ಬೆಂಗಳೂರು-ಮೈಸೂರು ಎಕ್ಸ್ ಪ್ರಸ್ ವೇ: ಕಳೆದ 3 ವರ್ಷಗಳಲ್ಲಿ 215 ಜನ ಬಲಿ
Bengaluru-Mysore Expressway: 215 people killed in last 3 years
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರಸ್ ವೇನಲ್ಲಿ ಕಳೆದ 3 ವರ್ಷಗಳಲ್ಲಿ 215 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 3 ವರ್ಷಗಳ ಹಿಂದೆ ಉದ್ಘಾಟನೆಗೊಂಡ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಾಕಷ್ಟು ಅವಾಂತರಗಳಿಂದಲೇ ಸದ್ದುಮಾಡಿತ್ತು. ಸಾಲು ಸಾಲು ಅಪಘಾತಗಳ ಹಿನ್ನೆಲೆಯಲ್ಲಿ ಇದನ್ನು ಡೆತ್ವೇ ಎಂದೇ ಕರೆಯಲಾಗುತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ 3 ವರ್ಷಗಳಲ್ಲಿ 215 ಮಂದಿ ಜೀವ ಕಳೆದುಕೊಂಡಿದ್ದಾರೆ.
118
ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ 1674 ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 215 ಮಂದಿ ಸಾವಿಗೀಡಾಗಿದ್ದು, 311 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಸಣ್ಣಪುಟ್ಟ ಗಾಯಾಳುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಅನ್ನು 2 ಹಂತದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತ ಬೆಂಗಳೂರಿನಿಂದ ನಿಡಘಟ್ಟ ವರೆಗೆ, 2ನೇ ಹಂತ ನಿಡಘಟ್ಟದಿಂದ ಮೈಸೂರು ವರೆಗೆ ಇದ್ದು, ಅತಿಹೆಚ್ಚು ಸಾವು ಮತ್ತು ಅಪಘಾತಗಳು ಒಂದನೇ ಹಂತಕ್ಕಿಂತ ಎರಡನೇ ಹಂತದಲ್ಲೇ ಸಂಭವಿಸಿರುವುದು ಅಂಕಿ ಸಂಖ್ಯೆಯಿಂದ ತಿಳಿದು ಬರುತ್ತದೆ.
ಮೊದಲನೇ ಹಂತದ ಎಕ್ಸ್ಪ್ರೆಸ್ ವೇನಲ್ಲಿ 3 ವರ್ಷಗಳಲ್ಲಿ 76 ಮಂದಿ ಸಾವಿಗೀಡಾಗಿದ್ದರೆ, 2ನೇ ಹಂತದಲ್ಲಿ 145 ಮಂದಿ ಸಾವಿಗೀಡಾಗಿದ್ದಾರೆ. ಮಂಡ್ಯ ಜಿಲ್ಲೆ ಎಕ್ಸ್ ಪ್ರಸ್ ವೇನಲ್ಲಿ ಅತಿಹೆಚ್ಚು ಅಪಘಾತ ಸಂಭವಿಸುತ್ತಿರುವುದು ಗಮನಾರ್ಹ. ಹೆದ್ದಾರಿ ನಿರ್ಮಾಣ ಗೊಂಡ ಮೊದಲ ವರ್ಷ 2023ರಲ್ಲಿ ಬೆಂಗಳೂರಿನಿಂದ ನಿಡಘಟ್ಟ ವರೆಗಿನ ಹೆದ್ದಾರಿಯಲ್ಲಿ 33 ಮಂದಿ ಸಾವಿಗೀಡಾಗಿದ್ದಾರೆ, ನಿಡಘಟ್ಟದಿಂದ ಮೈಸೂರು ವರೆಗಿನ ಹೆದ್ದಾರಿಯಲ್ಲಿ 77 ಮಂದಿ ಸಾವಿಗೀಡಾಗಿದ್ದಾರೆ. ಶೇ.50 ರಷ್ಟು ಅಪಘಾತ ಕಡಿಮೆ: 2023ನೇ ಸಾಲಿನಲ್ಲಿ 110 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇದಾದ ಬಳಿಕ ಕೆಲವೊಂದು ಸುಧಾರಣಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಎಕ್ಸ್ಪ್ರೆಸ್ ವೇ ನಲ್ಲಿ ಅಪಘಾತ ನಿಯಂತ್ರಣ ಮಾಡುವ ಸಂಬಂಧ ತಜ್ಞರ ತಂಡವನ್ನು ಕಳುಹಿಸಿ ಬ್ಲಾಕ್ಸ್ಪಾಟ್ಗಳನ್ನು ಗುರುತಿಸಿ ಸುಧಾರಣಾ ಕ್ರಮವನ್ನು ಕೈಗೊಳ್ಳಲು ಸಲಹೆ ನೀಡಿತ್ತು. ವೇಗ ನಿಯಂತ್ರಣಕ್ಕೆ ಎಐ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡ ಬಳಿಕ ಎಕ್ಸ್ ಪ್ರಸ್ ವೇನಲ್ಲಿ ಅಪಘಾತದಲ್ಲಿ ಸಾವಿಗೀಡಾಗುವರ ಸಂಖ್ಯೆ ಕಡಿಮೆಯಾಗಿದ್ದು, 2024ರಲ್ಲಿ 54 ಮಂದಿ, 2025ರ ಅಕ್ಟೋಬರ್ ವರೆಗೆ 51 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಎಕ್ಸ್ಪ್ರೆಸ್ವೇನಲ್ಲಿ 3 ವರ್ಷದಲ್ಲಿ 855 ಕೋಟಿ ರೂ.ಟೋಲ್ ಸಂಗ್ರಹ : ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎನ್ಎಚ್ಎಐಗೆ ಭರ್ಜರಿ ಹಣ ಸಂಗ್ರಹವಾಗುತ್ತಿದೆ. ಎನ್ಎಚ್ಎಐ ಮೂಲಗಳ ಪ್ರಕಾರ ಕಳೆದ 3 ವರ್ಷಗಳಲ್ಲಿ ಈ ಹೆದ್ದಾರಿಯಿಂದ ಸರ್ಕಾರಕ್ಕೆ 855.79 ಕೋಟಿ ರೂ. ಹಣ ಟೋಲ್ ಮೂಲಕ ಸಂಗ್ರಹವಾಗಿದೆ. ಎಕ್ಸ್ಪ್ರೆಸ್ ವೇನಲ್ಲಿ ಪ್ರಯಾಣಿಸುವ ಪ್ರಯಾಣಿಕರು 3 ಕಡೆ ಟೋಲ್ ಶುಲ್ಕ ಪಾವತಿಸಬೇಕಿದೆ. ಮೊದಲ ಹಂತದ ಎಕ್ Õಪ್ರಸ್ ವೇ ಬೆಂಗಳೂರಿನಿಂದ- ನಿಡಘಟ್ಟದ ವರೆಗೆ ಸಂಚರಿಸಲು ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರು ಕಣ್ಮಿಣಕೆ ಗ್ರಾಮದ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿ ಮಾಡಬೇಕು. ಈ ಟೋಲ್ ಪ್ಲಾಜಾದಲ್ಲಿ 3 ವರ್ಷಗಳಲ್ಲಿ 282.14 ಕೋಟಿ ರೂ. ಟೋಲ್ ಶುಲ್ಕ ಸಂಗ್ರಣೆಯಾಗಿದೆ. ಇನ್ನು ಮೈಸೂರು ಕಡೆಯಿಂದ ಬೆಂಗಳೂರಿಗೆ ಹೋಗವವರು ಬಿಡದಿಯ ಶೇಷಗಿರಿ ಹಳ್ಳಿಯ ಬಳಿ ಇರುವ ಟೋಲ್ ಪ್ಲಾಜಾದಲ್ಲಿ 3 ವರ್ಷದಲ್ಲಿ 248.2 ಕೋಟಿ ರೂ. ಸಂಗ್ರಹಣೆಯಾಗಿದೆ. ಇನ್ನು 2ನೇ ಹಂತದ ಎಕ್ಸ್ ಪ್ರಸ್ ವೇ ನಿಡಘಟ್ಟದಿಂದ- ಮೈಸೂರು ವರೆಗೆ ಪ್ರಯಾಣಿಸುವ ವಾಹನಗಳು ಗಣಂಗೂರು ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸಬೇಕಿದ್ದು, 488.81 ಕೋಟಿ ರೂ. ಶುಲ್ಕ ಸಂಗ್ರಹಣೆಯಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 