ಜೂ.20 ರಿಂದ ಬೆಟಗೇರಿ ಜಾಗೃತ ಮಾರುತಿ ದೇವರ ಓಕುಳಿ
Betageri Jagrita Maruti Devara Okuli from June 20
ಲೋಕದರ್ಶನ ವರದಿ
ಬೆಟಗೇರಿ 18 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿ ಜೂ.20ರಿಂದ ಜೂ.23 ರವರೆಗೆ ಜರುಗಲಿದೆ. ಜೂ.20ರಂದು ಮುಂಜಾನೆ 7 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಮಹಾ ರುದ್ರಾಭಿಷೇಕ, ಕುಂಕುಮ ಮತ್ತು ಮಹಾಪೂಜೆ, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ, ನಂತರ ಕರಡಿ, ಹಲಗೆ ಮಜಲು ಸೇರಿದಂತೆ ಸಕಲ ವಾಧ್ಯಗಳ ವಾದನ, ಪಲ್ಲಕ್ಕಿ ಉತ್ಸವ ನಡೆಯಲಿದೆ.
ಜೂ.21ರಂದು ಮುಂಜಾನೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 5 ಗಂಟೆಗೆ ನಡು ಓಕುಳಿ. ಜೂ.22 ರಂದು ಮುಂಜಾನೆ 8 ಗಂಟೆಯಿಂದ ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ, ಹರಕೆ ಸಮರೆ್ಣ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರ ಪಲ್ಲಕ್ಕಿ ಪ್ರದಕ್ಷೀಣೆ ಬಳಿಕ ಕಡೆ ಓಕಳಿ ನಡೆಯಲಿದ್ದು, ವಿವಿಧ ಪ್ರಾಣಿಗಳ ಸೊಗಿನ ಕುಣಿತದ ಪ್ರದರ್ಶನ, ಅದೇ ದಿನ ಸಂಜೆ 8 ಗಂಟೆಗೆ ಶ್ರೀಗಳಿಗೆ, ಅನ್ನದಾನಿಗಳಿಗೆ ಸತ್ಕಾರ ಕಾರ್ಯಕ್ರಮದ ಬಳಿಕ ರಾತ್ರಿ 10.30ಕ್ಕೆ ತುಳಸಿಗೇರಿ ಜೈ ಹನುಮಾನ ನಾಟ್ಯ ಸಂಘದವರಿಂದ ಕೃಷ್ಣಪಾರಿಜಾತ ಕಲಾ ಸಂಘದವರಿಂದ ನಾಟಕ ಪ್ರದರ್ಶನ ಜರುಗಲಿದೆ.
ಮಂಗಳವಾರ ಜೂ.23ರಂದು ಮುಂಜಾನೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 4 ಗಂಟೆಗೆ ಜಂಗಿ ಕುಸ್ತಿಗಳು ನಡೆದ ಬಳಿಕ ಸಂಜೆ ಮಾರುತಿ ದೇವರ ದೇವಾಲಯಕ್ಕೆ ಪಲ್ಲಕ್ಕಿ ಪ್ರರ್ದಕ್ಷಣೆ ನಡೆಯಲಿದೆ ಎಂದು ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 