳಿಸಿಕೊಳ್ಳುವ ಕೆಲಸವಾಗಬೇಕಿದೆ. ಇತ್ತೀಚೆಗೆ ಎಲ್ಲಕ್ಕೂ ಅನವಶ್ಯಕವಾಗಿ ನ್ಯಾಯಾಂಗವನ್ನು ದೂಷಿಸಲಾಗುತ್ತಿದ್ದೆ. ಬದಲಾಗಿ ದುರುಳರನ್ನು ಸದೆಬಡಿಯಲು ಸಮಾಜ ನ್ಯಾಯಾಂಗದೊಟ್ಟಿಗೆ ಕೈ ಜೋಡಿಸಬೇಕಿದೆ. ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಪಾಲಿನ ಕರ್ತವ್ಯ ಸಮರ್ಪಕವಾಗಿ, ಸರಿಯಾಗಿ ಮತ್ತು ನಿರ್ಭಯವಾಗಿ ನಿರ್ವಹಿಸಬೇಕಿದೆ. ಅಂದಾಗ ಮಾತ್ರ ನ್ಯಾಯವಿತರಣಾ ವ್ಯವಸ್ಥೆ ಫಲಪ್ರದ, ಪರಿಣಾಮಕಾರಿ ಹಾಗೂ ಯಶಸ್ವಿಯಾಗಲು ಸಾಧ್ಯ. ವಕೀಲ ವೃಂದ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಬೇಕಿದೆ. ವಿಪಯರ್ಾಸ ನಾವು ಹಲವಾರು ರೀತಿಯಲ್ಲಿ ಬೇರ್ಪಟಿದ್ದೇವೆ ಎಂದರು. 

ಹಿರಿಯ ನ್ಯಾಯವಾದಿ ಹಾಗೂ ಧಾರವಾಡ ಲಾ ಅಕಾಡೆಮಿಯ ಅಧ್ಯಕ್ಷ ಕೆ.ಬಿ. ನಾವಲಗಿಮಠ ಮಾತನಾಡಿ, ಹಲವು ವಿದ್ವಾಂಸರು ಸೇರಿ ಒಂದು ಉತ್ಕೃಷ್ಟ ಸಂವಿಧಾನ ರಚಿಸಲಾಗಿದೆ. ಆದರೆ ಅದನ್ನು ಸರಿಯಾಗಿ ಬಳಸಲಾಗುತ್ತಿಲ್ಲ. ಡಾ. ಬಾಬು ರಾಜೇಂದ್ರ ಪ್ರಸಾದರ ಜನ್ಮದಿನವನ್ನು ವಕೀಲರ ದಿನವೆಂದು ಡಿಸೆಂಬರ 3 ರಂದು ಆಚರಿಸಲಾಗುತ್ತಿದೆ ಎಂದು ಡಾ. ರಾಜೇಂದ್ರ ಪ್ರಸಾದರ ಪಾಂಡಿತ್ಯವನ್ನು ಬಹುವಾಗಿ ಪ್ರಶಂಶಿಸಿದ ಡಾ. ನಾವಲಗಿಮಠ, ಎಂ.ಜಿ. ಅಗಡಿಯವರು ಸತತವಾಗಿ ಐವತ್ತು ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ನಡೆಸಿ, ಧಾರವಾಡದಲ್ಲಿ ನಡೆದ ಹೈಕೋಟರ್್ ಪೀಠ ಸ್ಥಾಪನೆಯ ಚಳುವಳಿಯಲ್ಲಿ ಮುಂಚೂಣಿ ಸ್ಥಾನದಲ್ಲಿ ಇದ್ದುದನ್ನು ಅವರು ಸ್ಮರಿಸಿದರು. 

ಕನರ್ಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂತರ್ಿ ಪಿ.ಜಿ. ಎಂ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಕಾನೂನಿನ ಚೌಕಟ್ಟಿನಲ್ಲೇ ವ್ಯವಹರಿಸಬೇಕಿದೆ. ಸಾಕಷ್ಟು ಜಟಿಲ ಸಮಸ್ಯೆಗಳಿಗೆ ಇತ್ತೀಚೆಗೆ ಪರಿಹಾರ ದೊರಕಿಸಿದ ಶ್ರೇಯಸ್ಸು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಸಲ್ಲುತ್ತದೆ. ಜಗತ್ತಿನಲ್ಲಿ ನಮ್ಮದು ಉತ್ತಮ ಪ್ರಜಾಪ್ರಭುತ್ವವಾಗಿದೆ ಎಂದು ಹೇಳಿದರು. 

 ದತ್ತಿ ದಾನಿ ಬಾಬಣ್ಣ ಅಗಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಎಂ.ಜಿ. ಅಗಡಿ ಅವರ ಭಾವಚಿತ್ರಕ್ಕೆ  ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. 

 ಮೇಘಾ ಕೊತಬಾಳ ಹಾಗೂ ಪ್ರಶಾಂತ ಕುಲಕಣರ್ಿ ಪ್ರಾಥರ್ಿಸಿದರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.  

ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಫುಲ್ಲಾ ನಾಯಕ, ಶಾಂತೇಶ ಗಾಮನಗಟ್ಟಿ, ಸತೀಶ ತುರಮರಿ ಹಾಗೂ ಎನ್.ಆರ್. ಬಾಳಿಕಾಯಿ, ಆರ್.ಯು.ಬೆಳ್ಳಕ್ಕಿ, ಎ. ಜಿ. ಸಬರದ, ಪಿ.ಎನ್. ಕುಸುಗಲ್, ವಕೀಲರ ಸಂಘದ ಉಪಾಧ್ಯಕ್ಷ ರಾಜು ಕೋಟಿ, ಹಿರಿಯ ವಕೀಲರಾದ ಸೋಮಲಿಂಗ ಎಸ್. ಶಿವಳ್ಳಿ, ಸದಾನಂದ ಮುಂದಿನಮನಿ, ಗಂಗಾಧರ ಹೊಸಕೇರಿ, ಎಫ್.ಎಂ. ನದಾಫ್, ರಾಜೇಶ ನಾವಲಗಿಮಠ, ಸುರೇಶ ಅಗಡಿ, ವಸಂತ ಹೊಳೆಯಣ್ಣವರ ಹಾಗೂ ಅಗಡಿ ಪರಿವಾರದವರು ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.